ಭಾರತವನ್ನು ಬಾಂಗ್ಲಾ, ನೇಪಾಳದಂತೆ ಮಾಡುವುದಾಗಿ ಮತ್ತು ಸಂಸತ್ ಭವನ ಕೆಡವುವುದಾಗಿ ಪ್ರತಿಭಟನಾಕಾರರ ಎಚ್ಚರಿಕೆ
- ನೀಟ್ ಸೇರಿದಂತೆ ದೇಶದ ಪರೀಕ್ಷಾ ಅಕ್ರಮ ಖಂಡಿಸಿ ದೆಹಲಿಯಲ್ಲಿ ಕಾಕ್ರೋಜ್ ಜನತಾ ಪಾರ್ಟಿಯಿಂದ ‘ಚಲೋ ಸಂಸತ್’ ರ‍್ಯಾಲಿ
- ಭಾರತವನ್ನು ಬಾಂಗ್ಲಾ, ನೇಪಾಳದಂತೆ ಮಾಡುವುದಾಗಿ ಮತ್ತು ಸಂಸತ್ ಭವನ ಕೆಡವುವುದಾಗಿ ಪ್ರತಿಭಟನಾಕಾರರ ಎಚ್ಚರಿಕೆ
- ಪೊಲೀಸರಿಂದ ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗ
ನವದೆಹಲಿ: ನೀಟ್ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ಸೋಮವಾರ (ಜು.20) ಜಂತರ್ ಮಂತರ್ನಿಂದ ಸಂಸತ್ ಭವನದವರೆಗೆ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಂಡಿದೆ.
ಈ ಪ್ರತಿಭಟನೆಯ ಮುಖ್ಯ ಉದ್ದೇಶ ದೇಶದ ಶಿಕ್ಷಣ ವ್ಯವಸ್ಥೆಯನ್ನು ಸರಿ ಪಡಿಸುವುದು ಹಾಗೂ ಪ್ರಸ್ತುತ ಕೇಂದ್ರ ಶಿಕ್ಷಣ ಸಚಿವರಾಗಿರುವ ಧಮೇಂದ್ರ ಪ್ರಧಾನ್ ಅವರನ್ನು ಸ್ಥಾನದಿಂದ ಕೆಳಗಿಳಿಸುವುದಾಗಿದೆ. ಆದರೆ ಇಂದು ನಡೆಯುತ್ತಿರುವ ಪ್ರತಿಭಟನಾ ರ‍್ಯಾಲಿಯಲ್ಲಿ ದೇಶದಲ್ಲಿ ಅರಾಜಕತೆ ಉಂಟು ಮಾಡುತ್ತೆವೆ ಎಂಬ ಹೇಳಿಕೆ (Controversial Slogan in Chalo Sansad) ಗಳು ಕೇಳಿ ಬರುತ್ತಿವೆ.
ಭಾರತವನ್ನು ಬಾಂಗ್ಲಾ- ನೇಪಾಳ ಮಾಡುತ್ತೇವೆ!
ಜಂತರ್-ಮಂತರ್ನಿಂದ ಆರಂಭವಾಗಿರುವ ಈ ರ‍್ಯಾಲಿಯು ಸಂಸತ್ ಭವನದ ವರೆಗೆ ನಡೆಯಲಿದೆ ಎಂದು ಹೇಳಲಾಗಿದೆ. ಈ ವೇಳೆ ಪ್ರತಿಭಟನೆಯಲ್ಲಿ ನಿರತರಾಗಿರುವ ಪ್ರತಿಭಟನಾಕಾರರು, ನಾವು ಸಂಸತ್ ಭವನವನ್ನು ಕೆಡವುತ್ತೇವೆ, ಭಾರತದಲ್ಲಿ ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಸಂಭವಿಸಿದ್ದ ಅರಾಜಕತೆಯನ್ನು ನಿರ್ಮಿಸುತ್ತೆವೆಂದು ಹೇಳಿಕೆ ನೀಡುತ್ತಿದ್ದಾರೆ.ಹೀಗಾಗಿ ರಾಜಧಾನಿ ಸುತ್ತ ಬಿಗಿ ಪೊಲೀಸ್ ಬಂಧೋಬಸ್ತ್ ಮಾಡಲಾಗಿದ್ದು, ಈ ರ‍್ಯಾಲಿಯ ಮೇಲೆ ಈಗಾಗಲೇ ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗವನ್ನು ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ, ಪರಿಸರವಾದ ಸೋನಮ್ ವಾಂಗ್ಚುಕ್ 20 ದಿನಗಳವರೆಗೆ ಉಪವಾಸ ಸತ್ಯಾಗ್ರಹವನ್ನು ನಡೆಸಿದ್ದರು. ನಂತರ ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನಲೆ ದೆಹಲಿ ಪೊಲೀಸರು ಶನಿವಾರ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿತ್ತು.
ಈ ಘಟನೆ ಬಳಿಕ ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ಅನಿರ್ದಿಷ್ಟಾವಧಿ ಉಪವಾಸವನ್ನು ಕೈಗೊಳ್ಳುವುದಾಗಿ ಘೋಷಿಸಿದ್ದರು. ಇಂದು ಪ್ರತಿಭಟನಾ ರ‍್ಯಾಲಿ ಆರಂಭಗೊಳ್ಳುತ್ತಲೇ ಸರ್ಕಾರದಿಂದ ಮಾತುಕತೆ ಭರವಸೆ ದೊರೆತ ಹಿನ್ನಲೆ ದೀಪ್ಕೆ ತಮ್ಮ ಉಪವಾಸವನ್ನು ಮೊಟಕು ಗೊಳಿಸಿದ್ದಾರೆ, (ಏಜನ್ಸೀಸ್).