Nana Patekar: ಭಾರತೀಯ ಚಿತ್ರರಂಗದ ಖ್ಯಾತ ನಟ ನಾನಾ ಪಾಟೇಕರ್ (75) ಗುರುವಾರ ಗೋವಾದ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಗೋವಾದ ದೊನಾ ಪೌಲಾದಲ್ಲಿ ಅಕ್ಟೋಬರ್ 4 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ನಟ ಅಲ್ಲಿಗೆ ತೆರಳಿದ್ದರು. ಅದೇ ಅವರ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿತ್ತು.
ಸುದ್ದಿ ಸಂಸ್ಥೆ ಪಿಟಿಐ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ಗೋವಾದಲ್ಲಿ ನಡೆದ ಸಾಮ್ರಾಟ್ ಕ್ಲಬ್ನ ಕಾರ್ಯಕ್ರಮದಲ್ಲಿ ನಾನಾ ಪಾಟೇಕರ್ ಮಾತನಾಡುತ್ತಿರುವುದು ಕಂಡುಬಂದಿದೆ. ಈ ಕಾರ್ಯಕ್ರಮದಲ್ಲಿ ಅವರು ಬಿಳಿ ಕುರ್ತಾ ಮತ್ತು ಬಿಳಿ ಶಾಲು ಧರಿಸಿದ್ದರು. ಗೋವಾದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಸ್ಮರಿಸಿದ ನಟ, ಅವರ ಕೆಲಸದ ಶೈಲಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು. ಮುಂದುವರಿದು ಮಾತನಾಡುತ್ತಾ, ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಈ ಲೋಕವನ್ನು ಬಿಟ್ಟು ಹೋಗಲೇಬೇಕು ಎಂದು ಹೇಳುತ್ತಾ, ನಾನು ನಾಳೆ ಇಲ್ಲಿರುತ್ತೇನೋ ಇಲ್ಲವೋ ನನಗೆ ಗೊತ್ತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸೇರಿದ್ದ ಜನರನ್ನುದ್ದೇಶಿಸಿ ಮರಾಠಿಯಲ್ಲಿ ಮಾತನಾಡಿದ ನಟ, ನಾವೆಲ್ಲರೂ ಒಂದಲ್ಲ ಒಂದು ದಿನ ಹೋಗಲೇಬೇಕು. ನಾಳೆ ನಾನು ಇರುತ್ತೇನೋ ಇಲ್ಲವೋ ನನಗೆ ತಿಳಿದಿಲ್ಲ. ಪ್ರತಿಯೊಬ್ಬರ ಜೀವನವೂ ಆ ಹಂತವನ್ನು ತಲುಪಲೇಬೇಕಾಗುತ್ತದೆ. ಆದರೆ ಅದಕ್ಕೂ ಮುನ್ನ, ನಾನು ಮಾಡಲು ಬಯಸುವುದನ್ನು ಮಾಡಲು ನನಗೆ ಸಾಧ್ಯವಾಗುತ್ತಿದೆಯೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ:ನಟನಾ ಮಾಂತ್ರಿಕ ನಾನಾ ಪಾಟೇಕರ್ ಇನ್ನಿಲ್ಲ: ಹಿರಿಯ ನಟನ ಅಭಿನಯವನ್ನು ನೋಡಲೇಬೇಕಾದ 7 ಸಿನಿಮಾಗಳಿವು..!| Nana Patekar
ಮಣಿಪಾಲ್ ಆಸ್ಪತ್ರೆಯ ಆಂಕೋಲಾಜಿ ವಿಭಾಗದ ಮುಖ್ಯಸ್ಥರಾದ ಡಾ. ಶೇಖರ್ ಸಲ್ಕರ್ ಮಾತನಾಡಿ, 45 ನಿಮಿಷಗಳ ಕಾಲ ನಿರಂತರ ಸಿಪಿಆರ್ ನೀಡಿದರೂ ಅವರನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ ಎಂದರು. ವೈದ್ಯಕೀಯ-ಕಾನೂನು ಪ್ರಕರಣ (MLC) ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ನಾನಾ ಪಾಟೇಕರ್ ಕೊನೆಯದಾಗಿ ಶಾಹಿದ್ ಕಪೂರ್, ತೃಪ್ತಿ ದಿಮ್ರಿ, ಅವಿನಾಶ್ ತಿವಾರಿ ಮತ್ತು ದಿಶಾ ಪಟಾನಿ ಅವರೊಂದಿಗೆ ಒ ರೋಮಿಯೋ (O'Romeo) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
1951 ಜನವರಿ 1 ರಂದು ಮಹಾರಾಷ್ಟ್ರದಲ್ಲಿ ವಿಶ್ವನಾಥ್ ಪಾಟೇಕರ್ ಜನಿಸಿದರು. ಚಲನಚಿತ್ರಗಳಲ್ಲಿನ ತಮ್ಮ ಶಕ್ತಿಶಾಲಿ ಮತ್ತು ವಾಸ್ತವಿಕ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದರು. ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ದಶಕಗಳ ಕಾಲ ವೃತ್ತಿಜೀವನ ನಡೆಸಿದ ನಾನಾ ಪಾಟೇಕರ್ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ಪಾತ್ರಗಳನ್ನು ಮಾಡಿದ್ದಾರೆ. ಅವರ ವಿಶಿಷ್ಟ ಸಂಭಾಷಣೆ ಶೈಲಿಯು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು ಹಾಗೂ ಮಿಮಿಕ್ರಿ ಕಲಾವಿದರು ಅವರನ್ನು ಅನುಕರಿಸುವುದು ಒಂದು ದೊಡ್ಡ ಸವಾಲಾಗಿತ್ತು.
ನಾನಾ ಪಾಟೇಕರ್ 1978 ರಲ್ಲಿ ಗಮನ್ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಸಲಾಂ ಬಾಂಬೆ ಮತ್ತು ಪರಿಂದಾ ಚಿತ್ರರಿಗೆ ಅವರಿಗೆ ಹೆಚ್ಚಿನ ಗೌರವ ತಂದವು. ಇದರ ನಂತರ ಅವರು ತಿರಂಗಾ, ಕ್ರಾಂತಿವೀರ್, ಖಾಮೋಶಿ: ದಿ ಮ್ಯೂಸಿಕಲ್, ಯಶವಂತ್, ಅಬ್ ತಕ್ ಛಪ್ಪನ್, ಅಪಹರಣ್ ಮತ್ತು ರಾಜನೀತಿ ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ನಾನಾ ಪಾಟೇಕರ್ ಮರಾಠಿ ಚಿತ್ರರಂಗ ಹಾಗೂ ರಂಗಭೂಮಿಯಲ್ಲೂ ತಮ್ಮ ಛಾಪು ಮೂಡಿಸಿದ್ದು, ನಿರ್ಮಾಪಕರಾಗಿಯೂ ಹೆಜ್ಜೆ ಹಾಕಿ 1991 ರಲ್ಲಿ ಪ್ರಹಾರ್: ದಿ ಫೈನಲ್ ಅಟ್ಯಾಕ್ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ಅವರನ್ನು ಗಂಭೀರ ಪಾತ್ರಗಳಲ್ಲಿ ನೋಡಿದವರಿಗೆ ವೆಲ್ಕಮ್ ಫ್ರ್ಯಾಂಚೈಸ್‌ನಲ್ಲಿ ಸಾಂಪ್ರದಾಯಿಕ ಉದಯ ಶೆಟ್ಟಿ ಪಾತ್ರವನ್ನು ನಿರ್ವಹಿಸಿದಾಗ ದೊಡ್ಡ ಅಚ್ಚರಿಯೇ ಕಾದಿತ್ತು. ಈ ಪಾತ್ರವು ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಹಬ್ಬದ ವಸ್ತುವಾಗಿತ್ತು.
ಸಿನೆಮಾ ಮತ್ತು ಕಲೆಗೆ ನೀಡಿದ ಕೊಡುಗೆಗಾಗಿ 2013 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಹಾಗೂ ಹಲವಾರು ಪ್ರತಿಷ್ಠಿತ ಗೌರವಗಳನ್ನು ಪಡೆದಿದ್ದಾರೆ. ಇದಷ್ಟೆ ಅಲ್ಲದೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಹಾಗೂ ರೈತರಿಗೆ ಬೆಂಬಲ ನೀಡುವುದಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಪಾಕಿಸ್ತಾನದ ಶೆಲ್ ದಾಳಿಯಿಂದ ನಷ್ಟ ಅನುಭವಿಸಿದ ಕುಟುಂಬಗಳನ್ನು ಭೇಟಿಯಾಗಿ, ಅವರಿಗೆ ಆರ್ಥಿಕ ನೆರವು ಒದಗಿಸಿದ ತಮ್ಮ ಎನ್‌ಜಿಒ ಮೂಲಕವೂ ಅವರು ಗಮನಸೆಳೆದಿದ್ದಾರೆ(ಏಜೆನ್ಸೀಸ್).