

ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ನಿಧನ.
ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ ಎಂದು ಗೋವಾ ಸಿಎಂ ಸಂತಾಪ.
ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅತ್ಯುತ್ತಮ ಮಾನವ ಎಂದ ಗೋವಾ ಸಿಎಂ.
ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ (75) ನಿಧನರಾಗಿದ್ದಾರೆ. ಗೋವಾದ ದೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಬೆಳಿಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅವರನ್ನು ಕೂಡಲೇ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಸುಮಾರು 45 ನಿಮಿಷಗಳ ಕಾಲ CPR ಮಾಡಿ ಉಳಿಸಲು ವೈದ್ಯರು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ, ಬೆಳಿಗ್ಗೆ 5:20ಕ್ಕೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಅಧಿಕೃತವಾಗಿ ಘೋಷಿಸಿದ್ದಾರೆ.
ಈ ಕುರಿತು ಮಾತನಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್, 'ನಾನಾ ಪಾಟೇಕರ್ ನನಗೆ ಒಳ್ಳೆಯ ಸ್ನೇಹಿತರಾಗಿದ್ದರು. ಪ್ರತಿ ಬಾರಿ ಗೋವಾಕ್ಕೆ ಬಂದಾಗಲೂ ಖುದ್ದಾಗಿ ನನ್ನನ್ನು ಸಂಪರ್ಕಿಸುತ್ತಿದ್ದರು. ನಾನು ಒಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಅವರ ಕುಟುಂಬಸ್ಥರ ಜೊತೆಗೆ ನಾನಿದ್ದೇನೆ' ಎಂದು ಸಂತಾಪ ಸೂಚಿಸಿದ್ದಾರೆ.
'ನಾನಾ ಪಾಟೇಕರ್ ಅವರು ಸಿನಿಮಾಕ್ಕೆ ಮಾತ್ರ ಸೀಮಿತರಾಗಿರಲಿಲ್ಲ. 'ನಾನಾ ಪಾಟೇಕರ್ ಫೌಂಡೇಶನ್' ಮೂಲಕ ಅವರು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಗೋವಾದಲ್ಲಿ ತಮ್ಮ ಸಾಮಾಜಿಕ ಕಾರ್ಯಗಳನ್ನು ಮತ್ತಷ್ಟು ವಿಸ್ತರಿಸಲು ಯೋಚಿಸುತ್ತಿದ್ದರು. ಅವರು ನಮ್ಮನ್ನು ಅಗಲಿದ್ದು ತುಂಬಾ ದುಃಖಕರ' ಎಂದು ನುಡಿದರು ಗೋವಾ ಸಿಎಂ.
'ಕಳೆದ ಕೆಲವು ದಿನದ ಹಿಂದೆ ಕೊಂಕಣಿ ಕಲಾವಿದರೊಂದಿಗೆ ನಾನಾ ಪಾಟೇಕರ್ ನೃತ್ಯ ಮಾಡಿದ್ದನ್ನು ನೋಡಿದೆ. ನಾನಾ ಪಾಟೆಕರ್ ಅವರ ಕೊಡುಗೆಯನ್ನು ಕೇವಲ ಬಾಲಿವುಡ್‌ಗೆ ಸೀಮಿತಗೊಳಿಸಲು ಸಾಧ್ಯವಿಲ್ಲ ಮರಾಠಿ ಚಿತ್ರರಂಗಕ್ಕೆ, ಅದರಲ್ಲೂ ವಿಶೇಷವಾಗಿ 'ನಟಸಾಮ್ರಾಟ್' ಚಿತ್ರದಲ್ಲಿನ ಅವರ ಅಭಿನಯ ಎಂದಿಗೂ ಮರೆಯಲಾಗದ್ದು' ಎಂದು ನೆನಪಿಸಿಕೊಂಡರು.
'ಗೋವಾವು ನಾನಾ ಪಾಟೆಕರ್ ಅವರನ್ನು ಒಬ್ಬ ಮಹಾನ್ ನಟನಾಗಿ ಮಾತ್ರವಲ್ಲದೆ, ಅತ್ಯುತ್ತಮ ಮಾನವನಾಗಿ ಮತ್ತು ಸಮಾಜ ಸೇವಕನಾಗಿ ಸದಾ ನೆನಪಿನಲ್ಲಿಡಲಿದೆ ಎಂದು ಸಿಎಂ ಪ್ರಮೋದ್ ಸಾವಂತ್ ಅಭಿಪ್ರಾಯಪಟ್ಟಿದ್ದಾರೆ. ನಾನಾ ಪಾಟೇಕರ್ ಎಂದೆಂದಿಗೂ ಗೋವಾದ ಜನರ ಮನಸಿನಲ್ಲಿ ಇರುತ್ತಾರೆ' ಎಂದು ಹೇಳಿದರು.
ಹಿರಿಯ ನಟ ನಾನಾ ಪಾಟೇಕರ್ ಅವರ ನಿಧನದ ಸುದ್ದಿ ತಿಳಿದು ಆಘಾತ, ತೀವ್ರ ದುಃಖವನ್ನು ಹೊತ್ತು ತಂದಿದೆ. ರಂಗಭೂಮಿ, ಹಿಂದಿ ಮತ್ತು ಮರಾಠಿ ಚಿತ್ರರಂಗದಾದ್ಯಂತ ಅವರ ಗಮನಾರ್ಹ ಪಯಣ, ಅವರ ಶಕ್ತಿಶಾಲಿ ಅಭಿನಯ ಮತ್ತು ವಿಶಿಷ್ಟ ಕಲಾವೈಭವವು ಭಾರತೀಯ ಚಿತ್ರರಂಗದ ಮೇಲೆ ಅಳಿಸಲಾಗದ ಮುದ್ರೆಯನ್ನು ಮೂಡಿಸಿದೆ. ಅವರ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ, (ಏಜೆನ್ಸೀಸ್).