ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಡೆಬೋಸ್ಮಿತಾ ಪಾಲ್ ಭೀಕರ ಕೊಲೆ 
ದೇಶ

ಆಸ್ತಿ ಮಾರಾಟಕ್ಕೆ ಒಪ್ಪದಿದ್ದದ್ದೇ ತಪ್ಪಾಯ್ತಾ? ದೆಹಲಿ ಪ್ರೊಫೆಸರ್ ಕೊಲೆ ಪ್ರಕರಣ; ಪಶ್ಚಿಮ ಬಂಗಾಳದ ಬಾಡಿಗೆದಾರ ದಂಪತಿ ಅರೆಸ್ಟ್! DU Professor Murder

ಪ್ರಮುಖ ಮುಖ್ಯಾಂಶಗಳು

  • ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಡೆಬೋಸ್ಮಿತಾ ಪಾಲ್ ಭೀಕರ ಕೊಲೆ
  • ಆಸ್ತಿಗಾಗಿ ತಲೆಗೆ ಹೊಡೆದು ಕೊಂದ ಪಶ್ಚಿಮ ಬಂಗಾಳದ ಬಾಡಿಗೆದಾರ ದಂಪತಿ
  • ಪೊಲೀಸ್​ ವಿಚಾರಣೆಯಲ್ಲಿ ಬಯಲಾದ ಭೀಕರ ಸತ್ಯ
ನವದೆಹಲಿ: ಕೆಲ ದಿನಗಳ ಹಿಂದೆ ದೆಹಲಿ ವಿಶ್ವವಿದ್ಯಾಲಯದ ಶಿವಾಜಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡೆಬೋಸ್ಮಿತಾ ಪಾಲ್ ಎಂಬಾಕೆಯ ಕೊಲೆ ಪ್ರಕರಣ (DU Professor Murder) ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ದಂಪತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದೀಗ ಕೊಲೆಯ ಸಂಪೂರ್ಣ ಸತ್ಯಾಸತ್ಯತೆ ಬಯಲಾಗಿದೆ.

ಆಸ್ತಿ ವಿವಾದ ಕೊಲೆಯಲ್ಲಿ ಅಂತ್ಯ!

ಪೂರ್ವ ದೆಹಲಿಯ ವಸುಂಧರಾ ಎನ್‌ಕ್ಲೇವ್‌ನ ಸತ್ಯಂ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಡೆಬೋಸ್ಮಿತಾ ಪಾಲ್ ನಿವಾಸಕ್ಕೆ ಬಂಧಿತ ಆರೋಪಿಗಳು ಬಂದಿದ್ದಾರೆ. ಜೂನ್​ 3 ರಂದು ಕೊಲೆ ನಡೆದಿದ್ದು, ಮಾರನೇ ದಿನ (ಜೂನ್​.4) ಮೃತ ದೇಹ ಪತ್ತೆಯಾಗಿದೆ.
ಕೊಲೆಯಾದ ಡೆಬೋಸ್ಮಿತಾ ಪಾಲ್, ಇಕೆ ಕಲ್ಕತ್ತಾ ಮೂಲದವಳಾಗಿದ್ದು, ತವರಿನಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿ ಇವರಿತ್ತು. ಕೊಲೆ ಮಾಡಿದ ದಂಪತಿಗಳು ಹಲವು ವರ್ಷಗಳಿಂದ ಪಾಲ್​ಳ ಪುರಾತನ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿದ್ದು, ಪಾಲ್​ ಅವರ ಆಸ್ತಿಯನ್ನು ಖರೀದಿಸಲು ಮುಂದಾಗಿದ್ದರು.
ಬಹಳ ವರ್ಷಗಳಿಂದ ದೆಹಲಿಯಲ್ಲಿ ಸೆಟೆಲ್​ ಆಗಿರುವ ಪಾಲ್​ಳ ಕುಟುಂಬ ಈ ಪುರಾತನ ಆಸತಿಯನ್ನು ಮಾರಲು ಮುಂದಾಗಿದ್ದರು. ಆದರೆ ಇದಕ್ಕೆ ಡೆಬೋಸ್ಮಿತಾ ಒಪ್ಪದ ಕಾರಣ ಆಸ್ತಿ ಮಾರಾಟ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ತಮ್ಮ ಖರೀದಿಗೆ ವಿರೋಧ ವ್ಯಕ್ತ ಪಡಿಸುತ್ತಿದ್ದ ಡೆಬೋಸ್ಮಿತಾಳನ್ನು ಕೊಲೆ ಮಾಡಿದ್ದಾಗಿ ಆರೋಪಿಗಳು ಪೊಲೀಸರಲ್ಲಿ ಹೇಳಿದ್ದಾರೆ.

ಮೃತದೇಹ ಪತ್ತೆಯಾದದ್ದು ಹೇಗೆ?

ಡೆಬೋಸ್ಮಿತಾ ಅವರ ಸಹೋದರಿ ದೇವರತಿ ಪಾಲ್ ಹಲವು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ದೊರೆಯದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಮನೆಗೆ ತೆರಳಿ ನೋಡಿದಾಗ ಹೊರಗಿನಿಂದ ಬೀಗ ಹಾಕಲಾಗಿತ್ತು. ಒಳಗೆ ಪ್ರವೇಶಿಸಿದ ವೇಳೆ ಡೆಬೋಸ್ಮಿತಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತ್ತು.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಭಾರವಾದ ವಸ್ತುವಿನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ತಲೆಯ ಭಾಗದಲ್ಲಿ ಗಂಭೀರ ಗಾಯ ಕಂಡುಬಂದಿದ್ದು, ಕೈ ಮಣಿಕಟ್ಟಿನ ನರಗಳು ಕೂಡ ಕತ್ತರಿಸಲ್ಪಟ್ಟಿರುವುದು ಪತ್ತೆಯಾಗಿತ್ತು, (ಏಜನ್ಸೀಸ್​).