ತಾಯಿಯ ಕೈನಿಂದ ದುಬಾರಿ ಐಫೋನ್ ತೆಗೆದುಕೊಂಡು ನೀರಿಗೆ ಎಸೆದ ಮಗು! ಮುಂದೇನಾಯ್ತು ನೀವೇ ನೋಡಿ...iPhone
- ಈ ಡಿಜಿಟಲ್ ಜಗತ್ತಿನಲ್ಲಿ ದಿನನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ
- ಕೆಲವು ವಿಡಿಯೋಗಳು ವಿಶೇಷ ಕಾರಣಕ್ಕೆ ನೆಟ್ಟಿಗರ ಗಮನ ಸೆಳೆದು ಕ್ಷಣ ಮಾತ್ರದಲ್ಲಿ ವೈರಲ್ ಆಗಿಬಿಡುತ್ತವೆ
- ಇದೀಗ 10 ಸೆಕೆಂಡುಗಳ ಪುಟ್ಟ ವಿಡಿಯೋವೊಂದು ಎಕ್ಸ್ ವೇದಿಕೆಯಲ್ಲಿ ಭಾರಿ ಸದ್ದು ಮಾಡುತ್ತಿದೆ
- ಮಗುವೊಂದು ತನ್ನ ತಾಯಿಯ ಐಫೋನ್ ಅನ್ನು ನೀರಿಗೆ ಎಸೆಯುವ ವಿಡಿಯೋ ವೈರಲ್ ಆಗಿದೆ
iPhone : ಈ ಡಿಜಿಟಲ್ ಜಗತ್ತಿನಲ್ಲಿ ದಿನನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಆದರೆ, ಕೆಲವು ವಿಡಿಯೋಗಳು ವಿಶೇಷ ಕಾರಣಕ್ಕೆ ನೆಟ್ಟಿಗರ ಗಮನ ಸೆಳೆದು ಕ್ಷಣ ಮಾತ್ರದಲ್ಲಿ ವೈರಲ್ ಆಗಿಬಿಡುತ್ತವೆ. ಸದ್ಯ ಅಂತಹದ್ದೇ ಸಾಲಿಗೆ ಸೇರುವ ಕೇವಲ 10 ಸೆಕೆಂಡುಗಳ ಪುಟ್ಟ ವಿಡಿಯೋವೊಂದು ಎಕ್ಸ್ ವೇದಿಕೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.
ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಒಂದು ಕಡೆ ಮುಖದಲ್ಲಿ ನಗು ತರಿಸಿದರೆ, ಮತ್ತೊಂದೆಡೆ ಪಾಲಕರು ತಮ್ಮ ಮಕ್ಕಳ ವಿಷಯದಲ್ಲಿ ಎಷ್ಟು ಜಾಗರೂಕರಾಗಿರಬೇಕು ಎಂಬ ಅತ್ಯಂತ ದೊಡ್ಡ ಮತ್ತು ಮೌಲ್ಯಯುತವಾದ ಪಾಠವನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಡುತ್ತದೆ!
ಅಷ್ಟಕ್ಕೂ ನಡೆದಿದ್ದೇನು?
ವೈರಲ್ ಆಗಿರುವ ಆ ವಿಡಿಯೋದಲ್ಲಿ, ಮಹಿಳೆಯೊಬ್ಬರು ತಮ್ಮ ಪುಟ್ಟ ಮಗನೊಂದಿಗೆ ಬೋಟಿಂಗ್ ಪ್ರವಾಸವನ್ನು ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು. ಮಗನನ್ನು ಮಡಿಲಲ್ಲಿ ಕೂರಿಸಿಕೊಂಡಿದ್ದ ಮಹಿಳೆಯ ಒಂದು ಕೈಯಲ್ಲಿ ದುಬಾರಿ ಐಫೋನ್ ಇರುತ್ತದೆ. ಬೋಟಿಂಗ್ ಮಾಡುವಾಗ ಮಗ ತಾಯಿಯ ಬಳಿ ಫೋನ್‌ಗಾಗಿ ಹಠ ಮಾಡಲು ಶುರು ಮಾಡುತ್ತಾನೆ. ಮಗನ ಆಸೆಯನ್ನು ಈಡೇರಿಸಲು ತಾಯಿ ಕೂಡ ಯಾವುದೇ ಯೋಚನೆ ಮಾಡದೆ ಫೋನನ್ನ ಅವನ ಕೈಗೆ ಕೊಡುತ್ತಾಳೆ. ಆದರೆ, ಮುಂದಿನ ಕ್ಷಣವೇ ನಡೆದ ಘಟನೆ ಆ ತಾಯಿಯನ್ನು ಚಿಂತಿಸುವಂತೆ ಮಾಡುತ್ತದೆ. ಫೋನ್ ಕೈಗೆ ಸಿಗುತ್ತಿದ್ದಂತೆ, ಆ ಮುಗ್ಧ ಬಾಲಕ ಒಂದು ಕ್ಷಣವೂ ಯೋಚಿಸದೆ ನೇರವಾಗಿ ನೀರಿಗೆ ಎಸೆದುಬಿಡುತ್ತಾನೆ. ಇದನ್ನು ನೋಡಿ ತಾಯಿ ದಿಕ್ಕೆಟ್ಟು ಬೆಚ್ಚಿಬೀಳುತ್ತಾಳೆ.
ನಗು ಮತ್ತು ಶಾಕ್ ಎರಡನ್ನೂ ಒಟ್ಟಿಗೆ ನೀಡುವ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ '@yajnshri' ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದ್ದು, "ಬೋಟಿಂಗ್ ಮಾಡುವಾಗ ತಾಯಿಯ ಐಫೋನ್ ಅನ್ನು ಕೆರೆಗೆ ಎಸೆದ ಹುಡುಗ" ಎಂಬ ಕ್ಯಾಪ್ಷನ್ ಬರೆಯಲಾಗಿದೆ. ಈಗಾಗಲೇ ಸಾವಿರಾರು ವೀಕ್ಷಣೆಗಳು ಹಾಗೂ ಲೈಕ್ಸ್ ಗಿಟ್ಟಿಸಿಕೊಂಡು ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿರುವ ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಈ ವಿಡಿಯೋ ನೋಡಿದ ಜಾಲತಾಣದ ಮಂದಿ ಕಮೆಂಟ್‌ಗಳ ಸುರಿಮಳೆಗೈಯುತ್ತಿದ್ದು, ಸಖತ್ ಮಜಾವಾದ ಪ್ರತ್ರಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬ ಬಳಕೆದಾರ, "ಆ ಹುಡುಗ ತನ್ನ ಮನಸ್ಸಿನಲ್ಲಿ 'ಅಮ್ಮ ಬರೀ ಫೋಟೋನೇ ತಗೋತಾ ಇದ್ರು, ಈಗ ನೀರೊಳಗಿಂದ ತೆಗೆದು ಫೋಟೋ ತೋರಿಸಿ ನೋಡೋಣ!' ಎಂದುಕೊಂಡಿರಬೇಕು" ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಮತ್ತೊಬ್ಬರು, "ಅಮ್ಮನ ಐಫೋನ್ ಏನೋ ನೀರಿಗೆ ಬಿತ್ತು, ಆದರೆ ಅಪ್ಪ ಮಾತ್ರ ವೀವ್ಸ್ ಮತ್ತು ಲೈಕ್ಸ್ ಗಿಟ್ಟಿಸಿಕೊಳ್ಳಲು ಈ ವಿಡಿಯೋವನ್ನು ಇಂಟರ್ನೆಟ್‌ಗೆ ಅಪ್‌ಲೋಡ್ ಮಾಡಿಬಿಟ್ಟರಲ್ಲಾ!" ಎಂದು ಕಾಲೆಳೆದಿದ್ದಾರೆ. ಇನ್ನೊಬ್ಬ ನೆಟ್ಟಿಗರಂತೂ ಒಂದು ಹೆಜ್ಜೆ ಮುಂದೆ ಹೋಗಿ, "ನಾನು ಆ ಪುಟ್ಟ ಹುಡುಗನನ್ನು ಖಂಡಿತ ದೂಷಿಸಲ್ಲ, ಪ್ರಕೃತಿಯ ಸೌಂದರ್ಯವನ್ನು ಸವಿಯುವಾಗ ಯಾವುದೇ ಡಿಸ್ಟ್ರ್ಯಾಕ್ಷನ್ ಇರಬಾರದು ಎಂದು ಅವನು ಹಾಗೆ ಮಾಡಿದ್ದಾನೆ ಅಷ್ಟೇ" ಎಂದು ಹುಡುಗನ ಪರ ಬ್ಯಾಟ್ ಬೀಸಿದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಡಿಯೋ ಎಷ್ಟು ನಗು ಉಕ್ಕಿಸುತ್ತದೆಯೋ, ಅಷ್ಟೇ ಮಟ್ಟಿಗೆ ಹೆತ್ತವರಿಗೆ ಒಂದು ಪ್ರಮುಖ ಎಚ್ಚರಿಕೆಯ ಗಂಟೆಯಾಗಿದೆ. ಸಣ್ಣ ಮಕ್ಕಳ ಕೈಗೆ ದುಬಾರಿ ವಸ್ತುಗಳನ್ನು ಅಥವಾ ಮೊಬೈಲ್ ಫೋನ್‌ಗಳನ್ನು ಯೋಚನೆ ಮಾಡದೆ ಕೊಡುವುದು ಎಷ್ಟು ದೊಡ್ಡ ಕಂಟಕವಾಗಿ ಪರಿಣಮಿಸಬಹುದು ಮತ್ತು ಅದು ಜೇಬಿಗೆ ಹೇಗೆ ಕತ್ತರಿ ಹಾಕಬಹುದು ಎಂಬುದಕ್ಕೆ ಈ ಘಟನೆಯೇ ಅತ್ಯುತ್ತಮ ಮತ್ತು ಜೀವಂತ ಉದಾಹರಣೆಯಾಗಿದೆ, (ಏಜೆನ್ಸೀಸ್).