ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ಮತ್ತು ಸಿಎಂ ವಿಜಯ್ 
ದೇಶ

ವೀರಮಣಿ ಪೋಕ್ಸೊ ಪ್ರಕರಣ; ಸ್ಕ್ರಿಪ್ಟ್ ಚೇಂಜ್​ ಮಾಡಿರಲಿಲ್ಲವೇ? ಸ್ವಲ್ಪ ದಿನ ಪತ್ರಿಕೆಗಳನ್ನು ಓದಿ: ಸಿಎಂ ವಿಜಯ್​ಗೆ ಎಂ.ಕೆ.ಸ್ಟಾಲಿನ್ ಟಾಂಗ್ |M K Stalin

ತಮಿಳುನಾಡಿನ ಗ್ರಾನೈಟ್​ ಉದ್ಯಮಿ ಹಾಗೂ ಜೆಮ್​ ಗ್ರೂಪ್​ನ ವೀರಮಣಿಯ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರಾಂತಕಂ ಉಪಚುನಾವಣಾ ಪ್ರಚಾರದ ವೇಳೆ ಸ್ಟಾಲಿನ್ ಸರ್ ಯಾಕೆ ಮೌನವಾಗಿದ್ದೀರಿ ಮಾತನಾಡಿ ಎಂಬ ಸಿಎಂ ವಿಜಯ್​ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್, ಪ್ರಕರಣ ಪ್ರಸ್ತಾಪಿಸುವ ಮುನ್ನ ಮುಖ್ಯಮಂತ್ರಿಯ ಸ್ಕ್ರಿಪ್ಟ್ ಚೇಂಜ್ ಮಾಡಿರಲಿಲ್ಲವೇ? ಸ್ವಲ್ಪ ದಿನಪತ್ರಿಕೆಗಳನ್ನು ಓದಿ ಎಂದು ಟಾಂಗ್ ನೀಡಿದ್ದಾರೆ.

ಚೆನ್ನೈ: ತಮಿಳುನಾಡಿನ ಗ್ರಾನೈಟ್​ ಉದ್ಯಮಿ ಹಾಗೂ ಜೆಮ್​ ಗ್ರೂಪ್​ನ ವೀರಮಣಿಯ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರಾಂತಕಂ ಉಪಚುನಾವಣಾ ಪ್ರಚಾರದ ವೇಳೆ ಸ್ಟಾಲಿನ್ ಸರ್ ಯಾಕೆ ಮೌನವಾಗಿದ್ದೀರಿ ಮಾತನಾಡಿ ಎಂಬ ಸಿಎಂ ವಿಜಯ್​ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಎಂಕೆ ಮುಖ್ಯಸ್ಥ ಮತ್ತು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್, ಪ್ರಕರಣ ಪ್ರಸ್ತಾಪಿಸುವ ಮುನ್ನ ಮುಖ್ಯಮಂತ್ರಿಯ ಸ್ಕ್ರಿಪ್ಟ್ ಚೇಂಜ್ ಮಾಡಿರಲಿಲ್ಲವೇ? ಸ್ವಲ್ಪ ದಿನಪತ್ರಿಕೆಗಳನ್ನು ಓದಿ ಎಂದು ಟಾಂಗ್ ನೀಡಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ನಾನು ಈಗಾಗಲೇ ಈ ಬಗ್ಗೆ ವಿವರವಾಗಿ ಮಾತನಾಡಿದ್ದೇನೆ. ನೀವು ಸುದ್ದಿ ಚಾನಲ್​ಗಳನ್ನು ನೋಡುವುದಿಲ್ಲ ಅಥವಾ ದಿನಪತ್ರಿಕೆಗಳನ್ನು ಓದುವುದಿಲ್ಲ ಎಂದು ತೋರುತ್ತದೆ. ಒಂದು ವೇಳೆ ನೀವು ಪತ್ರಿಕೆಗಳನ್ನು ಓದಿದ್ದಿದ್ದರೆ, ನಿಮಗೆ ಈ ವಿಷಯ ತಿಳಿದಿರುತ್ತಿತ್ತು. ಪ್ರತಿದಿನ ಪತ್ರಿಕೆಗಳನ್ನು ಓದಿ. ಅಲ್ಲದೇ ಈ ಪ್ರಕರಣವನ್ನು ರಾಜಕೀಯಗೊಳಿಸಬಾರದೆಂದು ಹೈಕೋರ್ಟ್ ಸಲಹೆ ನೀಡಿದೆ ಎಂಬ ವಿಷಯವನ್ನು ಅಧಿಕಾರಿಗಳು ನಿಮಗೆ ತಿಳಿಸಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಮುಂದುವರೆದು ವಿಜಯ್ ಅವರ ದುಷ್ಟಶಕ್ತಿ ಮಾತನ್ನು ಟೀಕಿಸಿದ ಅವರು, ಮಾಜಿ ಎಐಎಡಿಎಂಕೆ ಶಾಸಕಿ ಹಾಗೂ ಮಧುರಾಂತಕಂನಿಂದ ಟಿವಿಕೆ (TVK) ಅಭ್ಯರ್ಥಿಯಾಗಿರುವ ಮರಗಥಂ ಕುಮಾರವೇಲ್ ಅವರನ್ನು ತಮ್ಮ ಪಕ್ಕದಲ್ಲೇ ಇರಿಸಿಕೊಂಡು ತಮ್ಮ ಪಕ್ಷವನ್ನು ಶುದ್ಧ ಶಕ್ತಿ ಮತ್ತು ಡಿಎಂಕೆಯನ್ನು ದುಷ್ಟ ಶಕ್ತಿ ಎಂದು ಟಿವಿಕೆ ಮುಖ್ಯಸ್ಥರು ಹೇಗೆ ಕರೆಯಲು ಸಾಧ್ಯ? ಎಂದಿದ್ದಾರೆ.

ಡಿಎಂಕೆ ಮತ್ತು ಬಿಜೆಪಿ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂಬ ಹೇಳಿಕೆಗೆ ಕಿಡಿಕಾರಿದ ಅವರು, ನಿಮ್ಮ ಪಕ್ಷದ ಸ್ಥಾಪನೆಯಾದಾಗಿನಿಂದ ನೀವು ಎಷ್ಟು ಬಾರಿ ಬಿಜೆಪಿಯ ವಿರುದ್ಧ ಮಾತನಾಡಿದ್ದೀರಿ? ಬಿಜೆಪಿಯ ವಿರುದ್ಧ ಎಷ್ಟು ಪ್ರತಿಭಟನೆಗಳನ್ನು ನಡೆಸಿದ್ದೀರಿ? ಎಂದು ವಾಗ್ದಾಳಿ ನಡೆಸಿದ್ದಾರೆ.

ಡಿಎಂಕೆ ನಾಯಕರು ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸ್ಟಾಲಿನ್, ಅವರ ಪರವಾಗಿ ನಿಂದನೆಗಳನ್ನು ಮಾಡುವವರ ದಾಖಲೆಯನ್ನು ಮೊದಲು ಪರಿಶೀಲಿಸಿ ಎಂದರು. ವಿಜಯ್ ಅವರ ಪ್ರಚಾರದ ವೇಳೆ ಕರೂರ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟ ಘಟನೆಯನ್ನು ಡಿಎಂಕೆ ರಾಜಕೀಯಗೊಳಿಸಲಿಲ್ಲ. ಸಿಎಂ ಆಗಿ ಜವಾಬ್ದಾರಿಗೆ ತಕ್ಕ ಘನತೆಯಿಂದ ಮಾತನಾಡುತ್ತಿದ್ದೀರಾ ಎಂಬುದನ್ನು ದಯವಿಟ್ಟು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಹೇಳಿದ್ದಾರೆ (ಏಜೆನ್ಸೀಸ್).