ದೇಶ

ಹೆದ್ದಾರಿ ಸೂಚನಾ ಬೋರ್ಡ್​​ನಲ್ಲಿ ಹಿಂದಿ ಬಳಕೆ: ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದ ತಮಿಳುನಾಡು ಸರ್ಕಾರ | Hindi

ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾಥನ್‌ಕುಲಂ ಬಳಿಯ ರಾಜ್ಯ ಹೆದ್ದಾರಿ 93 (SH-93) ರಲ್ಲಿ ಹೊಸದಾಗಿ ಅಳವಡಿಸಲಾದ ಸೂಚನಾ ಬೋರ್ಡ್​ನಲ್ಲಿ ಹಿಂದಿ ಭಾಷೆ ಬಳಸಿದ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ಪ್ರತಿಪಕ್ಷಗಳಿಂದ ವಿರೋಧ ಮತ್ತು ರಾಜಕೀಯ ವಿವಾದ ಹುಟ್ಟು ಹಾಕುತ್ತಿದ್ದಂತೆ ಟಿವಿಕೆ ಸರ್ಕಾರ, ಶುಕ್ರವಾರ(ಅ. 02) ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ಚೆನ್ನೈ: ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾಥನ್‌ಕುಲಂ ಬಳಿಯ ರಾಜ್ಯ ಹೆದ್ದಾರಿ 93 (SH-93) ರಲ್ಲಿ ಹೊಸದಾಗಿ ಅಳವಡಿಸಲಾದ ಸೂಚನಾ ಬೋರ್ಡ್​ನಲ್ಲಿ ಹಿಂದಿ ಭಾಷೆ ಬಳಸಿದ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ಪ್ರತಿಪಕ್ಷಗಳಿಂದ ವಿರೋಧ ಮತ್ತು ರಾಜಕೀಯ ವಿವಾದ ಹುಟ್ಟು ಹಾಕುತ್ತಿದ್ದಂತೆ ಟಿವಿಕೆ ಸರ್ಕಾರ, ಶುಕ್ರವಾರ(ಅ. 02) ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ಅಲ್ವಾರ್‌ತಿರುನಗರಿ-ವಲ್ಲಿಯೂರ್ ಹೆದ್ದಾರಿಯಲ್ಲಿ ಅಳವಡಿಸಲಾಗಿದ್ದ ಬೋರ್ಡ್​ನಲ್ಲಿ ತಮಿಳು, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಸ್ಥಳಗಳ ಹೆಸರುಗಳನ್ನು ಬರೆಯಲಾಗಿತ್ತು. ಇದು ರಾಜ್ಯದ 'ದ್ವಿಭಾಷಾ ನೀತಿ'ಯನ್ನು ಇದು ಉಲ್ಲಂಘಿಸಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಟೀಕೆ, ಆಕ್ರೋಶವನ್ನು ಹುಟ್ಟು ಹಾಕಿತ್ತು.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿ ಪ್ರತಿಕ್ರಿಯಿಸಿದ್ದ ಮಾಜಿ ಸಿಎಂ ಎಂ.ಕೆ.ಸ್ಟಾಲಿನ್, ತಮಿಳುನಾಡಿನ ದ್ವಿಭಾಷಾ ನೀತಿಯೊಂದಿಗೆ ಚೆಲ್ಲಾಟವಾಡದಂತೆ ಟಿವಿಕೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಬಳಿಕ ಅಧಿಕಾರಿಗಳು ರಾತ್ರೋರಾತ್ರಿ ಫಲಕದಲ್ಲಿದ್ದ ಹಿಂದಿ ಪದಗಳನ್ನು ಅಳಿಸಿಹಾಕಿದ್ದರು.

ದ್ವಿಭಾಷಾ ನೀತಿಯನ್ನು ಉಲ್ಲಂಘಿಸಿ ಲೋಪಕ್ಕಾಗಿ ತಮಿಳುನಾಡು ಸರ್ಕಾರವು, ಸಹಾಯಕ ವಿಭಾಗೀಯ ಎಂಜಿನಿಯರ್ ಭೂಮಿನಾಥನ್ ಮತ್ತು ಸಹಾಯಕ ಎಂಜಿನಿಯರ್ ಮುತ್ತು ಲಕ್ಷ್ಮಿ ಎಂಬ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ದ್ವಿಭಾಷಾ ನೀತಿಗೆ ಬದ್ಧ-ಆಧವ್ ಅರ್ಜುನ್

ಹಿಂದಿ ಭಾಷಾ ಬಳಕೆ ಕುರಿತಂತೆ ಎದ್ದ ವಿವಾದಕ್ಕೆ ಪ್ರತಿಕ್ರಿಯಿಸಿದ ಸಚಿವ ಆಧವ್ ಅರ್ಜುನ್, ಮಾಜಿ ಸಿಎಂ ಅಣ್ಣಾದೊರೈ, ಜಾರಿಗೆ ತಂದಿರುವ ದ್ವಿಭಾಷಾ ನೀತಿಯು ಸರ್ಕಾರದ ಮೂಲಭೂತ ತತ್ವಗಳಲ್ಲಿ ಒಂದಾಗಿದೆ. ಈ ವಿಷಯದಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅದಕ್ಕೆ ಎದುರಾಗುವ ಯಾವುದೇ ಸವಾಲನ್ನು ಹಿಮ್ಮೆಟ್ಟಿಸುತ್ತೇವೆ ಎಂದಿದ್ದಾರೆ (ಏಜೆನ್ಸೀಸ್).