ಹಿಂದೂ ಮಹಾಸಾಗರದಲ್ಲಿ ಇರಾನಿನ ಯುದ್ಧ ನೌಕೆಯನ್ನು ಹೊಡೆದುರಳಿಸಿದ ಅಮೆರಿಕ
- ಹಿಂದೂ ಮಹಾಸಾಗರದಲ್ಲಿ ಇರಾನಿನ ಯುದ್ಧ ನೌಕೆಯನ್ನು ಹೊಡೆದುರಳಿಸಿದ ಅಮೆರಿಕ
- ಇದು ಭಾರತದ ಸಾರ್ವಭೌಮತೆಗೆ ಮಾಡಿದ ಅವಮಾನ ಎಂದ ಓವೈಸಿ
- ಪತ್ರಿಕಾಗೋಷ್ಠ ಕರೆದು ಅಮೆರಿಕ ಮತ್ತು ಡೊನಾಲ್ಟ್ ಟ್ರಂಪ್ನ ಯುದ್ಧನೀತಿಯನ್ನು ವಿರೋಧಿಸಿ ಎಂದ ಸಂಸದ
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಹಿಂದೂ ಮಾಹಾಸಾಗರದ ಬಳಿ ಬಂದಿದ್ದು, ಅಮೆರಿಕ, ಇರಾನಿನ ಯುದ್ಧನೌಕೆಯೊಂದವನ್ನು ಹೊಡೆದುರಳಿಸಿದ ಬಗ್ಗೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ (Asaduddin Owaisi) ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಈ ಕುರಿತು ಹಂಚಿಕೊಂಡಿರುವ ಓವೈಸಿ, ಅಮೆರಿಕ ಭಾರತದ ಜಲಪ್ರದೇಶದಲ್ಲಿ ಇರಾನಿನ ಹಡಗನ್ನು ಬೀಳಿಸಿದೆ. ಈ ಕುರಿತು ನಮ್ಮ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವರು ಮೌನ ವಹಿಸಿದ್ದಾರೆ, ಈ ಕುರಿತು ಏಕೆ ಉತ್ತರಿಸುತ್ತಿಲ್ಲ. ಕೂಡಲೇ ಒಂದು ಪತ್ರಿಕಾಗೋಷ್ಠಿ ನಡೆಸಿ ಈ ಘಟನೆ ಬಗ್ಗೆ ಭಾರತದ ನಿಲುವೇನೆಂದು ತಿಳಿಸಿ ಎಂದು ಪ್ರಶ್ನಿಸಿದ್ದಾರೆ.
ಇರಾನಿನ ಹಡಗನ್ನು ಹೊಡೆಯುವ ಮೊದಲು ಅಮೆರಿಕದ ಅಧ್ಯಕ್ಷರು, ಭಾರತದ ಒಪ್ಪಿಗೆ ಪಡೆದಿತ್ತೇ? ಭಾರತದ ಜಲ ಪ್ರದೇಶದಲ್ಲಿ ಪರಮಾಣು ಜಲಾಂತರ್ಗಾಮಿ ನೌಕೆಯನ್ನು ಬಳಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿತ್ತೇ ಎಂಬುದನ್ನು ಸರ್ಕಾರ ಬಹಿರಂಗ ಪಡಿಸಬೇಕು. ಒಂದು ವೇಳೆ ಅನುಮತಿ ಪಡೆಯದ ಪಕ್ಷದಲ್ಲಿ ಅಮೆರಿಕ ಅಧ್ಯಕ್ಷರ ಯುದ್ಧ ನೀತಿಯನ್ನು ಭಾರತ ಖಂಡಿಸಬೇಕೆಂದು ಅವರು ಹೇಳಿದರು.
ಒಂದು ವೇಳೆ ಅಮೆರಿಕ ಭಾರತದ ಅನುಮತಿ ಇಲ್ಲದೆ ನಮ್ಮ ಜಲ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಅದು ಭಾರತದ ಸಾರ್ವಭೌಮತೆಗೆ ಮಾಡಿದ ಅವಮಾನವಾಗಿದ್ದು, ಈ ಕುರಿತು ಕೇಂದ್ರ ಸರ್ಕಾರ ಆದಷ್ಟು ಬೇಗ ಸ್ಪಷ್ಟಣೆ ನೀಡಬೇಕೆಂದು ಓವೈಸಿ ಒತ್ತಾಯಿಸಿದ್ದಾರೆ.
ಇರಾನಿನ ಯುದ್ಧನೌಕೆಯನ್ನು ಹೊಡೆದುರಳಿಸಿದ ಅಮೆರಿಕ
ಇರಾನಿನ ಸವೋಚ್ಚ ನಾಯಕ ಆಯತೊಲ್ಲ ಖಮೇನಿ ಸಾವಿನೊಂದಿಗೆ ಪ್ರಾರಂಭವಾದ ಈ ಸಂಘರ್ಷದಲ್ಲಿ ಮಾ.4 ರಂದು ಅಮೆರಿಕ ಹಿಂದೂ ಮಹಾಸಾಗರದಲ್ಲಿದ್ದ ಇರಾನಿನ ಐರಿಶ್ ಡೇನಾ ಎಂಬ ಯುದ್ಧನೌಕೆಯನ್ನು ಗೊಡೆದುಹಾಕಿತು. ಈ ಹಡಗಿನಲ್ಲಿದ್ದ ಸುಮಾರು 80 ಜನ ನಾವಿಕರು ಸಾವನ್ನಪ್ಪಿದ್ದರೆ, 100 ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆ.
ಈ ಯುದ್ಧನೌಕೆಯು ಭಾರತದೊಂದಿಗೆ ಜಂಟಿ ಸಮರಾಭ್ಯಾಸ ಮಾಡಿ ಶ್ರೀಲಂಕಾದ ಸಮೀಪ ನಿಂತಿದ್ದಾಗ ಅಮೆರಿಕ ತನ್ನ ಜಲಾಂತರ್ಗಾಮಿಯನ್ನು ಬಳಸಿ ಈ ನೌಕೆಯನ್ನು ಹೊಡೆದುಹಾಕಿದೆ. ಇರಾನ್ ಹೇಳಿಕೆ ಪ್ರಕಾರ ಈ ಹಡಗಿನಲ್ಲಿ ಕೇವಲ ನಾವಿಕರಿದ್ದು ಇದರಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರವಿರಲಿಲ್ಲ ಎನ್ನುವುದು ಅವರ ವಾದವಾಗಿದೆ,(ಏಜನ್ಸೀಸ್).