ಸಾಂದರ್ಭಿಕ ಚಿತ್ರ ( Uber Driver )
- ಕ್ಯಾಬ್ ಚಾಲಕರೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ
- ಹರಿಯಾಣದ ಗುರುಗ್ರಾಮ್‌ನಲ್ಲಿ ನಡೆದ ಘಟನೆಯ ವಿಡಿಯೋ ಜಾಲತಾಣದಲ್ಲಿ ತುಂಬಾ ಚರ್ಚೆಯಾಗುತ್ತಿದೆ
- ಗ್ರಾಹಕರೊಬ್ಬರು ಕ್ಯಾಬ್ ಚಾಲಕನಿಗೆ ಕಳುಹಿಸಿದ ಅಶ್ಲೀಲ ಸಂದೇಶವು ನೆಟಿಗ್ಗರ ಹುಬ್ಬೇರಿಸಿದೆ
Uber Driver : ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ನೂರಾರು ವಿಡಿಯೋಗಳನ್ನು ನೋಡುತ್ತಿರುತ್ತೇವೆ. ಅವುಗಳಲ್ಲಿ ಕೆಲವೊಂದಿಷ್ಟು ವಿಡಿಯೋ ವಿಶೇಷ ಹಾಗೂ ವಿಚಿತ್ರ ಕಾರಣಕ್ಕೆ ನೋಡುಗರ ಗಮನವನ್ನು ಸೆಳೆದುಬಿಡುತ್ತವೆ. ಅಂಥದ್ದೇ ವಿಡಿಯೋವೊಂದು ಇದೀಗ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಇದು ತುಂಬಾ ವಿಚಿತ್ರವಾದ ವಿಡಿಯೋ. ವಿಡಿಯೋ ನೋಡಿದವರು ಇಂಥಾ ಜನಾನೂ ಇರ್ತಾರಾ ಎಂದು ಹುಬ್ಬೇರಿಸದೇ ಇರಲಾರರು.
ಹೌದು, ಇತ್ತೀಚೆಗೆ ಕ್ಯಾಬ್ ಚಾಲಕರೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. ಹರಿಯಾಣದ ಗುರುಗ್ರಾಮ್‌ನಲ್ಲಿ ನಡೆದ ಘಟನೆಯ ವಿಡಿಯೋ ಪ್ರಸ್ತುತ ಜಾಲತಾಣದಲ್ಲಿ ತುಂಬಾ ಚರ್ಚೆಯಾಗುತ್ತಿದೆ. ಈ ವಿಡಿಯೋದಲ್ಲಿ, ಗ್ರಾಹಕರೊಬ್ಬರು ಕ್ಯಾಬ್ ಚಾಲಕನಿಗೆ ಕಳುಹಿಸಿದ ಅಶ್ಲೀಲ ಸಂದೇಶವು ನೆಟಿಗ್ಗರ ಹುಬ್ಬೇರಿಸಿದೆ.
ಹಾಗಾದರೆ, ಆ ವಿಡಿಯೋದಲ್ಲಿ ಅಂಥದ್ದೇನಿದೆ? ಎಂಬ ಪ್ರಶ್ನೆ ಮೂಡಬಹುದು. ಉತ್ತರ ತಿಳಿಯುವ ಕುತೂಹಲವಿದ್ದರೆ ಮುಂದೆ ಓದಿ. ಅಷ್ಟಕ್ಕೂ ಏನಾಯಿತು ಅಂದರೆ, ವಿಶಾಲ್ ಎಂಬ ಕ್ಯಾಬ್ ಚಾಲಕ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾನೆ. ಆ ವಿಡಿಯೋ ಪ್ರಕಾರ, ಓರ್ವ ಗ್ರಾಹಕ ದೇವಸ್ಥಾನಕ್ಕೆ ಹೋಗಲು ಕ್ಯಾಬ್ ಬುಕ್ ಮಾಡಿದರು. ಕ್ಯಾಬ್ ಬುಕ್ಕಿಂಗ್ ಖಚಿತವಾದ ಬಳಿಕ ಆ ಗ್ರಾಹಕ, ಚಾಲಕನಿಗೆ ವೈಯಕ್ತಿಕ ಮಸೇಜ್ಗಳುನ್ನು ಕಳುಹಿಸುತ್ತಾ ಅಶ್ಲೀಲವಾಗಿ ಮಾತನಾಡಲು ಆರಂಭಿಸಿದರು.
ಕ್ಯಾಬ್ ಬುಕ್ ಮಾಡಿದ ಗ್ರಾಹಕ, ನಾಚಿಕೆಯಿಲ್ಲದೆ ಚಾಲಕನಿಗೆ "ಹಲೋ ಬ್ರೋ.. ನೀವು ಸೆಕ್ಸ್ ಮಾಡಲು ಬಯಸುತ್ತೀರಾ? ನಿಮಗೆ ಆಸಕ್ತಿ ಇದ್ದರೆ ನಿಮ್ಮ ವಾಟ್ಸ್ಆ್ಯಪ್ ಸಂಖ್ಯೆಯನ್ನು ಹಂಚಿಕೊಳ್ಳಿ ಎಂದು ಮಸೇಜ್ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಯಾವಾಗ ಕ್ಯಾಬ್ ಚಾಲಕ, ಗ್ರಾಹಕನ ವಿನಂತಿಯನ್ನು ನಿರಾಕರಿಸಿದಾಗ, ಆ ಗ್ರಾಹಕ ತಕ್ಷಣವೇ ಕ್ಯಾಬ್ ಬುಕ್ಕಿಂಗ್ ರದ್ದುಗೊಳಿಸಿದರು.
ಈ ಘಟನೆಯ ಬಗ್ಗೆ ಚಾಲಕ ಅಸಮಾಧಾನಗೊಂಡಿದ್ದು, ಮೊದಲು ಇಂತಹ ಸಂಗತಿಗಳು ಕೇವಲ ಬೈಕ್ ಟ್ಯಾಕ್ಸಿ ಚಾಲಕರಿಗೆ ಮಾತ್ರ ಸಂಭವಿಸುತ್ತಿದ್ದವು. ಆದರೆ, ಈಗ ಕ್ಯಾಬ್ ಚಾಲಕರಿಗೂ ಇದು ಸಂಭವಿಸುತ್ತಿದೆ. ಇದೇ ರೀತಿಯ ಮಸೇಜ್ ಅನ್ನು ಪ್ರಯಾಣಿಕರಿಗೆ ಕಳುಹಿಸಿದ್ದರೆ, ಕಂಪನಿಯು ತಕ್ಷಣವೇ ಕ್ರಮ ಕೈಗೊಳ್ಳುತ್ತಿತ್ತು. ಆದರೆ, ಚಾಲಕರಿಗೆ ಈ ರೀತಿ ಆದರೆ ಕಂಪನಿಗಳು ಕಾಳಜಿ ವಹಿಸುವುದಿಲ್ಲ ಎಂದು ವಿಶಾಲ್ ಅವರು ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.
ಈ ವಿಡಿಯೋವನ್ನು ನೋಡಿದ ಅನೇಕ ಜನರು ಚಾಲಕರೊಂದಿಗೆ ಈ ರೀತಿ ಅನುಚಿತವಾಗಿ ವರ್ತಿಸುವುದು ತಪ್ಪು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ವೈರಲ್ ವಿಡಿಯೋ ಗ್ರಾಹಕರ ಸುರಕ್ಷತೆಯ ಬಗ್ಗೆ ಮಾತ್ರವಲ್ಲದೆ, ಕ್ಯಾಬ್ ಚಾಲಕರ ಸುರಕ್ಷತೆ ಮತ್ತು ಗ್ರಾಹಕರ ನಡವಳಿಕೆಯ ಬಗ್ಗೆಯೂ ಚರ್ಚೆಗೆ ಕಾರಣವಾಗಿದೆ, (ಏಜೆನ್ಸೀಸ್).