Ketan Agarwal Pune murder
- ಕೇತನ್ ಕೊಲೆ ಕೇಸ್ಗೆ ಸಿಗುತ್ತಿದೆ ದಿನಕ್ಕೊಂದು ತಿರುವು
- ಕೊಲೆಯ ಮಾಸ್ಟರ್ ಮೈಂಡ್ ಯಾರು ಎನ್ನುವ ಬಗ್ಗೆ ಆರೋಪ ಮತ್ತು ಪ್ರತ್ಯಾರೋಪ
- ಕೇತನ್ನನ್ನು ಕೊಲ್ಲುವ ಒಂದು ದಿನದ ಹಿಂದೆ ಕೆಫೆಯಲ್ಲಿ ಭೇಟಿಯಾಗಿದ್ದ ಆರೋಪಿಗಳು
ಪುಣೆ: ಕೇತನ್ ಕೊಲೆ ಕೇಸ್ ಪ್ರಕರಣದಲ್ಲಿ, ಪೊಲೀಸ್ ಕಸ್ಟಡಿಯಲ್ಲಿರುವ ಪ್ರಮುಖ ಆರೋಪಿ ಸಿಯಾ ಗೋಯೆಲ್ ಮತ್ತು ಚೇತನ್ ಚೌಧರಿ ವಿಚಾರಣೆಯಿಂದ ಸ್ಫೋಟಕ ಮಾಹಿತಿಗಳು ದಿನದಿಂದ ದಿನಕ್ಕೆ ಸಿಗುತ್ತಿದೆ. ಮದುವೆ ಇಷ್ಟವಿಲ್ಲ ಎಂದಿದ್ದರೂ, ರದ್ದುಪಡಿಸಲು ಕೇತನ್ ಸಿದ್ಧವಿರಲಿಲ್ಲ ಎನ್ನುವುದು ಒಂದಾದರೆ, ಕೊಲೆ ಮಾಡಲು ಪ್ಲ್ಯಾನ್ ಕೊಟ್ಟಿದ್ದು ಯಾರು ಎನ್ನುವ ವಿಚಾರಕ್ಕೆ ಇಬ್ಬರು ಒಬ್ಬರ ಮೇಲೋಬ್ಬರು ಆರೋಪ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಓಡಿ ಹೋಗುವ ಪ್ಲ್ಯಾನ್ ಕೊಲೆಯಲ್ಲಿ ಅಂತ್ಯ
ಮೊದಲು ಓಡಿ ಹೋಗಿ ಮದುವೆ ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಸಿಯಾಳ ಮನೆತನ ಹಾಗೂ ಶ್ರೀಮಂತಿಕೆ. ಪೋಷಕರ ಗೌರವ ಎಲ್ಲವನ್ನೂ ಪರಿಗಣಿಸಿ ಆ ಯೋಜನೆ ಕೈಬಿಡಲಾಗಿತ್ತು. ಪೋಷಕರ ಸಾಮಾಜಿಕ ಗೌರವಕ್ಕೆ ಧಕ್ಕೆ ಬರಬಹುದು ಎಂಬ ಕಾರಣಕ್ಕೆ ಓಡಿ ಹೋಗೋದು ಬೇಡ ಎಂದು ನಿರ್ಧರಿಸಿದ್ದಳು ಸಿಯಾ. ಕೇತನ್ ಜೊತೆಗಿನ ಮದುವೆ ಮುರಿದುಕೊಳ್ಳಲು ಸಿಯಾ ಮತ್ತು ಚೇತನ್ ನಾನಾ ದಾರಿಯನ್ನು ಹುಡುಕಿದರು. ಆದರೆ ಸಾಧ್ಯವಾಗದ ಕಾರಣ, ಅವನನ್ನು ಕೊಲ್ಲುವ ಬಗ್ಗೆ ನಿರ್ಧರಿಸದರು ಎನ್ನಲಾಗಿದೆ.
ಅವಳೇ ಕೊಲ್ಲಲು ನಿರ್ಧರಿಸಿದ್ದು
ಕೇತನ್ ಅಗರ್ವಾಲ್ನನ್ನು ಕೊಲ್ಲೋಕೆ ನಿರ್ಧಾರ ಮಾಡಿದ್ದು ಆಕೆಯದ್ದೇ ಪ್ಲ್ಯಾನ್ ನಂದಲ್ಲ. ನಾನು ಓಡಿ ಹೋಗಿ ಮದುಬೆ ಮಾಡಿಕೊಳ್ಳೋಣ ಎಂದಿದ್ದೆ. ಆದರೆ, ಮನೆಯ ಗೌರವಕ್ಕೆ ಧಕ್ಕೆ ಬರುತ್ತೆ ಎಂದು ಆಕೆ ಹಿಂದೇಟು ಹಾಕಿದಳು. ಕೊಲ್ಲಲು ಒತ್ತಾಯಿಸಿದಳು ಎಂದು ಸಿಯಾ ಗೋಯೆಲ್ ವಿರುದ್ಧ ಚೇತನ್ ಚೌಧರಿ ಆರೋಪಿಸಿದ್ದಾನೆ.
ಸಿಯಾ ಹೇಳಿದ್ದಿಷ್ಟು
ಕೇತನ್ನನ್ನು ಕೊಲ್ಲೋಕೆ ಪ್ಲ್ಯಾನ್ ಕೊಟ್ಟಿದ್ದೇ ಚೇತನ್ ಚೌಧರಿ. ಜೂನ್14 ರಂದು ಲೋಹಘಡ್ ಕೋಟೆಯಲ್ಲಿ ಆತನನ್ನು ಕೊಲ್ಲಲ್ಲು ಹಾಕಿದ್ದ ಪ್ಲ್ಯಾನ್ ಫ್ಲಾಪ್ ಆಗಿತ್ತು. ಆದಿನ ನನ್ನ ಮುಂದೆ ಚೇತನ್ ಕಣ್ಣೀರು ಹಾಕಿದ್ದ. ಹತಾಶೆ ವ್ಯಕ್ತಪಡಿಸಿದ್ದ, ಕೊಲೆಯ ಮಾಸ್ಟರ್ಮೈಂಡ್ ಅವನದ್ದು ನಂದಲ್ಲ ಎಂದು ಸಿಯಾ ಪೊಲೀಸರ ವಿಚಾರಣೆ ವೇಳೆ ಮಾಹಿತಿ ಬಿಚ್ಚಿಟ್ಟಿದ್ದಾಳೆ.
ಕೊಲೆ ಕೇಸ್ನಿಂದ ಬಚಾವಾಗಲು ಇಬ್ಬರು ಆರೋಪಿಗಳು ತದ್ವಿರುದ್ಧವಾಗಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಸಿಯಾ ಮತ್ತು ಚೇತನ್ ಚೌಧರಿಯನ್ನು ಜೂನ್.29ರವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದ ವಿಚಾರಣೆ ಪ್ರಗತಿಯಲ್ಲಿದೆ.
ಕೆಫೆಯಲ್ಲಿ ಮೀಟಿಂಗ್
ಕೇತನ್ನ ಕೊಲ್ಲುವ ಒಂದು ದಿನದ ಮೊದಲು ಚೇತನ್ ಮತ್ತು ಸಿಯಾ ಗೋಯೆಲ್ ಇಬ್ಬರು ಪುಣೆಯ ಕೆಫೆ ಒಂದರಲ್ಲಿ ಮೀಟ್ ಮಾಡಿದ್ದಾರೆ. ಅಲ್ಲಿ ಇಬ್ಬರು ಸೇರಿ ಅಂತಿಮ ಯೋಜನೆಯನ್ನು ರೂಪಿಸಿದ್ದರು. ಕೋಟೆಯ ಯಾವ ನಿರ್ದಿಷ್ಟ ಪ್ರದೇಶದಿಂದ ತಳ್ಳಬೇಕು ಎನ್ನುವ ಬಗ್ಗೆ ಚರ್ಚಿಸಿದ್ದರು ಎನ್ನುವ ಮಾಹಿತಿ ಸಿಸಿಟಿವಿ ಕ್ಯಾಮೆರಾದಿಂದ ಬೆಳಕಿಗೆ ಬಂದಿದೆ, (ಏಜೆನ್ಸೀಸ್).