TVK Interal Survey 
ದೇಶ

ಆಂತರಿಕ ಸಮೀಕ್ಷೆಯಲ್ಲಿ ಟಿವಿಕೆಗೆ ಶೇ 30 ರಷ್ಟು ಮತ...ಆಡಳಿತರೂಢ ಡಿಎಂಕೆ ಕಥೆ ಏನು..? | TVK Interal Survey

TVK Interal Survey: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷವು ಶೇಕಡಾ 30 ರಷ್ಟು ಮತಗಳನ್ನು ಪಡೆಯಲಿದೆ ಎಂದು ತನ್ನ ಆಂತರಿಕ ಮೌಲ್ಯಮಾಪನಗಳು ತೋರಿಸಿವೆ ಎಂದು ಟಿವಿಕೆ ಮೂಲಗಳು ಹೇಳಿಕೊಂಡಿದೆ.
ಇದೇ ವಿಷಯವಾಗಿ ಮಾತನಾಡಿರುವ ಟಿವಿಕೆ ನಾಯಕ ಸಿ.ಟಿ. ನಿರ್ಮಲ್ ಕುಮಾರ್, ಇಂದು ಟಿವಿಕೆಗೆ ಅತಿ ಹೆಚ್ಚು ಜನ ಬೆಂಬಲ ಇದೆ ಎನ್ನುವುದು ನಮ್ಮ ಪಕ್ಷಕ್ಕೆ ಮನವರಿಕೆಯಾಗಿದೆ ಎಂದರು.
2026ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 30 ಕ್ಕಿಂತ ಹೆಚ್ಚು ಮತಗಳು ನಮಗೆ ಸಿಗಲಿವೆ ಎನ್ನುವುದನ್ನು ಹಲವಾರು ಸಮೀಕ್ಷೆ ವರದಿಗಳು ತಿಳಿಸಿವೆ. ಆಡಳಿತರೂಢ ಡಿಎಂಕೆ ಶೇಕಡಾವಾರು 21 ದಾಟುವುದಿಲ್ಲ, ಆದರೆ ಜಯಲಲಿತಾ ಇಲ್ಲದ ಕಳೆದ ಚುನಾವಣೆಯಲ್ಲಿ ಎಐಎಡಿಎಂಕೆ ಶೇಕಡಾ 19.5 ರಷ್ಟು ಮತ ಪಡೆದಿತ್ತು. ತಮಿಳುನಾಡಿನಲ್ಲಿ ನಮ್ಮ ಪಕ್ಷಕ್ಕೆ ಮಾತ್ರ ಹೆಚ್ಚು ಜನರ ಬೆಂಬಲವಿದೆ, ನಮ್ಮ ನಾಯಕರು ಯಾರನ್ನೂ ಮುಖ್ಯಮಂತ್ರಿ ಮಾಡಲು ಪಕ್ಷವನ್ನು ರಚಿಸಿಲ್ಲ. ಆದರೆ ರಾಜ್ಯದ ಅಧಿಕಾರವನ್ನು ನಮ್ಮ ಕೈಗಿಡಲು ಜನರು ಈ ಮಟ್ಟದ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಇಂಡಿಯಾ ಟುಡೇ ಪಕ್ಷದ ಆಂತರಿಕ ಸಮೀಕ್ಷೆ ನಡೆಸಿದೆ ಎನ್ನಲಾಗಿದ್ದು, ಅದು 41,453 ಮಾದರಿಗಳನ್ನು ಹೊಂದಿದೆ. ಇದರಲ್ಲಿ ಆಡಳಿತರೂಢ ಡಿಎಂಕೆ ಶೇ. 32.9 ರಷ್ಟು ಮತ ಪ್ರಮಾಣದ ಮೂಲಕ ನೆಚ್ಚಿನ ಪಕ್ಷವಾಗಿದ್ದು, ಟಿವಿಕೆ ಶೇ. 31.7 ಮತ್ತು ಎಐಎಡಿಎಂಕೆ ಶೇ. 27.3 ರಷ್ಟು ಮತ ಪಡೆಯುವ ನಿರೀಕ್ಷೆ ಇದೆ. ಉಳಿದ 8.1 ಪ್ರತಿಶತ ಮತದಾರರು ಇತರ ಪಕ್ಷಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈ ಸಮೀಕ್ಷೆ ಚೆನ್ನೈ, ಚೆಂಗಲ್ಪಟ್ಟು, ಧರ್ಮಪುರಿ, ಮಧುರೈ, ಪುದುಕೊಟ್ಟೈ, ರಾಣಿಪೇಟ್, ತೆಂಕಶಿ, ತಿರುಪತ್ತೂರ್, ತಿರುವಾರೂರ್, ತೂತುಕುಡಿ, ತಿರುಪ್ಪೂರ್, ತಿರುವಳ್ಳೂರು ಮತ್ತು ಕಡಲೂರು ಸೇರಿದಂತೆ ಹಲವಾರು ಜಿಲ್ಲೆಗಳಾದ್ಯಂತ ಟಿವಿಕೆ ಭದ್ರಕೋಟೆಗಳನ್ನು ಗುರುತಿಸಿದೆ. ಆಂತರಿಕ ಸಮೀಕ್ಷೆಯ ಸೀಟುಗಳನ್ನು ನೋಡುವುದಾದರೆ ಡಿಎಂಕೆ 104 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿದ್ದು, ಟಿವಿಕೆ 74 ಮತ್ತು ಎಐಎಡಿಎಂಕೆ 56 ಸ್ಥಾನ ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡಿದೆ. ಕಾಂಗ್ರೆಸ್ ನಾಯಕರೊಬ್ಬರು ನಡೆಸಿದ ಮತ್ತೊಂದು ಸಮೀಕ್ಷೆಯು ಟಿವಿಕೆ ಶೇ 26 ರಷ್ಟು ಮತಪಡೆಯಲಿದೆ ಎಂದು ಅಂದಾಜಿಸಿದ್ದು, ಇದು ವಿಭಿನ್ನ ಮೌಲ್ಯಮಾಪನಗಳಲ್ಲಿನ ವ್ಯತ್ಯಾಸಗಳನ್ನು ತಿಳಿಸುತ್ತದೆ(ಏಜೆನ್ಸೀಸ್​).