ಫ್ಲೈಓವರ್ ಮೇಲಿಂದ ಕೆಳಗೆ ಉರುಳಿದ ಲಾರಿ
- ಮಹಾರಾಷ್ಟ್ರದ ನಾಸಿಕ್‌ನಲ್ಲಿ ಭೀಕರ ರಸ್ತೆ ದುರಂತ
- ಫ್ಲೈಓವರ್ ಮೇಲಿಂದ ಕೆಳಗೆ ಉರುಳಿದ ಲಾರಿ
- ಸೋಷಿಯಲ್ಮೀಡಿಯಾನಲ್ಲಿ ವಿಡಿಯೋ ವೈರಲ್
ನಾಸಿಕ್: ಇತ್ತೀಚೆಗೆ ಭಾರತದ ಹೆದ್ದಾರಿಗಳು ಉನ್ನತೀಕರಣಕ್ಕೆ ಒಳಗಾಗುತ್ತಿರುವ ಹಿನ್ನಲೆಯಲ್ಲಿ ದೂರ ಪ್ರಯಾಣವು ಸುಗಮವಾಗಿದೆ ಎಂದರೆ ಸುಳ್ಳಲ್ಲ. ಆದರೆ ಅಲ್ಲಲ್ಲಿ ರಸ್ತೆ ದುರಸ್ಥಿಕರಣದ ಅಗತ್ಯವಿದೆ ಆದರೂ, ರಾಷ್ಟ್ರೀಯ ಹೆದ್ದಾರಿಗಳ ಸುಧಾರಣೆ ಆಗಿರುವುದು ನಿಜವಾಗಿದೆ.
ಪ್ರಯಾಣ ಸುಗಮವಾಗಲಿ, ಪ್ರಯಾಣದ ಸಮಯ ಉಳಿಯಲಿ ಎಂಬ ಉದ್ದೇಶದಿಂದ ರಸ್ತೆ ಉನ್ನತೀಕರಣಗೊಂಡರೆ, ಇತ್ತ ವಾಹನ ಚಾಲಕರು ಮನಸೋ ಇಚ್ಛೆ ಗಾಡಿಯನ್ನು ಚಲಾಯಿಸುತ್ತಿರುವ ಹಿನ್ನಲೆ ಅಫಘಾತಗಳ ಸಂಖ್ಯೆ ಕೂಡ ಏರಿಕೆ ಕಾಣುತ್ತಿದೆ. ಭಾನುವಾರ (ಜು.26) ನಾಸಿಕ್- ಶಿರಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇದೇ ರೀತಿಯ ಒಂದು ಘಟನೆ ನಡೆದಿದ್ದು, ಟ್ರಕ್ (Truck Accident Video) ಚಾಲಕ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಫ್ಲೈಓವರ್ನಿಂದ ನೆಲಕ್ಕೆ ಬಿದ್ದ ಲಾರಿ!
ಈ ಘಟನೆಯು ಜು.26 ರಂದು ನಾಸಿಕ್-ಶಿರಡಿ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ್ದು, ಮೃತ ಟ್ರಕ್ ಚಾಲಕ ಗುಜರಾತ್ ಮೂಲಕ ರಾಜುಭಾಯ್ ಭಂಡೇರಿಯಾ (56) ಎಂದು ಗುರುತಿಸಲಾಗಿದೆ.
ಮಾಹಿತಿ ಪ್ರಕಾರ, ರಾಜುಭಾಯ್ ಭಂಡೇರಿಯಾ ನಾಸಿಕ್ನಿಂದ ಶಿರಡಿಗೆ ಕಾರ್ಖಾನೆಗೆ ಸಂಬಂಧಿಸಿದ್ದ ವಸ್ತುಗಳನ್ನು ತನ್ನ ಟ್ರಕ್ನಲ್ಲಿ ಸಾಗಿಸುತ್ತಿದ್ದ ಎಂದು ಹೇಳಲಾಗಿದೆ. ಆದರೆ ಸುಮಾರು 3.15 ರ ಸುಮಾರಿಗೆ ಟ್ರಕ್ ಮೇಲಿನ ಹಿಡಿತವನ್ನು ಕಳೆದುಕೊಂಡ ಚಾಲಕ ಟ್ರಕ್ ಅನ್ನು ಫ್ಲೈಓವರ್ ಮೇಲಿನಿಂದ ಕೆಳಕೆ ಬೀಳಿಸಿದ್ದಾನೆ.
ಹೀಗೆ ಫ್ಲೈಓವರ್ನಿಂದ ನೆಲಕ್ಕೆ ಉರುಳಿದ ರಭಸಕ್ಕೆ ಚಾಲಕ ಭಂಡೇರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಇದು ಸೋಷಿಯಲ್ ಮೀಡಿಯಾನಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.
ಆದರೆ, ಈ ಘಟನೆ ನಡೆದಾಗ ಯಾವುದೇ ಪ್ರತ್ಯಕ್ಷ ಸಾಕ್ಷಿಗಳಿಲ್ಲದ ಹಿನ್ನಲೆ ಟ್ರಕ್ ಚಾಲಕ ವಾಹನದ ಮೇಲೆ ತನ್ನ ಹಿಡಿತವನ್ನು ಕಳೆದುಕೊಳ್ಳಲು ಕಾರಣವೇನು? ಎನ್ನುವುದು ಯಕ್ಷ ಪ್ರಶ್ನೆಯಾಗಿ ಕಾಡುತ್ತಿದ್ದು, ಇದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ, (ಏಜನ್ಸೀಸ್).