ವಿರಾಟ್ ಕೊಹ್ಲಿ  
ದೇಶ

ವಿದೇಶದಲ್ಲಿ ನೆಲೆಸಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್; ಖಡಕ್ ಉತ್ತರ ನೀಡಿದ ಕಿಂಗ್​​ ವಿರಾಟ್ ಕೊಹ್ಲಿ | Virat Kohli

Virat Kohli: ಇಂಡಿಯನ್ ಪ್ರೀಮಿಯರ್ ಲೀಗ್​(ಐಪಿಎಲ್​) ನಲ್ಲಿ ಆವೃತ್ತಿಯ ಮೊದಲ ಪಂದ್ಯದಲ್ಲೇ ಭರ್ಜರಿ ಆಟವಾಡುವ ಮೂಲಕ ಪಂದ್ಯದ ಗೆಲುವಿಗೆ ಸಹಾಯ ಮಾಡಿ ಕಳೆದ ಆವೃತ್ತಿಯ ಗೆದ್ದ ಪ್ರಶಸ್ತಿತಯನ್ನು ಉಳಿಸಿಕೊಳ್ಳಲು ಲೆಜೆಂಡ್ ಕಿಂಗ್ ವಿರಾಟ್ ಕೊಹ್ಲಿ(Virat Kohli) ಗಮನ ಹರಿಸಿದ್ದಾರೆ. ಆದರೆ ಅವರು ಕುಟುಂಬದ ಜೊತೆ ಲಂಡನ್​ನಲ್ಲಿ ವಾಸಿಸುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಟೀಕೆಗೆ ಗುರಿಯಾಗಿದ್ದಾರೆ.
ಜನವರಿಯಲ್ಲಿ ಟೀಮ್ ಇಂಡಿಯಾದ ಕೊನೆ ಏಕದಿನ ಪಂದ್ಯದ ಬಳಿಕ ಅಟಕ್ಕೆ ವಿರಾಮ ತೆಗೆದುಕೊಂಡು ಇಂಗ್ಲೆಂಡ್ ಪ್ರಯಾಣ ಬೆಳಸಿದ್ದರು. ಲಂಡನ್​ನಲ್ಲಿ ಕುಟುಂಬದ ಜೊತೆ ಹೆಚ್ಚಿನ ಸಮಯವನ್ನು ಕಳೆಯುವ ವಿರಾಟ್, ಅವರ ಆಟದ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡುತ್ತಲಿದ್ದಾರೆ.
ಅದಾಗ್ಯೂ, ಭಾರತ ಬಿಟ್ಟು ಲಂಡ್​ನಲ್ಲಿ ನೆಲೆಸುವ ಅವರ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದು, ಆರ್​ಸಿಬಿ ಐದು ವಿದೇಶಿ ಆಟಗಾರರನ್ನು ಹೊಂದಿದೆ ಎಂದು ಹಲವರು ವಿರಾಟ್ ಕೊಹ್ಲಿಯನ್ನು ಗುರಿಯಾಗಿಸಿ ಟ್ರೋಲ್ ಮಾಡುತ್ತಿರುತ್ತಾರೆ. ಈ ಕುರಿತು ಇತ್ತೀಚೆಗೆ ನೀಡದ ಚಿಕ್ಕ ಸಂದರ್ಶನವೊಂದರಲ್ಲಿ ಕೊಹ್ಲಿ ಟೀಕಕಾರರಿಗೆ ಖಡಕ್ ಆಗಿಯೇ ಉತ್ತರಿಸಿದ್ದಾರೆ.
ಮಿಸ್ಟರ್ ನಾಗ ಎಂದೇ ಜನಪ್ರಿಯರಾಗಿರುವ ಡ್ಯಾನಿಶ್ ಸೇಠ್ ಅವರೊಂದಿಗೆ ನಡೆದ ಮಾತುಕತೆಯಲ್ಲಿ ಆರ್‌ಸಿಬಿ ಐದು ವಿದೇಶಿ ಆಟಗಾರರನ್ನು ಮೈದಾನಕ್ಕೆ ಇಳಿಸುತ್ತಿದೆ ಎಂಬ ಬಗ್ಗೆ ಟ್ರೋಲ್​ಗಳ ಬಗ್ಗೆ ಕೇಳಿದಾಗ, ಕೊಹ್ಲಿ ಅದಕ್ಕೆ ನಗುತ್ತಾ ಪ್ರತಿಕ್ರಿಯಿಸಿದ್ದು, ನನಗೆ ಗೊತ್ತಿಲ್ಲ, ನೀವು ನನ್ನನ್ನು ಯಾಕೆ ಕೇಳುತ್ತಿದ್ದೀರಿ? ವಿದೇಶಿ ಆಟಗಾರರನ್ನು ಕೇಳಿ. ನಾನು ವಿದೇಶಿ ಆಟಗಾರನಲ್ಲ. ನಾನು ವಿದೇಶಿ ಆಟಗಾರನೇ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಕಳೆದ ಬಾರಿ ಆರ್​ಸಿಬಿ ಐಪಿಎಲ್​ ಕಪ್​ ಗೆಲುವಿನ ಬಗ್ಗೆ ಮಾತನಾಡಿರುವ ಕೊಹ್ಲಿ, ಫ್ರಾಂಚೈಸಿಯೊಂದಿಗೆ 18ನೇ ಆವೃತ್ತಿಯಲ್ಲಿ ಟ್ರೋಫಿಯನ್ನು ಗೆದ್ದಿರುವುದು. ಮತ್ತು ಬಹಳ ದಿನಗಳಿಂದ ಕಾಡುತ್ತಿದ್ದ ನೆಮ್ಮದಿಯ ಭಾವನೆಯನ್ನು ತಂದಿದೆ. ಆ ರಾತ್ರಿ ನನಗೆ ಅದರ ಅರ್ಥ ನಿಜವಾಗಿಯೂ ಅರ್ಥವಾಯಿತು. ಎಲ್ಲವೂ ಹಗುರವಾಯಿತು ಎಂದು ಹೇಳಿದ್ದಾರೆ.
ಗೆಲುವು ಎಂದರೆ ಕಠಿಣ ಪರಿಶ್ರಮ, ನೀವು ಮಾಡಿದ ಎಲ್ಲಾ ತ್ಯಾಗಗಳು, ಕ್ರೀಡೆಗೆ ಬದ್ಧರಾಗಿರಲು. ಇದೆಲ್ಲವೂ ಒಂದು ರೀತಿಯ ಭರವಸೆ, ಪ್ರತಿಫಲವಾಗಿ ಒಟ್ಟಿಗೆ ಬರುತ್ತದೆ. ಅನೇಕ ಜನರು ಸೋಲುಗಳಿಂದ ಕಲಿಯುತ್ತಾರೆ, ಆದರೆ ಅನೇಕ ಜನರು ತುಂಬಾ ನಿರಾಶೆಗೊಳ್ಳಬಹುದು. ಆದ್ದರಿಂದ ನೀವು ಸಾಕಷ್ಟು ಕಠಿಣ ಪರಿಶ್ರಮದ ನಂತರ ಗೆದ್ದಾಗ, ಅದು ನಿಮ್ಮ ಕೆಲಸಕ್ಕೆ ನ್ಯಾಯದ ಭಾವನೆಯನ್ನು ನೀಡುತ್ತದೆ. ಹೆಚ್ಚು ಶ್ರಮಿಸಲು ಪ್ರೇರಣೆ ನೀಡುತ್ತದೆ ಎಂದಿದ್ದಾರೆ (ಏಜೆನ್ಸೀಸ್).