ಆಗಸ್ಟ್ 8ಕ್ಕೆ 'ಟಾಕ್ಸಿಕ್' ಸಿನಿಮಾ ರಿಲೀಸ್
- ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್!
- ಆಗಸ್ಟ್ 8ಕ್ಕೆ 'ಟಾಕ್ಸಿಕ್' ಸಿನಿಮಾ ರಿಲೀಸ್ . ದ್ವಿಪಾತ್ರದಲ್ಲಿ ಯಶ್ ಅಬ್ಬರ!
- ಬಾಲಿವುಡ್‌ನ ಶ್ರದ್ಧಾ ಕಪೂರ್ ನಟನೆಯ 'ಈಥ' ಚಿತ್ರದಿಂದ ರಾಕಿ ಭಾಯ್‌ಗೆ ಟಫ್ ಕಾಂಪಿಟಿಷನ್
ಸಿನಿಮಾ: ಅಂತೂ, ಇಂತೂ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಇವತ್ತು ಸಿಹಿ ಸುದ್ದಿ ದೊರೆತಿದೆ. ಜಗತ್ತೆ ಕಾತುರದಿಂದ ಕಾಯುತ್ತಿದ್ದ ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್ (Rocking Star Yash in Toxic) ಸಿನಿಮಾ ಅಗಸ್ಟ್ 26 ರಂದು ತೆರೆ ಕಾಣಲಿದೆ ಎಂದು ಸಿನಿಮಾ ತಂಡ ಘೋಷಿಸಿದೆ.
ಈ ಟಾಕ್ಸಿಕ್ ಸಿನಿಮಾ ಮೊದಲು ಭಾರತೀಯ ಸಿನಿರಂಗವನ್ನು ಧೂಳಿಪಟ ಮಾಡಿದ ಧುರಂಧರ್ 2 ಗೆ ಠಕ್ಕರ್ ಕೊಡಲು ಮಾರ್ಜ್ 19 ರಂದು ಬಿಡುಗಡೆ ಆಗಲಿತ್ತು. ಆದರೆ ಆಗ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಪ್ರಾರಂಭವಾದ ಹಿನ್ನಲೆ, ಸಿನಿಮಾವನ್ನು ಜೂನ್ 4 ಕ್ಕೆ ಮುಂದೂಡಲಾಗಿತ್ತು.
ಅದರೆ ಈ ಸಿನಿಮಾವನ್ನು ಜಾಗತಿಕ ಮಟ್ಟದ ಮಾರ್ಕೆಟಿಂಗ್ ಸಲುವಾಗಿ ಇನ್ನು ಸಮಯಬೇಕೆಂಬ ಕಾರಣಕ್ಕಾಗಿ, ಸಿನಿಮಾವನ್ನು ಇನ್ನೊಂದು ಸಲ ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ತಿಳಿಸಲಾಗುವುದೆಂದು ಹೇಳಿದ್ದರು.
ರಾಯನಿಗೆ ಠಕ್ಕರ್ ಕೊಡಲು ಶ್ರದ್ಧಾ ಸಿದ್ಧ!
ಒಂದು ಕಡೆ ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಅಗಸ್ಟ್ 8 ರಂದು ಬಿಡುಗಡೆಯಾಗುತ್ತಿದ್ದರೆ, ಇನ್ನೊಂದು ಕಡೆ ಬಾಲಿವುಡ್ನಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ನಟಿ ಶ್ರದ್ಧಾ ಕಪೂರ್ ಅವರ ಈಥ (Eetha) ಅಗಸ್ಟ್ 28 ರಂದು ತೆರೆಕಾಣಲಿದೆ.
ಆದ್ದರಿಂದ ಹಿಂದಿ ಜೋನ್ನಲ್ಲಿ ಟಾಕ್ಸಿಕ್ ಕಲೆಕ್ಷನ್‌ಗೆ ಈಥ ಸಿನಿಮಾ ಕೊಡಲಿ ಪೆಟ್ಟನ್ನು ಕೊಡಲಿದೆ ಎಂದಿ ಸಿನಿಮಾ ವಿಮರ್ಶಕರು ಹೇಳುತ್ತಿದ್ದಾರೆ. ಹಾಗೆಯೇ ಈಥ ಸಿನಿಮಾ ಮರಾಠಿ ರಂಗಭೂಮಿ ಕಲಾವಿದೆ ವಿಠಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಸಿನಿಮಾವಾಗಿದ್ದು, ಇದರಲ್ಲಿ ನಟಿ ಶ್ರದ್ಧಾ ಕಪೂರ್ ಅವರ ಮನೋಜ್ಞವಾದ ಅಭಿನಯ ಟೀಸರ್ನಲ್ಲಿ ಮೂಡಿ ಬಂದಿದೆ.
ಖ್ಯಾತ ನಾಮರೇ ತುಂಬಿರುವ ಸಿನಿಮಾ ಟಾಕ್ಸಿಕ್
ಟಾಕ್ಸಿಕ್ ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡರೆ, ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಶಿ, ತಾರಾ ಸುತಾರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಮಿಂಚಲಿದ್ದು ಈ ಸಿನಿಮಾ ಅಗಸ್ಟ್ 26 ರಂದು ತೆರೆಕಾಣಲಿದೆ. ಈ ಸಿನಿಮಾವನ್ನು ಗೀತು ಮೋಹನ್ ದಾಸ್ ನಿರ್ದೇಶಿಸಿದ್ದಾರೆ, (ಏಜನ್ಸೀಸ್).