Peru Plane Crash: ಪೆರುವಿನ ಪ್ರಸಿದ್ಧ ಪ್ರವಾಸಿ ತಾಣವಾದ 'ನಜ್ಕಾ ಲೈನ್ಸ್' ವೀಕ್ಷಣೆಗೆ ತೆರಳುತ್ತಿದ್ದ ಪ್ರವಾಸಿಗರಿದ್ದ ವಿಮಾನವೊಂದು ಶನಿವಾರ (ಆ.02) ನಜ್ಕಾ ನಗರದ ಹೊರವಲಯದ ಮೈದಾನದಲ್ಲಿ ಅಪಘಾತಕ್ಕೀಡಾಗಿದ್ದು, ಈ ದುರಂತದಲ್ಲಿ ವಿಮಾನದಲ್ಲಿದ್ದ 13 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೆರು ದೇಶದ ಆಡಳಿತ ಮಂಡಳಿ ಮತ್ತು ಸ್ಥಳೀಯ ಪುರಸಭೆ ಅಧಿಕೃತವಾಗಿ ದೃಢಪಡಿಸಿವೆ.
ಸ್ಥಳೀಯ ಏರೋಡಿಯಾನಾ ಸಂಸ್ಥೆಗೆ ಸೇರಿದ 'ಸೆಸ್ನಾ ಗ್ರಾಂಡ್ ಕ್ಯಾರವಾನ್' ಮಾದರಿಯ ಈ ವಿಮಾನವು ಇಕಾ ನಗರದಿಂದ ಹಾರಾಟ ಆರಂಭಿಸಿತ್ತು. ನೂರಾರು ವರ್ಷಗಳ ಹಿಂದೆ ಪೆರುವಿನ ಮೂಲ ನಿವಾಸಿಗಳು ಮರುಭೂಮಿಯ ನೆಲದ ಮೇಲೆ ಕೆತ್ತಿರುವ ಬೃಹತ್ ಆಕಾರದ ಚಿತ್ರಗಳನ್ನು ಆಕಾಶ ಮಾರ್ಗವಾಗಿ ಪ್ರವಾಸಿಗರಿಗೆ ತೋರಿಸುವುದು ಈ ಪ್ರಯಾಣದ ಉದ್ದೇಶವಾಗಿತ್ತು. ಆದರೆ, ವೀಕ್ಷಣೆಯ ವೇಳೆಯಲ್ಲೇ ಈ ದುರಂತ ಸಂಭವಿಸಿದೆ.