Devendra Fadnavis | ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
ಮುಂಬೈ: ಈ ಹಿಂದೆ ಹಣಕಾಸು ಸಚಿವರಾಗಿದ್ದ ಅಜಿತ್ ಪವಾರ್ ಬಹಳ ಎಚ್ಚರಿಕೆಯಿಂದ ಬಜೆಟ್ ಸಿದ್ಧಪಡಿಸುತ್ತಿದ್ದರು, ಅವರಿಗೆ ತಮ್ಮದೇ ಆದ ಅನೇಕ ಕನಸ್ಸುಗಳಿದ್ದವು, ಈ ಹಿನ್ನಲೆಯಲ್ಲಿ ಅವರ ದೃಷ್ಟಿಕೋನ ಈಡೇರಲು ಸ್ವತಃ ನಾನೇ ಬಜೆಟ್ ಮೇಲ್ವಿಚಾರಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಹಣಕಾಸು ಸಚಿವರಾಗಿ ಅಜಿತ್ ಪವಾರ್ ಮುಂಬರುವ ಹಣಕಾಸು ವರ್ಷಕ್ಕೆ ಪ್ರಮುಖವಾದ ಅಡಿಪಾಯ ಹಾಕಿದ್ದಾರೆ, ಕೆಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಫಡ್ನವೀಸ್ ಬಣ್ಣಿಸಿದ್ದಾರೆ.
ಮುಂಬರುವ ಬಜೆಟ್ ಕುರಿತಾದ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ ಫಡ್ನವೀಸ್, ಅಜಿತ್ ದಾದಾ ದೂರದೃಷ್ಟಿ ಈಡೇರುವುದನ್ನು ಖಚಿತಪಡಿಸಿಕೊಳ್ಳಲು, ನಾಳೆಯಿಂದ ಪ್ರಾರಂಭವಾಗುವ ಬಜೆಟ್ ಕೆಲಸವನ್ನು ನಾನೇ ವೈಯಕ್ತಿಕವಾಗಿ ನೋಡಿಕೊಳ್ಳುತ್ತೇನೆ, ಆಯವ್ಯಯವನ್ನು ಯಾರು ಮಂಡಿಸುತ್ತಾರೆ ಎನ್ನುವುದನ್ನು ಚರ್ಚಿಸಿ
ಎನ್‌ಸಿಪಿಯ ಭವಿಷ್ಯದ ನಾಯಕತ್ವಕ್ಕೆ ಸಂಬಂಧಿಸಿದ ಅಜಿತ್ ದಾದಾ ಕುಟುಂಬದ ನಿರ್ಧಾರಕ್ಕೆ ಬಿಜೆಪಿ ಪಕ್ಷ ಮತ್ತು ಮಹಾಯುತಿ ಸರ್ಕಾರ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದರು. ಉಪಮುಖ್ಯಮಂತ್ರಿ ಹುದ್ದೆಗೆ ಔಪಚಾರಿಕ ಪ್ರಸ್ತಾವನೆ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಫಡ್ನವೀಸ್, ಚರ್ಚೆಗಳು ನಡೆಯುತ್ತಿವೆ ಎಂದು ದೃಢಪಡಿಸಿದರು.
ಎನ್‌ಸಿಪಿ ನಾಯಕರು ತಮ್ಮ ಆಂತರಿಕ ಕಾರ್ಯವಿಧಾನಗಳು ಮತ್ತು ಲಭ್ಯವಿರುವ ಆಯ್ಕೆಗಳ ಕುರಿತು ನನ್ನೊಂದಿಗೆ ಎರಡು ಬಾರಿ ಚರ್ಚಿಸಿದ್ದಾರೆ, ಅಂತಿಮ ನಿರ್ಧಾರವು ಅವರ ಪಕ್ಷಕ್ಕೆ ಬಿಟ್ಟದ್ದು, ಮತ್ತು ಅವರು ಅದನ್ನು ಅಂತಿಮಗೊಳಿಸುವವರೆಗೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದು ಹೇಳಿದರು.
ಸಿಎಂ ಫಡ್ನವೀಸ್ರ ಈ ಹೇಳಿಕೆ ಚಾಣಾಕ್ಷ ರಾಜಕೀಯ ನಡೆಯಾಗಿದ್ದು, ಎನ್‌ಸಿಪಿಯ ಆಂತರಿಕ ನಿರ್ಧಾರಗಳಲ್ಲಿ ಹಸ್ತಕ್ಷೇಪ ಮಾಡದೆ, ಸಂಪೂರ್ಣ ಬೆಂಬಲ ಘೋಷಿಸುವ ಮೂಲಕ ಮೈತ್ರಿಯಲ್ಲಿ ಉಂಟಾಗಬಹುದಾದ ಭಿನ್ನಾಭಿಪ್ರಾಯಗಳನ್ನು ಬ್ರೇಕ್ ಹಾಕಿದ್ದಲ್ಲದೆ, ಬಜೆಟ್ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಮೂಲಕ ಸರ್ಕಾರದ ಪ್ರಮುಖ ಆರ್ಥಿಕ ನಿರ್ಧಾರಗಳ ಮೇಲೆ ತಮ್ಮ ಹಿಡಿತವನ್ನೂ ಉಳಿಸಿಕೊಂಡಿದ್ದಾರೆ(ಏಜೆನ್ಸೀಸ್).