ಸಿಎಂ ವಿಜಯ್ ಮತ್ತು ಎಂ.ಕೆ.ಸ್ಟಾಲಿನ್  
ದೇಶ

ತಿರುಪ್ಪರಂಕುಂದ್ರಂ ವಿವಾದ: ಸುಪ್ರೀಂಕೋರ್ಟ್ ಆದೇಶ ಟಿವಿಕೆ ಸರ್ಕಾರದ ವೈಫಲ್ಯ; ಎಂ.ಕೆ.ಸ್ಟಾಲಿನ್ ಕಿಡಿ: ಆದೇಶ ಬೆಂಬಲಿಸಿದ ಪ್ರಧಾನಿ ಮೋದಿ | M K Stalin

ಮಧುರೈನಲ್ಲಿರುವ ತಿರುಪ್ಪರಂಕುಂದ್ರಂ ದೇವಸ್ಥಾನದ ಬೆಟ್ಟದ ಮೇಲಿರುವ ದೀಪತೂನ್​ನಲ್ಲಿ ಇಂದು(ನ. 28) ಕಾರ್ತಿಕ ದೀಪ ಹಚ್ಚಲು ಸುಪ್ರೀಂಕೋರ್ಟ್​ ಮತ್ತೆ ಖಡಕ್ ಆದೇಶ ಹೊರಡಿಸಿದ್ದು, ಭದ್ರತೆ ಜವಾಬ್ದಾರಿಯನ್ನು ಕೇಂದ್ರ ಮೀಸಲು ಪೊಲೀಸ್​ ಪಡೆಗೆ ವಹಿಸಿ ಆದೇಶಿಸಿದೆ.

ಚೆನ್ನೈ: ಮಧುರೈನಲ್ಲಿರುವ ತಿರುಪ್ಪರಂಕುಂದ್ರಂ ದೇವಸ್ಥಾನದ ಬೆಟ್ಟದ ಮೇಲಿರುವ ದೀಪತೂನ್​ನಲ್ಲಿ ಇಂದು(ನ. 28) ಕಾರ್ತಿಕ ದೀಪ ಹಚ್ಚಲು ಸುಪ್ರೀಂಕೋರ್ಟ್​ ಮತ್ತೆ ಖಡಕ್ ಆದೇಶ ಹೊರಡಿಸಿದ್ದು, ಭದ್ರತೆ ಜವಾಬ್ದಾರಿಯನ್ನು ಕೇಂದ್ರ ಮೀಸಲು ಪೊಲೀಸ್​ ಪಡೆಗೆ ವಹಿಸಿ ಆದೇಶಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್, ಶನಿವಾರ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ಕಂಬದಲ್ಲಿ ಕಾರ್ತಿಕ ದೀಪ ಬೆಳಗಿಸುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶ ಟಿವಿಕೆ ಸರ್ಕಾರದ ಸಂಪೂರ್ಣ ವೈಫಲ್ಯ ಎಂದು ಕರೆದಿದ್ದಾರೆ.

ಈ ವಿಷಯದಲ್ಲಿ ರಾಜ್ಯದ ಹಕ್ಕುಗಳು, ಧಾರ್ಮಿಕ ಸಾಮರಸ್ಯ ಮತ್ತು ಸಂಪ್ರದಾಯಗಳನ್ನು ರಕ್ಷಿಸುವಲ್ಲಿ ವಿಫಲವಾದ ಟಿವಿಕೆ ನೇತೃತ್ವದ ಸರ್ಕಾರವು ತಮಿಳುನಾಡಿಗೆ ಐತಿಹಾಸಿಕ ದ್ರೋಹ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರವು ನ್ಯಾಯಾಲಯದಲ್ಲಿ ಬಲವಾದ ವಾದಗಳನ್ನು ಮಂಡಿಸುವಲ್ಲಿ ವಿಫಲವಾಗಿದೆ ಮತ್ತು ವಿರೋಧಾತ್ಮಕ ನಿಲುವುಗಳನ್ನು ತೆಗೆದುಕೊಂಡಿದೆ, ಅಂತಿಮವಾಗಿ ಸಮಸ್ಯೆಯನ್ನು ಉಲ್ಬಣಗೊಳಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಕಿಡಿಕಾರಿದ್ದಾರೆ.

ಟಿವಿಕೆ ಮಿತ್ರ ಪಕ್ಷಗಳಾದ ಮೂರು ಎಡ ಪಕ್ಷಗಳಾದ ಸಿಪಿಐ, ಸಿಪಿಎಂ ಮತ್ತು ಸಿಪಿಐ (ಎಂಎಲ್) ಲಿಬರೇಶನ್, ಸುಪ್ರೀಂ ಕೋರ್ಟ್ ನಿರ್ದೇಶನಗಳು ಸಂವಿಧಾನ, ಧಾರ್ಮಿಕ ಸಾಮರಸ್ಯ ಮತ್ತು ಒಕ್ಕೂಟ ತತ್ವಗಳಿಗೆ ವಿರುದ್ಧವಾಗಿವೆ ಎಂದು ಹೇಳಿವೆ. ಮತ್ತು ಧಾರ್ಮಿಕ ಸಾಮರಸ್ಯ ಮತ್ತು ಏಕತೆಯನ್ನು ಕಾಪಾಡಲು ಇಂದು ರಾಜ್ಯಾದ್ಯಂತ ರ್ಯಾಲಿಗಳಿಗೆ ಕರೆ ನೀಡಿವೆ.

ಇನ್ನೂ ವಿಸಿಕೆ ಅಧ್ಯಕ್ಷ ತೋಲ್ ತಿರುಮಾವಲವನ್ ಅವರು, ತಮಿಳುನಾಡು ಸರ್ಕಾರದ ವಿರುದ್ಧದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯಲ್ಲಿ ನ್ಯಾಯಾಲಯವು ತೋರಿದ ತುರ್ತಿನ ಬಗ್ಗೆ ಪ್ರಶ್ನಿಸಿದ್ದು, ತಮ್ಮ ಹಿಂದಿನ ಮಧ್ಯಂತರ ಆದೇಶದ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿರುವ ಮರುಪರಿಶೀಲನಾ ಅರ್ಜಿಗೆ ನ್ಯಾಯಾಲಯವು ಆದ್ಯತೆ ನೀಡದಿರುವುದನ್ನು ಎತ್ತಿ ತೋರಿಸಿದ್ದಾರೆ.

ಮರುಗನ್​ಗೆ ಜಯವಾಗಲಿ ಎಂದ ಪ್ರಧಾನಿ ಮೋದಿ

ತಿರುಪ್ಪರಂಕುಂದ್ರಂ ಬೆಟ್ಟದ ವಿವಾದಿತ ದೀಪಥೂನ್​ನಲ್ಲಿ ಶನಿವಾರ (ನ. 28) ಕಾರ್ತಿಗೈ ದೀಪವನ್ನು ಬೆಳಗಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶಿಸಿದ ಕೆಲವೇ ಗಂಟೆಗಳ ಬಳಿಕ, ಪ್ರಧಾನಿ ಮೋದಿ, ಎಕ್ಸ್​ನಲ್ಲಿ ಮುರುಗನ್ ದೇವರಿಗೆ ಪ್ರಾರ್ಥಿಸಿದ್ದಾರೆ.

ತಮ್ಮ ಎಕ್ಸ್​ ಖಾತೆಯಲ್ಲಿ ತಮಿಳು, ಇಂಗ್ಲೀಷ್, ಹಿಂದಿ ಮೂರು ಭಾಷೆಯಲ್ಲಿ ವೆಟ್ರಿವೇಲ್ ಮುರುಗನುಕ್ಕು ಹರೋಹರ ಎಂದು ಬರೆದುಕೊಂಡಿದ್ದಾರೆ. ಆದಾಗ್ಯೂ ಪೋಸ್ಟ್​ನಲ್ಲಿ ತೀರ್ಪಿನ ಬಗ್ಗೆ ಉಲ್ಲೇಖಿಸಿಲ್ಲ (ಏಜೆನ್ಸೀಸ್).