ನ್ಯಾಯಾಧೀಶರ ನೇಮಕಾತಿಯಲ್ಲಿ ನಿರ್ಧಿಷ್ಠ ಸಮುದಾಯಕ್ಕೆ ಮನ್ನಣೆ ಆರೋಪ: ರಾಷ್ಟ್ರಪತಿಗೆ ಪತ್ರ ಬರೆದ ಮಾಜಿ ಸಿಜೆಐ ಗವಾಯಿ | Ex CJI Gavai

ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್​ ನ್ಯಾಯಮೂರ್ತಿಗಳ ನೇಮಕಾತಿಗಳಲ್ಲಿ ಶೇ. 5ರಷ್ಟಿರುವ ಸಮುದಾಯಕ್ಕೆ ಹೆಚ್ಚು ಮನ್ನಣೆ ನೀಡಲಾಗುತ್ತಿದೆ ಎಂದು ಆರೋಪಿಸಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಪತ್ರ ಬರೆದಿದ್ದಾರೆ.
ಮಾಜಿ ಸಿಜೆಐ ಬಿ.ಆರ್.ಗವಾಯಿ
ಮಾಜಿ ಸಿಜೆಐ ಬಿ.ಆರ್.ಗವಾಯಿ
Published on: 

ನವದೆಹಲಿ: ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್​ ನ್ಯಾಯಮೂರ್ತಿಗಳ ನೇಮಕಾತಿಗಳಲ್ಲಿ ಶೇ. 5ರಷ್ಟಿರುವ ಸಮುದಾಯಕ್ಕೆ ಹೆಚ್ಚು ಮನ್ನಣೆ ನೀಡಲಾಗುತ್ತಿದೆ ಎಂದು ಆರೋಪಿಸಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಪತ್ರ ಬರೆದಿದ್ದಾರೆ.

ಶುಕ್ರವಾರ(ನ. 27) ರಾಷ್ಟ್ರಪತಿಗಳಿಗೆ ಬರೆದ ಮೂರು ಪುಟಗಳ ಪತ್ರದಲ್ಲಿ, ಇತ್ತೀಚಿನ ನ್ಯಾಯಾಂಗ ನೇಮಕಾತಿಗಳಲ್ಲಿ ಅರ್ಹತೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಉನ್ನತ ನ್ಯಾಯಾಂಗದಲ್ಲಿ ಒಬಿಸಿ (OBC), ಎಸ್‌ಸಿ (SC), ಎಸ್‌ಟಿ (ST) ಮತ್ತು ಅಲ್ಪಸಂಖ್ಯಾತರ ಕಡಿಮೆ ಪ್ರಾತಿನಿಧ್ಯ ಸಿಗುತ್ತಿದ್ದು, ಈ ಕುರಿತು ಮಧ್ಯಪ್ರವೇಶ ಮಾಡಿ ಪರಿಹರಿಸುವಂತೆ ಕೋರಿದ್ದಾರೆ.

ಸಮಾಜದ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿರುವ ಅವರು, ನಿರ್ದಿಷ್ಟ ಸಮುದಾಯದ ಹೆಸರನ್ನು ಉಲ್ಲೇಖಿಸದೆಯೇ, ದೇಶದ ಜನಸಂಖ್ಯೆಯಲ್ಲಿ ಶೇಕಡಾ ಐದಕ್ಕಿಂತ ಕಡಿಮೆಯಿರುವ ಒಂದು ಸಮುದಾಯ, ಸುಪ್ರೀಂ ಕೋರ್ಟ್‌ನಲ್ಲಿ ಶೇ. 40ಕ್ಕಿಂತ ಹೆಚ್ಚು ಪ್ರಾತಿನಿಧ್ಯವನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

Also Read
ತಿರುಪ್ಪರಂಕುಂದ್ರಂ ದೀಪ ವಿವಾದ; ಇಂದು ದೀಪತೂನ್​ನಲ್ಲಿ ಸುಪ್ರೀಂ ಆದೇಶದಂತೆ ದೀಪ ಬೆಳಗಿಸಲು ಸಿದ್ದತೆ: ಸಿಆರ್​ಪಿಎಫ್​ ನಿಯೋಜನೆ | Deepathoon
ಮಾಜಿ ಸಿಜೆಐ ಬಿ.ಆರ್.ಗವಾಯಿ

ಸರ್ಕಾರಿ ದತ್ತಾಂಶವನ್ನು ಉಲ್ಲೇಖಿಸಿಸಿರುವ ಅವರು, ಸಾಂವಿಧಾನಿಕ ನ್ಯಾಯಾಲಯಗಳ ಪ್ರತಿ ನಾಲ್ಕು ನ್ಯಾಯಮೂರ್ತಿಗಳಲ್ಲಿ ಸುಮಾರು ಮೂವರು 'ಸಾಮಾನ್ಯ ವರ್ಗ'ಕ್ಕೆ ಸೇರಿದವರಾಗಿದ್ದಾರೆ. ಇನ್ನೂ 2018 ರಿಂದ ನೇಮಕಗೊಂಡ 715 ಹೈಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಕೇವಲ 22 ಮಂದಿ ಪರಿಶಿಷ್ಟ ಜಾತಿ (SC), 16 ಮಂದಿ ಪರಿಶಿಷ್ಟ ಪಂಗಡ (ST), 89 ಮಂದಿ ಇತರೆ ಹಿಂದುಳಿದ ವರ್ಗಗಳು (OBC) ಮತ್ತು 37 ಮಂದಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ಎಂದು ತಿಳಿಸಿದ್ದಾರೆ.

ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ನವೆಂಬರ್ 23, 2025 ರಂದು ನಿವೃತ್ತಿಯಾಗಿದ್ದಾರೆ. ಇವರ ಬಳಿಕ ಸಿಜೆಐ ಸೂರ್ಯಕಾಂತ್ ಅವರು ಆ ಸ್ಥಾನವನ್ನು ಅಲಂಕರಿಸಿದ್ದಾರೆ (ಏಜೆನ್ಸೀಸ್).