ದೇಶ

ಬಾಬಾಗೆ ಭವ್ಯ ವಿದಾಯ ಹೇಳುವ ಸಮಯ ಬಂದಿದೆ; ಇಡೀ ದೇಶ ಸಮಾಜವಾದಿ ಪಕ್ಷದತ್ತ ನೋಡುತ್ತಿದೆ: ಅಖಿಲೇಶ್ ಯಾದವ್ | Akhilesh Yadav

ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವುದಾಗಿ ಪ್ರತಿಜ್ಞೆ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸಾಮಾನ್ಯವಾಗಿ ಬಳಸುವ ಬಾಬಾ ಪದ ಉಲ್ಲೇಖಿಸಿ ಬಾಬಾಗೆ ಭವ್ಯ ವಿದಾಯ ಹೇಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಲಖನೌ: ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವುದಾಗಿ ಪ್ರತಿಜ್ಞೆ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಸಾಮಾನ್ಯವಾಗಿ ಬಳಸುವ ಬಾಬಾ ಪದ ಉಲ್ಲೇಖಿಸಿ ಬಾಬಾಗೆ ಭವ್ಯ ವಿದಾಯ ಹೇಳುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಇಟಾವಾದಲ್ಲಿ ಭಾನುವಾರ(ನ. 08) ಎಸ್​ಪಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವನ್ನು ಉಳಿಸಲು ಇಡೀ ದೇಶವೇ ಸಮಾಜವಾದಿ ಪಕ್ಷದತ್ತ ಭರವಸೆಯ ಕಣ್ಣಿನಿಂದ ನೋಡುತ್ತಿದೆ. 2027ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಸೋತರೆ, ಅದು ಆ ಕೇಸರಿ ಪಕ್ಷದ ಅಂತ್ಯದ ಆರಂಭವಾಗಲಿದೆ ಎಂದಿದ್ದಾರೆ.

ಸಮಾಜವಾದಿ ಪಕ್ಷವು ದೇಶವನ್ನು ಉಳಿಸಬೇಕೆಂದು ಇಡೀ ದೇಶದ ಹಾಗೂ ಉತ್ತರ ಪ್ರದೇಶದ ಜನರು ಬಯಸುತ್ತಿದ್ದಾರೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಅವರನ್ನು ಉತ್ತರ ಪ್ರದೇಶದಲ್ಲಿ ತಡೆಯಲು ಶಕ್ತರಾದರೆ, ಅದು ಅವರ ಅಂತ್ಯದ ಆರಂಭವಾಗಲಿದೆ. ಉತ್ತರ ಪ್ರದೇಶದ ಜನರು ಒಮ್ಮೆ ಅವರನ್ನು ಸ್ವಾಗತಿಸಿದ್ದರು, ಆದರೆ ಈಗ ಅವರಿಗೆ ಭವ್ಯವಾದ ಬೀಳ್ಕೊಡುಗೆ ನೀಡಲಿದ್ದಾರೆ. 'ಬಾಬಾ' ಅವರಿಗೆ ಭವ್ಯವಾದ ಬೀಳ್ಕೊಡುಗೆ ನೀಡುವ ಸಮಯ ಬಂದಿದೆ ಎಂದು ತಿಳಿಸಿದ್ದಾರೆ.

ಆದಾಗ್ಯೂ, ಅಖಿಲೇಶ್ ಯಾದವ್ ಅವರು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಬಳಸುವ ಪದಗಳು ಹಾಗೂ ಭಾಷೆಯ ಬಗ್ಗೆ ಎಚ್ಚರಿಕೆ ನೀಡಿದರು. ಮತ್ತು ಸಮಾಜಕ್ಕಾಗಿ ನಮ್ಮ ಪಕ್ಷದ ಹೋರಾಡಲಿದೆ ಎಂದು ಪುನರುಚ್ಚರಿಸಿದ್ದಾರೆ.

ಇನ್ನೂ ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ದಶಕದ ಬಳಿಕ ಮತ್ತೆ ಅಧಿಕಾರಕ್ಕೆ ಮರಳಲು ಸಮಾಜವಾದಿ ಪಕ್ಷ ಪ್ರಯತ್ನಿಸುತ್ತಿದ್ದರೆ, ಸತತ ಮೂರನೇ ಬಾರಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಭಾರತೀಯ ಜನತಾ ಪಕ್ಷ ಎದುರು ನೋಡುತ್ತಿದೆ (ಏಜೆನ್ಸೀಸ್).