ಭಾರತದ ಅತಿ ದೊಡ್ಡ ಕೂಡಂಕುಲಂ ಪರಮಾಣು ವಿದ್ಯುತ್ ಸ್ಥಾವರದ ರಹಸ್ಯ ನೀಲಿನಕ್ಷೆಗಳು ಡಾರ್ಕ್ ವೆಬ್‌ನಲ್ಲಿ ಸೋರಿಕೆ! 
ದೇಶ

ರಾಷ್ಟ್ರೀಯ ಭದ್ರತೆಗೆ ಧಕ್ಕೆ: ಡಾರ್ಕ್ ವೆಬ್‌ನಲ್ಲಿ ಕೂಡಂಕುಳಂ ಪರಮಾಣು ಸ್ಥಾವರದ ನೀಲನಕ್ಷೆ ಸೋರಿಕೆ! Kudankulam Nuclear Plant

ಪ್ರಮುಖ ಮುಖ್ಯಾಂಶಗಳು

  • ಕೂಡಂಕುಲಂ ಅಣು ವಿದ್ಯುತ್ ಸ್ಥಾವರದ ಕೂಲಿಂಗ್ ಸಿಸ್ಟಮ್ ನೀಲಿನಕ್ಷೆ ಹ್ಯಾಕ್
  • ಭಾರತದ ಅತಿ ದೊಡ್ಡ ಕೂಡಂಕುಲಂ ಪರಮಾಣು ವಿದ್ಯುತ್ ಸ್ಥಾವರದ ರಹಸ್ಯ ನೀಲಿನಕ್ಷೆಗಳು ಡಾರ್ಕ್ ವೆಬ್‌ನಲ್ಲಿ ಸೋರಿಕೆ!
  • ಮೇ ತಿಂಗಳಲ್ಲಿ ನಡೆದಿದ್ದ ಸೈಬರ್ ದಾಳಿಯ ಆಘಾತಕಾರಿ ಸತ್ಯ ಹೊರಕ್ಕೆ!
ಚೆನ್ನೈ: ಭಾರತದ ಅತಿ ದೊಡ್ಡ ಪರಮಾಣು ಸ್ಥಾವರವಾದ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರ (Kudankulam Nuclear Plant) ದ ಕೆಲ ಅಮೂಲ್ಯ ಮಾಹಿತಿಗಳು ಕಳ್ಳತನವಾಗಿದ್ದು, ಡಾರ್ಕ್​ ವೆಬ್​ನಲ್ಲಿ ಇದರ ಮಾಹಿತಿಯನ್ನು ಹರಿಬಿಡಲಾಗಿದೆ ಎಂದು ವರದಿಯಾಗಿದೆ.
ಸೋರಿಕೆಯಾದ ಮಾಹಿತಿಯಲ್ಲಿ ಕೆಲ ನೀಲಿನಕ್ಷೆಗಳು, ಸ್ಥಾವರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ನೀಡುತ್ತಿದ್ದ ಪೂರೈಕೆದಾರರ ವಿವರಗಳು ಡಾರ್ಕ್​ ವೆಬ್​ನಲ್ಲಿ ಹಂಚಿಕೆಯಾಗಿದೆ ಎಂದು ಹೇಳಲಾಗುತ್ತದೆ. ಭಾರತದಲ್ಲರುವ ಏಳು ಅಣು ವಿದ್ಯುತ್​ ಸ್ಥಾವರಗಳಲ್ಲಿ ತಮಿಳುನಾಡಿನಲ್ಲಿರುವ ಈ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರ ಅತ್ಯಂತ ದೊಡ್ಡದಾಗಿದ್ದು, ಇಲ್ಲಿ ಈ ರೀತಿಯ ಘಟನೆ ನಡೆದಿರುವುದು ಚಿಂತೆಗೆ ಕಾರಣವಾಗಿದೆ.

ರಿಲಯನ್ಸ್​ ಗ್ರೂಪ್​ ಪಾಲುದಾರ!

ಈ ಕುರಿತು ಪೋಸ್ಟ್ ಮಾಡಿರುವ ರಾನ್ಸಮ್‌ವೇರ್ ವರ್ಲ್ಡ್ ಲೀಕ್ಸ್ ಎಂಬ ಸಂಸ್ಥೆ ಈ ಮಾಹಿತಿ ನಮಗೆ ಅನಿಲ್​ ಅಂಬಾನಿ ಅವರ ರಿಲಯನ್ಸ್​ ಗ್ರೂಪ್​ ನಿಂದ ತಿಳಿದು ಬಂದಿದೆ ಎಂದು ತಿಳಿಸಿದೆ. 2018 ರಲ್ಲಿ ಕೂಡಂಕುಳಂ ಅಣು ವಿದ್ಯತ್​​ ಸ್ಥಾವರದ ಯುನಿಟ್​ 3 ಹಾಗೂ 4 ನ್ನು ನಿರ್ಮಿಸುವ ಕಾಂಟ್ರಾಕ್ಟ್​ ಅನ್ನು ರಿಲಯನ್ಸ್​ ಸಂಸ್ಥೆ ಪಡೆದುಕೊಂಡಿದ್ದು, ಆದರೆ ಈ ಕೆಲಸವು ಇನ್ನು ಕಾಮಗಾರಿ ಹಂತದಲ್ಲಿದ್ದು, 2027 ರಲ್ಲಿ ಈ ಕೆಲಸ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ.
ಮೇ ನಿಂದ ಅನುಮಾನಾಸ್ಪದ ಕಾರ್ಯ!
ಭಾರತೀಯ ಪರಮಾಣು ವಿದ್ಯುತ್ ನಿಗಮದ ಪ್ರಕಾರ ಕೂಡಂಕುಳಂ ಅಣು ವಿದ್ಯತ್​​ ಸ್ಥಾವರದ ಮೇಲೆ ಮೇ ತಿಂಗಳಿನಲ್ಲಿ ಸೈಬರ್​ ದಾಳಿ ನಡೆದಿತ್ತು. ಆದರೆ ಇದನ್ನು ಆಗಲೇ ತಡೆಯಲಾಗಿತ್ತು. ಈ ದಾಳಿ ಕೂಡ ರಿಲಯನ್ಸ್​ ಮೇಲೆ ನಡೆದಿತ್ತು ಎಂದು ತಿಳಿಸಿದೆ. ಆದರೆ ಜೂನ್​ನಲ್ಲಿ ತಮ್ಮಲಿದ್ದ ಮಾಹಿತಿ ಸೋರಿಕೆಯಾಗಿದೆ ಎಂದು ರಿಲಯನ್ಸ್​ ನಮಗೆ (ಭಾರತೀಯ ಪರಮಾಣು ವಿದ್ಯುತ್ ನಿಗಮ) ದೂರನ್ನು ಸಲ್ಲಿಸಿತ್ತು ಎಂದು ಹೇಳಿದೆ.
ಮಾಹಿತಿ ಪ್ರಕಾರ ಯುನಿಟ್​ 3 ಹಾಗೂ 4 ರಲ್ಲಿ ಕೊಠಡಿಯನ್ನು ತಂಪಾಗಿರಿಸಲು ಬಳಸಲಾಗಿರುವ ಕೂಲಿಂಗ್​ ಸಿಸ್ಟಮ್​ ಹಾಗೂ ಹವಾನಿಯಂತ್ರಣ ವ್ಯವಸ್ಥೆಯ ನೀಲನಕ್ಷೆಯ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.ಈ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದ್ದು, ಯಾರಿಂದ? ಹೇಗೆ? ಮತ್ತು ಯಾವ ಉದ್ದೇಶಕ್ಕಾಗಿ ಈ ಮಾಹಿತಿ ಸೋರಿಕೆ ಆಗಿದೆ ಎನ್ನುವುದು ತನಿಖೆ ನಂತರ ಬಿಡುಗಡೆಯಾಗುವ ವರದಿಯೇ ಉತ್ತರಿಸಬೇಕಾಗಿದೆ, (ಏಜನ್ಸೀಸ್​).