ಬಸ್ ಕಂಡಕ್ಟರ್ ಜತೆ ಓಡಿಹೋದ ಹೆಂಡತಿ: ಇದೆಲ್ಲ ಖ್ಯಾತ ಯೂಟ್ಯೂಬರ್ ಅಖಿಲ್ ಅನುಭವಿಸುತ್ತಿರುವ ಕರ್ಮದ ಫಲವಂತೆ! Akhil NRD
- ಕೇರಳ ಖ್ಯಾತ ಯೂಟ್ಯೂಬರ್ ಅಖಿಲ್ ಎನ್‌ಆರ್‌ಡಿ ಪತ್ನಿ ಮೇಘಾ ಬಸ್ ಕಂಡಕ್ಟರ್ ಜತೆ ಪರಾರಿ
- ರಾತ್ರೋರಾತ್ರಿ ಪ್ರಿಯಕರನ ಜೊತೆ ಕಾರಿನಲ್ಲಿ ಎಸ್ಕೇಪ್ ಆದ ಮೇಘಾ ವಿಡಿಯೋ ವೈರಲ್
- ಒಸಿಡಿ ಸಮಸ್ಯೆಯನ್ನು ಗೇಲಿ ಮಾಡಿದ್ದರ ಕರ್ಮಫಲ ಎಂದು ಅಖಿಲ್ ಕಾಲೆಳೆದ ಮಾಜಿ ಬಿಗ್ಬಾಸ್ ಸ್ಪರ್ಧಿ
- ನನಗೆ ನೀಡಿದ ನೋವಿನ ಕರ್ಮದ ಫಲವೇ ಇಂದು ಅಖಿಲ್ ಅನುಭವಿಸುತ್ತಿದ್ದಾರೆಂದ ಏಂಜಲಿನ್ ಮರಿಯಾ
ತಿರುವನಂತಪುರಂ: ಕೇರಳದ ಮಾಜಿ ಬಿಗ್ಬಾಸ್ ಸ್ಪರ್ಧಿ ಹಾಗೂ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಏಂಜೆಲಿನ್ ಮರಿಯಾ ಅವರು ಖ್ಯಾತ ಯೂಟ್ಯೂಬರ್ ಅಖಿಲ್ ಎನ್‌ಆರ್‌ಡಿ ( Akhil NRD ) ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಖಿಲ್ ಅವರ ಪತ್ನಿ ಮೇಘಾ, ಬಸ್ ಕಂಡಕ್ಟರ್ ಒಬ್ಬರ ಜೊತೆಯಲ್ಲಿ ಓಡಿ ಹೋಗಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿರುವುದರ ನಡುವೆಯೇ ಮರಿಯಾ ಅವರು ಕರ್ಮಫಲದ ಮಾತುಗಳನ್ನಾಡಿ ಅಖಿಲ್ ಕಾಲೆಳೆದಿದ್ದಾರೆ.
ನಾನು ಅಖಿಲ್ ಎನ್‌ಆರ್‌ಡಿ ಅವರ ಯೂಟ್ಯೂಬ್ ಚಾನಲ್‌ನ ಚಂದಾದಾರಳಾಗಿದ್ದೆ. ಒಮ್ಮೆ ಅಖಿಲ್ ಅವರು ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (OCD) ಹಾಗೂ ಮೈಸೊಫೋಬಿಯಾ (ಅಂದರೆ ಕೊಳೆ ಮತ್ತು ಕ್ರಿಮಿಕೀಟಗಳ ಬಗ್ಗೆ ವಿಪರೀತ ಭಯ) ಸಮಸ್ಯೆಯನ್ನು ವಿಡಿಯೋದಲ್ಲಿ ಗೇಲಿ ಮಾಡಿದ್ದರು. ಈ ಸಮಸ್ಯೆಗಳು ನನಗಿರುವ ಕಾರಣ ಅದನ್ನು ನೋಡಿ ನನಗೆ ಮಾನಸಿಕ ಹಿಂಸೆಯಾಗಿತ್ತು. ನಾನು 2019ರಿಂದಲೂ ಈ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದು, ಆ ವಿಡಿಯೋ ನೋಡಿದ ಬಳಿಕ ನನಗೆ ರಾತ್ರಿ ನಿದ್ರೆಯೂ ಬರಲಿಲ್ಲ ಎಂದು ಮರಿಯಾ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಕಂಟೆಂಟ್ ಮಾಡುವುದು ತಪ್ಪಲ್ಲ, ಆದರೆ ಯಾರದ್ದೋ ಆರೋಗ್ಯದ ವೈಫಲ್ಯಗಳನ್ನು ವಿಡಿಯೋದ ವಿಷಯವನ್ನಾಗಿ ಮಾಡಿಕೊಳ್ಳುವುದು ಸರಿಯಲ್ಲ ಎಂದು ಮರಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ವಿಡಿಯೋ ನೋಡಿದ ಬಳಿಕ ನಾನು ಸಾಕಷ್ಟು ಕಣ್ಣೀರು ಹಾಕಿದ್ದೆ ಮತ್ತು ತೀವ್ರ ಭಾವನಾತ್ಮಕ ನೋವನ್ನು ಅನುಭವಿಸಿದ್ದೇ ಎಂದು ಮರಿಯಾ ತಿಳಿಸಿದ್ದಾರೆ. ಇದೀಗ ಅಖಿನ್ ಜೀವನದಲ್ಲಿ ನಡೆದಿರುವ ಘಟನೆಗಳನ್ನು ನೋಡಿದರೆ ನನಗೆ ಕರ್ಮದ ಮೇಲಿನ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ. ಅಖಿಲ್ ತಮ್ಮ ವೈಯಕ್ತಿಕ ಜೀವನದಲ್ಲಿ ಅನುಭವಿಸುತ್ತಿರುವ ಕಷ್ಟಗಳು ಮತ್ತು ಭಾವನಾತ್ಮಕ ಕುಸಿತವು ಅವರು ನನಗೆ ನೀಡಿದ ನೋವಿನ ಕರ್ಮದ ಫಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಅಖಿಲ್ ವಿರುದ್ಧ ಪೋಸ್ಟ್ ಹಂಚಿಕೊಂಡ ಮರಿಯಾಗೆ ನಕಲಿ ಖಾತೆಗಳ ಮೂಲಕ ಸೈಬರ್ ಕಿರುಕುಳ ಹಾಗೂ ನಿಂದನೆಗಳು ಎದುರಾಗಿವೆ. ಅಶ್ಲೀಲ ಪದಗಳನ್ನು ಬಳಸಿ ಮರಿಯಾ ಅವರನ್ನು ಅನೇಕರು ನಿಂದಿಸುತ್ತಿದ್ದಾರೆ. ಅವರಿಗೆಲ್ಲ ತಿರುಗೇಟು ನೀಡಿರುವ ಮರಿಯಾ, ಮೊದಲು ಆ ವ್ಯಕ್ತಿಗೆ (ಅಖಿಲ್) ಹೇಳಿ, ಆ ವಿಡಿಯೋದಿಂದ ಬಂದ ಆದಾಯವನ್ನು ಬಡವರಿಗೆ ದಾನ ಮಾಡಲು ಹೇಳಿ ನಂತರ ವಿಡಿಯೋವನ್ನು ಡಿಲಿಟ್ ಮಾಡಲಿ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ. ಈ ಮೂಲಕ ಟ್ರೋಲಿಂಗ್ ಮಾಡುವವರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ವ್ಯೂಸ್ ಮತ್ತು ಆದಾಯಕ್ಕಾಗಿ ಇತರರ ವೈಯಕ್ತಿಕ ಜೀವನ ಹಾಗೂ ಆರೋಗ್ಯದ ಸಮಸ್ಯೆಗಳನ್ನು ಗುರಿಯಾಗಿಸಿ ಟ್ರೋಲ್ ಮಾಡುವ ಚಾಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಈ ಘಟನೆಯು ಆನ್‌ಲೈನ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇನ್ಫ್ಲುಯೆನ್ಸರ್‌ಗಳು ತಮ್ಮ ಮಿತಿಗಳನ್ನು ಮೀರಿ ವರ್ತಿಸುತ್ತಿರುವ ಪ್ರವೃತ್ತಿಯ ಬಗ್ಗೆ ಈ ವಿಷಯವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ, (ಏಜೆನ್ಸೀಸ್).