ಜಪಾನ್: ಯುಬಾರಿ ಕಿಂಗ್ (Yubari King Melon) ಎಂದು ಕರೆಯಲ್ಪಡುವ ಈ ಹಣ್ಣು ಕಲ್ಲಂಗಡಿ ಹಣ್ಣು ಎಂದು ತಪ್ಪಾಗಿ ಕರೆಯುತ್ತಾರೆ. ಇದು ಜಪಾನ್‌ನ ಹೊಕೈಡೋ ದ್ವೀಪದಲ್ಲಿರುವ ಯುಬಾರಿ ನಗರದಲ್ಲಿ ಮಾತ್ರ ಬೆಳೆಯಲಾಗುವ ವಿಶೇಷ ಹೈಬ್ರಿಡ್ ತಳಿಯಾಗಿದೆ. ಈ ಹಣ್ಣನ್ನು ದುಬಾರಿ ಹಣ್ಣು ಎಂದು ಕರೆಯಲಾಗುತ್ತದೆ. ಈ ಹಣ್ಣುಗಳು ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗುವುದರ ಜೊತೆಗೆ ಆ ದೇಶದ ಆರ್ಥಿಕತೆಗೆ ಸಹಾಯ ಮಾಡುತ್ತದೆ.
ಏಕೆ ಇಷ್ಟೊಂದು ದುಬಾರಿ?
ವಿಶೇಷ ಬೆಳವಣಿಗೆ
ಈ ಹಣ್ಣಿನ ಸಸ್ಯವು ಪ್ರತಿಯೊಂದು ಗಿಡಕ್ಕೆ ಒಂದು ಹಣ್ಣನ್ನು ಮಾತ್ರ ನೀಡುತ್ತದೆ. ಈ ಹಣ್ಣನ್ನು ಬೆಳೆಯುವಾಗ ಕಾಗದದ ಟೋಪಿ ಹಾಕಿ ಸೂರ್ಯನಿಂದ ರಕ್ಷಣೆ ನೀಡುತ್ತಾರೆ. ರೈತರು ಬಿಳಿ ಗ್ಲೌಸ್ ಧರಿಸಿ ಪ್ರತಿದಿನ ಹಣ್ಣನ್ನು ಸ್ವಚ್ಛಗೊಳಿಸಿ, ಮಸಾಜ್ ಮಾಡುತ್ತಾರೆ. ಯಾವುದೇ ರೀತಿಯಲ್ಲಿ ಬೆಳೆ ಹಾನಿಯಾಗದಂತೆ ಮುನ್ನಚ್ಚರಿಕೆಯನ್ನು ವಹಿಸಿಕೊಳ್ಳುತ್ತಾರೆ.
ಕಟ್ಟುನಿಟ್ಟಿನ ಪರೀಕ್ಷೆ
ಈ ಹಣ್ಣುಗಳ ಆಕಾರವು ಯಾವಾಗಲು ದುಂಡಾಗಿರಬೇಕು. ಇದು ಚರ್ಮದ ಮೇಲೆ ಜಾಲರಿ ಮಾದರಿಯನ್ನು ಹೊಂದಿರುತ್ತದೆ. ರುಚಿಯಲ್ಲಿ ಸಿಹಿಯಾಗಿರಬೇಕು ಹಾಗೂ ಸುಗಂಧದಿಂದ ಕೂಡಿರಬೇಕು. ಆಗ ಮಾತ್ರ ಇದು ವ್ಯಾಪಾರದಲ್ಲಿ ಹೆಚ್ಚು ಹಣಕ್ಕೆ ಮಾರಾಟವಾಗುತ್ತದೆ. ಇದು 1000 ಹಣ್ಣು ಬೆಳೆದಲ್ಲಿ 1 ಮಾತ್ರ ಅತ್ಯುತ್ತಮ ದರ್ಜೆಗೆ ತಲುಪುತ್ತದೆ.
ಭೌಗೋಳಿಕ ಸಂರಕ್ಷಣೆ
ಈ ತಳಿಯು ಯುಬಾರಿ ಪ್ರದೇಶದ ಜ್ವಾಲಾಮುಖಿ ಮಣ್ಣು ಮತ್ತು ವಿಶೇಷ ಹವಾಮಾನದಿಂದ ಮಾತ್ರ ಈ ರುಚಿ ಬರುತ್ತದೆ. ಇದು ಭೌಗೋಳಿಕ ಸೂಚನೆಯಿಂದ ಸುರಕ್ಷಿತವಾಗಿರುತ್ತದೆ.
ಲೇಲಂ ಸಂಸ್ಕೃತಿ
ಋತುವಿನ ಮೊದಲ ಕೊಯ್ಲನ್ನು ಲೇಲಂಗಳಲ್ಲಿ ಮಾರಾಟ ಮಾಡುತ್ತಾರೆ. ಇದು ಪ್ರತಿಷ್ಠೆ ಮತ್ತು ಉಡುಗೊರೆಯ ಸಂಕೇತವಾಗಿರುತ್ತದೆ. ಇದು ಕಂಪನಿಗಳು ಅಥವಾ ಶ್ರೀಮಂತರು ಹೆಚ್ಚು ಬಿಡ್ ಮಾಡಿ ತೆಗೆದುಕೊಳ್ಳುತ್ತಾರೆ. 2019ರಲ್ಲಿ ಒಂದು ಜೋಡಿ 37 ಲಕ್ಷಕ್ಕೆ ಖರೀದಿ ಮಾಡಿ ದಾಖಲೆಯನ್ನು ನಿರ್ಮಿಸಿದರು. 2025ರಲ್ಲಿಯೂ ಇದು ಜಪಾನ್‌ನ ಉನ್ನತ ಉಡುಗೊರೆಯಾಗಿ ಜನಪ್ರಿಯವಾಗಿದೆ.
ಈ ಹಣ್ಣು ರುಚಿಯಲ್ಲಿ ಅತ್ಯಂತ ಸಿಹಿ, ಜ್ಯೂಸಿ ಮತ್ತು ಸುಗಂಧಯುಕ್ತವಾಗಿರುತ್ತದೆ. ಒಳಗೆ ಕೇಸರಿ ಬಣ್ಣದಿಂದ ಕೂಡಿರುತ್ತದೆ. ಸಾಮಾನ್ಯ ಪ್ರೀಮಿಯಂ ಮೆಲನ್ 8,000-16,000ಕ್ಕೆ ಲಭ್ಯ, ಆದರೆ ಲೇಲಂದಲ್ಲಿ ಲಕ್ಷಾಂತರ ರೂಗಳಿಗೆ ಮಾರಾಟವಾಗಿರುತ್ತದೆ. ಇದು ಯುಬಾರಿ ನಗರದ ಆರ್ಥಿಕತೆಗೆ ಇದು ಬೆಂಬಲ ನೀಡಿದೆ (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.