ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ನಿರಪರಾಧಿ
- ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಪ್ರಕರಣ
- ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ನಿರಪರಾಧಿ
- ಇದೊಂದು ರಾಜಕೀಯ ಪ್ರೇರಿತ ಪ್ರಕರಣ
ನವದೆಹಲಿ: ಭಾರತ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಹಾಗೂ ಮಾಜಿ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Singh) ಮೇಲೆ ಕೇಳಿಬಂದಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ತೆರೆ ಬಿದ್ದಿದ್ದು, ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯವು ಈ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಹೆಸರನ್ನು ಖುಲಾಸೆಗೊಳಿಸಿದೆ.
2023 ರಲ್ಲಿ ಭಾರತದ ಕೆಲ ಖ್ಯಾತ ಕುಸ್ತಿಪಟುಗಳು ಅಂದಿನ ಕುಸ್ತಿ ಫೆಡರೇಶನ್ ಅಧ್ಯಕ್ಷರಾದ ಬ್ರಿಜ್ ಭೂಷಣ್ ಅವರಿಂದ ತಮಗೆ ಲೈಂಗಿಕ ಕಿರುಕಳ ಉಂಟಾಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದು, ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು.
ಇದೊಂದು ರಾಜಕೀಯ ಪ್ರೇರಿತ ಪ್ರಕರಣ!
ಈ ಪ್ರಕರಣದ ವಿಚಾರಣೆ ನಡೆಸಿದ ರೊಸ್ ಅವೆನ್ಯು ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಾಂಗ ನ್ಯಾಯಾಧೀಶ ಅಶ್ವಿನಿ ಪನ್ವಾರ್, ಈ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಹಾಗೂ ಸಹ ಆರೋಪಿ ವಿನೋದ್ ತೋಮರ್ ಅವರ ಹೆಸರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿದ್ದಾರೆ.
ತೀರ್ಪಿನ ಸಂಪೂರ್ಣ ವಿವರ ಲಭ್ಯವಿಲ್ಲವಾದರೂ, ಬ್ರಿಜ್ ಭೂಷಣ್ ಮೇಲೆ ಆರೋಪ ಮಾಡಿದ್ದ ಇಬ್ಬರು ಕುಸ್ತಿಪಟುಗಳು ಮಾಡಿದ್ದ ಆರೋಪ ಸುಳ್ಳೆಂದು, ಲೈಂಗಿಕ ಕಿರುಕುಳ ನಡೆಸಿದ ವ್ಯಕ್ತಿಯ ಜೊತೆ ಉತ್ತಮ ಸಂಬಂಧ ಹೊಂದಿದ್ದಾಗಿ ನ್ಯಾಯಾಲಯ ಗಮನಿಸಿದೆ.
ಈ ಕಾರಣದಿಂದ, ಈ ಪ್ರಕರಣ ಲೈಂಗಿಕ ಕಿರುಕುಳದ ನೆಪದಲ್ಲಿ ದಾಖಲಾದ ರಾಜಕೀಯ ಪ್ರೇರಿತ ಪ್ರಕರಣ ಎನ್ನುವಂತೆ ನ್ಯಾಯಾಲಯ ಭಾವಿಸಿದೆ, ಅಂತಯೇ ಬ್ರಿಜ್ ಭೂಷಣ್ ಹಾಗೂ ವಿನೋದ್ ತೋಮರ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಶನ್ ವಿಫಲವಾದ ಹಿನ್ನಲೆ ಈ ರೀತಿಯ ತೀರ್ಪು ಹೊರಬಿದ್ದಿದೆ ಎಂದು ಹೇಳಲಾಗುತ್ತಿದೆ.
ಸಂತ್ರಸ್ತ ಮಹಿಳೆಯರು ಈ ಘಟನೆ ಕುರಿತು ತಮ್ಮ ಮೇಲಾಧಿಕಾರ ಗಮನಕ್ಕೆ ಏಕೆ ಈ ವಿಷಯವನ್ನು ತಿಳಿಸಿಲ್ಲ? ಹಾಗೂ ಎಲ್ಲಾ ಕುಸ್ತಿಪಟುಗಳಿಗೆ ಒಮ್ಮೆಲೇ ಲೈಂಗಿಕ ಕಿರುಕುಳ ನೀಡಲಾಗಿತ್ತೆ? ಎಂಬ ಪ್ರಶ್ನೆಗಳಿಗೆ ಆರೋಪ ಮಾಡಿದವರಿಂದ ಸೂಕ್ತ ಉತ್ತರ ದೊರೆತಿಲ್ಲ ಎಂದು ತಿಳಿದು ಬಂದಿದೆ.
2023 ರಲ್ಲಿ ದಾಖಲಾದ ಪ್ರಕರಣ!
2023 ರಲ್ಲಿ ಅಂದಿನ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಒಟ್ಟು ಆರು ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿಬಂದಿದ್ದು, ಇದರಲ್ಲಿ ಒಬ್ಬಳು ಅಪ್ರಾಪ್ತ ಬಾಲಕಿ ಕೂಡ ಇದ್ದಳೆಂದು ಹೇಳಲಾಗಿತ್ತು.
ನಂತರದ ದಿನಗಳಲ್ಲಿ, ಅಪ್ರಾಪ್ತ ಬಾಲಕಿ ತಮ್ಮ ಆರೋಪವನ್ನು ಹಿಂಪಡೆದ ನಂತರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಿದೆ. ಈ ಪ್ರಕರಣಕ್ಕೆ ಕುರಿತಂತೆ ಭಾರತದ ಖ್ಯಾತ ಕುಸ್ತಿ ಪಟುಗಳಾದ ವಿನೇಶ್ ಪೊಗಾಟ್, ಸಾಕ್ಷಿ ಮಲ್ಲಿಕ್ ಹಾಗೂ ಭಜರಂಗ್ ಪೂನಿತಾ ಜಂತರ್-ಮಂತರ್ನಲ್ಲಿ 36 ದಿನಗಳ ಪ್ರತಿಭಟನೆ ನಡೆಸಿದ್ದರು.
ಇದರಿಂದ ಬ್ರಿಜ್ ಭೂಷಣ್, ತಮ್ಮ ಅಧ್ಯಕ್ಷ ಸ್ಥಾನದ ಜೊತೆಗೆ 2024 ರ ಲೋಕಸಭೆಯ ಟಿಕೆಟ್ ಅನ್ನು ಕಳೆದುಕೊಳ್ಳಬೇಕಾಯಿತು. ಆದರೆ ಇವರು ಮಾಡುತ್ತಿರುವ ಆರೋಪವೆಲ್ಲಾ ಸುಳ್ಳು, ಇದೊಂದು ಷಡ್ಯಂತ್ರವೆಂದು ಸಿಂಗ್ ಅಂದಿನಿಂದ ಹೇಳುತ್ತಾ ಬಂದಿದ್ದು, ಇಂದು ಅವರಿಗೆ ಜಯ ಲಭಿಸಿದೆ, (ಏಜನ್ಸೀಸ್).