ವಿದ್ಯಾರ್ಥಿಗಳಿಗೆ ಪುಸ್ತಕ ಓದುವಂತೆ ಕಿವಿಮಾತು ಹೇಳುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಲಖನೌ: ಶಾಲಾ ಮಕ್ಕಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yogi Adityanath), ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಪುಸ್ತಕ ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಬೇಕೆಂದು ಕಿವಿಮಾತು ನೀಡಿದ್ದಾರೆ.
ಶುಕ್ರವಾರ (ಸೆ.4) ರಕ್ಷಾ ಬಂಧನ ಹಬ್ಬದ ನಿಮಿತ್ತ ಆಯೋಜಿಸಲಾಗಿದ್ದ ಸ್ನೇಹ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಅಧಿಕ ಮೊಬೈಲ್ ಬಳಕೆಯಿಂದ ದೃಷ್ಟಿ ಸಮಸ್ಯೆ ಉಂಟಾಗುತ್ತದೆ. ಮೊಬೈಲ್ ಕೇವಲ ಡಿಜಿಟಲಿಕರಣದ ಭಾಗವಾಗಿ ಮಾತ್ರ ಇರಬೇಕು. ಮಾಹಿತಿಯ ಮೂಲವಾಗಬಾರದೆಂದು ಹೇಳಿದ್ದಾರೆ.
ತಂತ್ರಜ್ಞಾನಕ್ಕಿಂತ ಥಿಕಿಂಗ್ ಮುಖ್ಯ!
ಈಗೀನ ಡಿಜಿಟಲ್ ಜೀನವದಲ್ಲಿ ಮೊಬೈಲ್ಅನ್ನು ತ್ಯಜಿಸುವುದು ಕಷ್ಟವಿದೆ. ಮೊಬೈಲ್ ಒಂದೀಡಿ ತಲೆಮಾರನ್ನೇ ಬದಲಿಸಿದೆ. ಆದರೆ ಪ್ರತಿಯೊಂದು ಕೆಲಸಕ್ಕೂ ಮೊಬೈಲ್ ಬಳಕೆ ಒಳ್ಳೆಯದಲ್ಲ. ನಮ್ಮೆಲ್ಲಾ ನಿರ್ಧಾರ, ಅನಿಸಿಕೆ, ಮಾಹಿತಿ ಕೇವಲ ಒಂದೇ ಮೂಲದಿಂದ ಹೊರಬರುವುದು ಸರಿಯಲ್ಲ. ಹೀಗಾಗಿ ಮೊಬೈಲ್ ಬಳಕೆ ಆದಷ್ಟು ಕಡಿಮೆ ಮಾಡಿ ಪುಸ್ತಕಗಳನ್ನು ಓದುವುದರಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಎಂದು ಸಿಎಂ ಯೋಗಿ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾನಲ್ಲಿ ಸಿಗುವುದೆಲ್ಲಾ ಸರಿಯಿಲ್ಲ!
ಈಗ ಸೋಷಿಯಲ್ ಮೀಡಿಯಾ ಖಾತೆ ಇರದ ಜನರೇ ಇಲ್ಲ. ಆದರೆ ಅಲ್ಲಿ ಹರಿದಾಡುವ ಎಲ್ಲಾ ಮಾಹಿತಿಗಳು ಸತ್ಯವಾಗಿರುವುದಿಲ್ಲ. ಕೆಲ ಸಂದರ್ಭದಲ್ಲಿ ತಪ್ಪಾದ ಮಾಹಿತಿಯನ್ನೇ ಹಂಚಿಕೊಳ್ಳಲಾಗಿರುತ್ತದೆ. ಹೀಗಾಗಿ ನಮ್ಮ ಉಪಯೋಗಕ್ಕೆ ಎಷ್ಟು ಬೇಕೋ ಅಷ್ಟೇ ಮೊಬೈಲ್ಅನ್ನು ಬಳಸಿಕೊಂಡರೆ ಉತ್ತಮ ಎಂದು ಯೋಗಿ ಆದಿತ್ಯನಾಥ್ ಅಭಿಪ್ರಾಯ ಪಟ್ಟಿದ್ದಾರೆ, (ಏಜನ್ಸೀಸ್).