ಗ್ರೌಂಡ್‌ಗೆ ಬರುವ ಅವಶ್ಯಕತೆಯೇ ಇರಲಿಲ್ಲ; ಪಾಕ್ ಇಮೇಲ್‌ನಲ್ಲೇ ಸೋಲು ಕಳುಹಿಸಬಹುದಿತ್ತು; ಗೂಗಲ್ ಕೊಟ್ಟ ರಿಪ್ಲೈ ವೈರಲ್..!
ಕೊಲಂಬೊ: ಟಿ20 ವಿಶ್ವಕಪ್ 2026ರ ಹೈ-ವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಭರ್ಜರಿ ಜಯ ದಾಖಲಿಸಿದೆ. ಆದರೆ, ಮೈದಾನದಲ್ಲಿ ನಡೆದ ಹೋರಾಟಕ್ಕಿಂತಲೂ ಈಗ ಸೋಷಿಯಲ್ ಮೀಡಿಯಾದಲ್ಲಿ ಗೂಗಲ್ ಇಂಡಿಯಾ (Google India) ಮಾಡಿದ ಒಂದು ಟ್ವೀಟ್ ಭಾರೀ ಸದ್ದು ಮಾಡುತ್ತಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಗೂಗಲ್ ಇಂಡಿಯಾ, ಈ ಪಂದ್ಯ ಒಂದು ಇಮೇಲ್ ಆಗಿರಬಹುದಿತ್ತು ಎಂದು ವ್ಯಂಗ್ಯವಾಡಿದೆ.
ಗೂಗಲ್ ಇಂಡಿಯಾದ ಕಾರ್ಪೊರೇಟ್' ಟ್ರೋಲ್..!
ಸಾಮಾನ್ಯವಾಗಿ ಕಚೇರಿಗಳಲ್ಲಿ ಸುದೀರ್ಘ ಹಾಗೂ ಪ್ರಯೋಜನವಿಲ್ಲದ ಮೀಟಿಂಗ್‌ಗಳು ನಡೆದಾಗ ಇದನ್ನು ಒಂದು ಇಮೇಲ್ ಮೂಲಕವೇ ಮುಗಿಸಬಹುದಿತ್ತು ಎಂಬ ಮಾತನ್ನು ಬಳಸಲಾಗುತ್ತದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ಗೂಗಲ್ ಇಂಡಿಯಾ, ಪಾಕಿಸ್ತಾನದ ಏಕಪಕ್ಷೀಯ ಸೋಲನ್ನು ಕಂಡು ಕಾಲೆಳೆದಿದೆ. ಅಂದರೆ, ಪಾಕಿಸ್ತಾನ ಅಷ್ಟು ಸುಲಭವಾಗಿ ಶರಣಾಯಿತು ಎಂಬುದು ಇದರ ಅರ್ಥವಾಗಿದೆ.
ಭಾನುವಾರ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
ಪಾಕ್ ಬ್ಯಾಟರ್‌ಗಳ ಪತನ: ಬೌಲರ್‌ಗಳ ಮಿಂಚಿನ ದಾಳಿ
176 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿತು. ಹಾರ್ದಿಕ್ ಪಾಂಡ್ಯ ಮೊದಲ ಓವರ್‌ನಲ್ಲೇ ವಿಕೆಟ್ ಪಡೆದು ಶುಭಾರಂಭ ನೀಡಿದರು. ನಂತರ ಜಸ್‌ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಪಡೆಯುವ ಮೂಲಕ ಪಾಕ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಪಾಕಿಸ್ತಾನ ತಂಡವು 18 ಓವರ್‌ಗಳಲ್ಲಿ ಕೇವಲ 114 ರನ್‌ಗಳಿಗೆ ಆಲೌಟ್ ಆಯಿತು.
ಈ ಮೂಲಕ ಭಾರತ 61 ರನ್‌ಗಳ ಭರ್ಜರಿ ಜಯ ಸಾಧಿಸಿತು. ಇದು ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ರನ್‌ಗಳ ಆಧಾರದ ಮೇಲೆ ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಸಿಕ್ಕ ಅತಿದೊಡ್ಡ ಗೆಲುವಾಗಿದೆ,(ಏಜೆನ್ಸೀಸ್).