ಅಹ್ಮದಾಬಾದ್: ಗುಜರಾತ್ನ ಮೋಡಸಾ ಪಟ್ಟನದಲ್ಲಿ ಪತಿ ಸ್ಮಾರ್ಟ್ ಫೋನ್ ಖರೀದಿಸಿ ಕೊಡಲಿಲ್ಲ ಎಂಬ ಕಾರಣಕ್ಕೆ ಪತ್ನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ(ಜ. 18) ವರದಿಯಾಗಿದೆ.
ಉರ್ಮಿಳಾ ಆತ್ಮಹತ್ಯೆ ಮಾಡಿಕೊಂಡಿರುವ ಪತ್ನಿ. ಪತ್ನಿಯೊಂದಿಗೆ ಸ್ಥಳೀಯವಾಗಿ ಚೈನೀಸ್ ಫುಡ್ ವ್ಯಾಪಾರ ಮಾಡುತ್ತಿದ್ದಳು ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಪತಿ ಸ್ಮಾರ್ಟ್ ಫೋನ್ ಖರೀದಿಸಿ ಕೊಡುವಂತೆ ಕೇಳಿದ್ದಾಳೆ. ಆದರೆ ಪತಿ ಅದಕ್ಕೆ ಪ್ರಸ್ತುತ ಪರಿಸ್ಥಿತಿಯಲ್ಲಿ ಹಣವಿಲ್ಲ, ಮೊಬೈಲ್ ಕೊಡಿಸಲಾಗಲ್ಲ ಎಂದಿದ್ದಾನೆ.
ಇಷ್ಟಕ್ಕೆ ಇಬ್ಬರ ನಡುವೆ ಮನೆಯಲ್ಲಿ ಜಗಳವಾಡಿದ್ದು, ಕೊನೆ ಶನಿವಾರ(ಜ. 17) ಸಿಟ್ಟಿನಲ್ಲಿ ಮನೆಯ ಕೋಣೆಯಲ್ಲಿ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಮೃತ ಮಹಿಳೆ ಮತ್ತು ಆಕೆಯ ಪತಿ ನೇಪಾಳದಿಂದ ದಂಪತಿಗಳು ಉದ್ಯೋಗಕ್ಕಾಗಿ ಗುಜರಾತ್‌ಗೆ ಬಂದಿದ್ದರು. ಪ್ರಕರಣ ದಾಖಲಿಸಲಾಗಿದೆ. ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).