ರಾಯ್ಪುರ್: ಅರ್ನಬ್ ಚಂಡಮಾರುತ ಛತ್ತೀಸಗಢಕ್ಕೆ ತಲುಪಿದ ಹಿನ್ನಲೆ, ಆಕಾಶ ಕೆಂಪು ಬಣ್ಣಕ್ಕೆ ತಿರುಗಿರುವ ಆಘಾತಕಾರಿ ದೃಶ್ಯ ಈಗ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗಗುತ್ತಿದೆ.
ಅರ್ನಬ್ ಚಂಡಮಾರುತ ಪೂರ್ವ ಕರಾವಳಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಕೂಡ ತನ್ನ ಕೌರ್ಯವನ್ನು ಮರೆಯುತ್ತಿದೆ. ಆದರೆ, ಛತ್ತೀಸಗಢದ ಆಕಾಶ ಈಗ, ಈ ಅಪರೂಪದ ಕೆಂಪು ಬಣ್ಣಕ್ಕೆ ಬದಲಾಗಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಆದರೆ, ಈ ರೀತಿ ಆಕಾಶದ ಬಣ್ಣ ಬದಲಾಗಲೂ ಚಂಡಮಾರುತ ಕಾರಣವೇ? ಅಥವಾ ಈ ಅರ್ನಬ್ ಚಂಡಮಾರುತ ದೆಸೆಯಿಂದಲೇ ಈ ದೃಶ್ಯ ಕಂಡುಬಂದಿದೆ ಎನ್ನುವುದಕ್ಕೆ ಯಾವುದೇ ನೇರವಾದ ಸಾಕ್ಷಿ ದೊರೆತಿಲ್ಲ. ವಾತಾವರಣದ ಸ್ಥಿತಿಗತಿ, ಮೋಡಗಳು ಎಷ್ಟು ಕವಿದಿದೆ?, ಗಾಳಿಯಲ್ಲಿರುವ ಧೂಳು ಮತ್ತು ಸೂರ್ಯನ ಸ್ಥಾನ ಇವೆಲ್ಲವೂ ಆಕಾಶದಲ್ಲಿ ಕಾಣುವ ಬಣ್ಣಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ಹವಾಮಾನ ಇಲಾಖೆ ಹೇಳುತ್ತದೆ. ಹೀಗಾಗಿ ಈ ಕೆಂಪು ಬಣ್ಣಕ್ಕೆ ಅರ್ನಬ್ ಚಂಡಮಾರುತವೇ ನೇರ ಕಾರಣ ಎಂದು ಇಲ್ಲಿವರೆಗೆ ದೃಢಪಟ್ಟಿಲ್ಲ.
ಚಂಡಮಾರುತ ಕಾರಣವಲ್ಲ ಎಂದ ಮೇಲೆ, ಈ ಪರಿವರ್ತನೆಗೆ ಏನು ಕಾರಣ ಎಂಬ ಪ್ರಶ್ನೆ ಮೂಡುವುದು ಸಹಜ. ವಿಜ್ಞಾನ ಹೇಳುವ ಪ್ರಕಾರ, ನಿಸರ್ಗದಲ್ಲಿರುವ ಅಣುಗಳು ಹಾಗೂ ಸೂರ್ಯನ ಬೆಳಕಿನ ಕಿರಣಗಳ ಚುದುರುವಿಕೆಯಲ್ಲಿನ ವ್ಯತ್ಯಾಸಗಳಿಂದ ಆಕಾಶ ಕೆಂಪು ಬಣ್ಣಕ್ಕೆ ಬದಲಾಗುತ್ತದೆ ಎಂದು ಹೇಳಲಾಗುತ್ತದೆ.
ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ, ಸೂರ್ಯನ ಬೆಳಕು ವಾತಾವರಣದ ದೀರ್ಘ ಭಾಗದ ಮೂಲಕ ಹಾದುಹೋಗಬೇಕಾಗುತ್ತದೆ. ನೀಲಿ ಬಣ್ಣದಂತಹ ಕಡಿಮೆ ತರಂಗ ಹೊಂದಿರುವ ಬೆಳಕು ಹೆಚ್ಚು ಪ್ರಬಲವಾಗಿ ಚದುರಿಹೋಗುತ್ತದೆ. ಇದರಿಂದಾಗಿ ಕೆಂಪು ಮತ್ತು ಕಿತ್ತಳೆ ಬಣ್ಣಗಳಂತಹ ಹೆಚ್ಚು ತರಂತ ಹೊಂದಿರುವ ಬಣ್ಣಗಳು ಎದ್ದು ಕಾಣುತ್ತವೆ. ಹೀಗಾಗಿ ಆಕಾಶ ಕೆಂಪು ಬಣ್ಣಕ್ಕೆ ಬದಲಾದಂತೆ ಭಾಸವಾಗುತ್ತದೆ.
ಈ ವಿದ್ಯಮಾನವನ್ನು ಸಾಮಾನ್ಯವಾಗಿ 'ರೇಲಿ ಸ್ಕ್ಯಾಟರಿಂಗ್' (Rayleigh scattering) ಎಂದು ಹೇಳಲಾಗುತ್ತದೆ. ಆದಾಗ್ಯೂ, ಧೂಳು, ಹೊಗೆ ಮತ್ತು ನೀರಿನ ಹನಿಗಳಂತಹ ದೊಡ್ಡ ಕಣಗಳು ಸಹ ಬೇರೆ ರೀತಿಯ ಚದುರುವಿಕೆ ಪ್ರಕ್ರಿಯೆಗಳ ಮೂಲಕ ಬೆಳಕಿನ ಬಣ್ಣ ಮತ್ತು ತೀವ್ರತೆಯ ಮೇಲೆ ಪ್ರಭಾವ ಬೀರಬಲ್ಲವು ಎನ್ನಲಾಗುತ್ತದೆ.
ಈ ರೀತಿಯಾಗಿ ಆಕಾಶ ಕೆಂಪು ಬಣ್ಣಕ್ಕೆ ತಿರುಗುದರ ಹಿಂದೆ ವಿಜ್ಞಾನವಿದೆ. ಹೀಗಾಗಿ ಈ ವಿದ್ಯಮಾನವನ್ನು ಸಹಜವಾಗಿಯೇ ನೋಡಿ. ಅದರ ಬದಲು ಆಕಾಶ ಕೆಂಪು ಬಣ್ಣಕ್ಕೆ ತಿರುಗಿದರೆ ರಕ್ತದ ಮಳೆಯಾಗುತ್ತದೆ, ಊರಿನಲ್ಲಿ ಸಾವುಗಳಾಗುತ್ತವೆ, ರಾಕ್ಷಸಸ ಜನನವಾಗಿದೆ ಎಂಬೆಲ್ಲಾ ಮೂಢನಂಬಿಕೆಗಳನ್ನು ನಂಬುವ ಮೂರ್ಖತನ ಮಾಡಬೇಡಿ ಎಂದು ವಿಜ್ಞಾನಿಗಳು ಮನವಿ ಮಾಡಿದ್ದಾರೆ, (ಏಜೆನ್ಸೀಸ್).