ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಇಬ್ಬರು 92 ನೇ ವಯಸ್ಸಿಗೆ ನಿಧನ
- ಸಂಗೀತ ದಿಗ್ಗಜ ಆಶಾ ಭೋಸ್ಲೆ (92) ನಿಧನ
- ಸಾವಿನಲ್ಲೂ ಒಂದಾದ ಸಹೋದರಿಯರು
- ಲತಾ ಮಂಗೇಶ್ಕರ್ ಮತ್ತು ಆಶಾ ಭೋಸ್ಲೆ ಇಬ್ಬರು 92 ನೇ ವಯಸ್ಸಿಗೆ ನಿಧನ
ಮುಂಬೈ: ಇಂದು (ಏ.12) ರಂದು ಭಾರತದ ಸಂಗೀತ ಲೋಕದ ಧ್ರುವತಾರೆ, ಏಷ್ಯಾದ ನೈಟಿಂಗೆಲ್ ಖ್ಯಾತಿಯ ಆಶಾ ಭೋಸ್ಲೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ನಾಳೆ (ಏ.13) ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ವರ್ಗ ತಿಳಿಸಿದೆ.
ಸಾವಿನಲ್ಲೂ ಒಂದಾದ ಸಹೋದರಿಯರು!
ಆಶಾ ಭೋಸ್ಲೆ ಹಾಗೂ ಲತಾ ಮಂಗೇಶ್ಕರ್ (Asha Bhosle and Lata Mangeshkar) ಇವರಿಬ್ಬರು ಒಡಹುಟ್ಟಿದವರಾಗಿದ್ದಾರೆ. ಬಾಲ್ಯದಿಂದ ಮುಪ್ಪಿನವರೆಗೂ ಜೊತೆಯಲ್ಲೇ ಇದ್ದ ಈ ಸಹೋದರಿಯರು ಈಗ ಸಾವಿನಲ್ಲಿ ಸಹ ಒಂದಾಗಿದ್ದಾರೆ.
ಲತಾ ಮಂಗೇಶ್ಕರ್ ಅವರು ಫೆಬ್ರವರಿ 6, 2022 ರಂದು ತಮ್ಮ 92 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದರೆ, ಇಂದು ಆಶಾ ಭೋಸ್ಲೆ ಸಹ ಏಪ್ರಿಲ್ 12, 2026 ರಂದು ತಮ್ಮ 92 ನೇ ವಯಸ್ಸಿನಲ್ಲಿಯೇ ನಿಧನರಾಗಿದ್ದಾರೆ. ಈ ಮೂಲಕ ಸಹೋದರಿಯರು ಜೋಡಿಯಾಗಿ ಈಡೀ ಭಾರತೀಯ ಸಂಗೀತ ಲೋಕವನ್ನು ಆಳುವ ಜೊತೆಗೆ ಒಂದೇ ವಯಸ್ಸಿನಲ್ಲಿ ಇಬ್ಬರು ಸಾವನ್ನಪ್ಪಿದ್ದರು ಎಂದು ಸಂಗೀತ ಲೋಕ ಮರಗುತ್ತಿದೆ.
ಲತಾ ಮಂಗೇಶ್ಕರ್ಗೆ ಅಂತೀಮ ನಮನ ಸಲ್ಲಿಸಿದ್ದ ತಂಗಿ
ಭಾರತ ಸಂಗೀತ ಲೋಕದ ದಿಗ್ಗಜ ಹಿನ್ನಲೆ ಗಾಯಕಿ, ಲತಾ ಮಂಗೇಶ್ಕರ್ ಅವರು ಫೆಬ್ರವರಿ 6, 2022 ರಂದು ಕೋವಿಡ್ ಸೋಂಕಿಗೆ ತುತ್ತಾಗಿ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಈ ಸಂದರ್ಭದಲ್ಲಿ ಆಶಾ ಅವರು ಬಹಳ ನೊಂದು ಕೊಂಡಿದ್ದರು. ಕೆಲ ದಿನಗಳ ನಂತರದಲ್ಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನನ್ನ ನೆಚ್ಚಿನ ಅಕ್ಕನ ನೆನಪಿನಲ್ಲಿ ಎಂದು ಬರೆದು ಕೊಂಡಿದ್ದರು.
ಪದ್ಮ ಪ್ರಶಸ್ತಿ ಪಡೆದ ಸಹೋದರಿಯರು
ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದವರಿಗೆ ಭಾರತ ಸರ್ಕಾರವು ಪದ್ಮ ಪ್ರಶಸ್ತಿಯನ್ನು ನೀಡುತ್ತದೆ. ಅಂತೆಯೇ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಲತಾ ಮಂಗೇಶ್ಕರ್ ಅವರಿಗೆ 1969 ರಲ್ಲಿ ಪದ್ಮಭೂಷಣ, 1999 ರಲ್ಲಿ ಪದ್ಮ ವಿಭೂಷಣ ಮತ್ತು 2001 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನವನ್ನು ನೀಡಿ ಗೌರವಿಸಲಾಗಿದೆ. ಹಾಗೆಯೇ ಆಶಾ ಭೋಸ್ಲೆ ಅವರಿಗೆ 2008 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ, (ಏಜನ್ಸೀಸ್).