ಸೈಬರ್ ಅಪರಾಧ ಹಾಗೂ ಹನಿಟ್ರ್ಯಾಪ್ ಜಾಲದ ಬಗ್ಗೆ ಮಾಹಿತಿ ಹಂಚಿಕೊಂಡ ಏರ್ ಮಾರ್ಷಲ್ ಆಶುತೋಷ್ ದೀಕ್ಷಿತ್ 
ದೇಶ

ಭಾರತೀಯ ಸೇನೆಯಲ್ಲಿ 'ಹನಿಟ್ರ್ಯಾಪ್' ಭೂತ: ಸೈಬರ್ ಬೇಹುಗಾರಿಕೆ ಬಗ್ಗೆ ಏರ್ ಚೀಫ್ ಮಾರ್ಷಲ್ ಆಶುತೋಷ್ ದೀಕ್ಷಿತ್ ಹೇಳಿದ್ದೇನು? Ashutosh Dixit

ನವದೆಹಲಿ: ಕಳೆದ ಕೆಲ ದಿನಗಳಿಂದ ಎನ್ವಿಡಿಯಾ ಕಂಪನಿ ಮಾಜಿ ಸಿಇಒ ಜೆನ್ಸೆನ್ ಹುವಾಂಗ್, ಹನಿಟ್ರ್ಯಾಪ್​ಗೆ ಸಿಲುಕಿದ ನಂತರ ಜಗತ್ತಿನಾದ್ಯಂತ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

ಶತ್ರು ದೇಶದ ಪ್ರಮುಖ ಸ್ಥಾನದಲ್ಲಿರುವವರನ್ನು ಹನಿಟ್ರ್ಯಾಪ್​ ಮಾಡಿ, ದೇಶದ ಸೂಕ್ಷ್ಮ ಹಾಗೂ ಗೌಪ್ಯ ಮಾಹಿತಿಗಳನ್ನು ಪಡೆಯಲು ಇದೊಂದು ಸುಲುಭದ ಮಾರ್ಗವಾಗಿ ಮಾರ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ಈ ಚರ್ಚೆಯ ವೇಳೆ ಭಾರತದ ಸೇನಾಧಿಕಾರಿಗಳನ್ನು ಕೂಡ ಈ ಟ್ರ್ಯಾಪ್​ಗೆ ಬೀಳಿಸಲಾಗುತ್ತಿದ್ದು, ಕೆಲ ದಿನಗಳ ಹಿಂದೆ ವಾಯುಪಡೆ ಅಧಿಕಾರಿಯೊಬ್ಬರು, ಇದೇ ರೀತಿ ಹನಿಟ್ರ್ಯಾಪ್​ ಆಗಿದ್ದ ಬಗ್ಗೆ ವರದಿಯಾಗಿತ್ತು.

ಹನಿಟ್ರ್ಯಾಪ್​ ಸವಾಲಿನ ಒಂದು ರೂಪ!

ಭದ್ರತಾ ಸಿಬ್ಬಂದಿಗಳನ್ನು ಹನಿಟ್ರ್ಯಾಪ್​ಗೆ ಬೀಳಿಸುತ್ತಿರುವ ಬಗ್ಗೆ ಈದೀಗ ಮಾತನಾಡಿರು ಏರ್​ ಚೀಫ್​ ಮಾರ್ಷಲ್​ ಆಶುತೋಷ್​ ದಿಕ್ಷೀತ್​, ಈ ಹನಿಟ್ರ್ಯಾಪ್ ಎನ್ನುವುದು ಬೇಹುಗಾರಿಕೆ ಎಂಬ ವಿಶಾಲವಾದ ಸವಾಲಿನ ಒಂದು ರೂಪವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಹನಿಟ್ರ್ಯಾಪ್​, ಸೈಬರ್​ ಅಟ್ಯಾಕ್ ಮಾದರಿಯ ಚಟುವಟಿಕೆಗಳು ಹೆಚ್ಚಳವಾಗುತ್ತಿದ್ದು, ಇದನ್ನು ನಾವು ಸಮರ್ಥವಾಗಿ ಎದುರಿಸಲು ಮುಂದಾಗಬೇಕಿದೆ ಎಂದಿದ್ದಾರೆ.

ದೆಹಲಿಯಲ್ಲಿ ನಡೆದಿರುವ ಸೆಕ್ಯೂರಿಟಿ ಸಮಿತ್​ನಲ್ಲಿ ಮಾತನಾಡಿದ ಏರ್​ ಚೀಫ್​ ಮಾರ್ಷಲ್​ ಆಶುತೋಷ್​ ದಿಕ್ಷೀತ್​, ಈ ಹನಿಟ್ರ್ಯಾಪ್​ ಸೈಬರ್​ ಅಪರಾಧಕ್ಕೆ ಸಂಬಂಧಿಸಿದ ಗಂಭೀರ ಸ್ವರೂಪದ ದಾಳಿಯಾಗಿದೆ ಎಂದಿದ್ದಾರೆ. ಸೋಷಿಯಲ್​ ಮೀಡಿಯಾ, ಮಲ್ಟಿ ಲೆವೆಲ್​ ಮಾರ್ಕೆಟಿಂಗ್​, ಸಾಲ ನೀಡುತ್ತೇವೆ ಎಂದ ಆ್ಯಪ್​ಗಳು ಮೊದಲಾದ ಮೂಲಗಳ ಮೂಲಕ ಹನಿಟ್ರ್ಯಾಪ್​ಗೆ ಬೀಳಿಸಲಾಗುತ್ತಿದೆ.

ಇನ್ನೂ, ಈ ಹನಿಟ್ರ್ಯಾಪ್​ ಬೇಹುಗಾರಿಕೆ ಎಂಬ ಸಂಪೂರ್ಣ ಚಿತ್ರಣದ ಒಂದು ಭಾಗವಷ್ಟೇ ಆಗಿದೆ, ಇದು ಹಲವು ಆಯಾಮಗಳಲ್ಲಿ ಕೆಲಸ ಮಾಡುತ್ತಿದೆ. ಇದನ್ನು ನಾವು ಆದಷ್ಟು ಬೇಗ ಎದುರಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದ್ದಾರೆ.

ಹ್ಯಾಕ್​ ಮಾಡಲು ಸಾಧ್ಯವಿಲ್ಲ!

ಆದರೆ, ಭಾರತೀಯ ಸೇನೆಯಲ್ಲಿ, ಸೈನಿಕರ, ಅಧಿಕಾರಿಗಳ ಹಾಗೂ ಸೇನಾ ಮಾಹಿಗಳನ್ನು ಪಡೆಯುವ ಸಿಸ್ಟಮ್​ ಅನ್ನು ಹ್ಯಾಕ್​ ಮಾಡುವುದು ಸಾಧ್ಯವಾಗುವುದಿಲ್ಲ, ಈ ಕಾರಣಕ್ಕಾಗಿಯೇ, ವಿದೇಶಿ ಬೇಹುಗಾರರು, ಈ ಹನಿಟ್ರ್ಯಾಪ್​ ಮಾದರಿಯ ವಿಧಾನವನ್ನು ಬಳಸಿಕೊಳ್ಳುತ್ತಾರೆ ಎಂದಿದ್ದಾರೆ.

ಈ ಹನಿಟ್ರ್ಯಾಪ್​ ಎನ್ನುವುದು ಕೇವಲ ಒಂದು ಹುಡುಗಿ ಅಥವಾ ಯುವತಿ ನೇರವಾಗಿ ಪರಿಚಯವಾಗಿ, ನಡೆಯಲೇ ಬೇಕಂದಿಲ್ಲ. ಮಲ್ಟಿ ಲೆವೆಲ್​ ಮಾರ್ಕೆಟಿಂಗ್​ ಅಥವಾ ಸಾಲ ನೀಡುವ ಸೋಗಿನಲ್ಲಿ ಪರಿಚಯ ಮಾಡಿಕೊಂಡು, ಹನಿಟ್ರ್ಯಾಪ್​ ಮಾಡುವುದು ಕೂಡ ನಡೆಯುತ್ತಿದೆ. ಹೀಗಾಗಿ ಈ ಜಾಲದಿಂದ ಜಾಗರೂಕರಾಗಿರಬೇಕೆಂದು ತಿಳಿಸಿದ್ದಾರೆ.

ಕೆಲಸ ಪ್ರಗತಿಯಲ್ಲಿದೆ

ಅದರಲ್ಲೂ ಈ ಕೃತಕ ಬುದ್ಧಮತ್ತೆ ಪರಿಚಯವಾದ ನಂತರ, ಈ ಹನಿಟ್ರ್ಯಾಪ್​ ಬೇರೆಯ ಹಂತಕ್ಕೆ ತಲುಪಿದೆ. ನಿಜವಾಗಿ ಟ್ರ್ಯಾಪ್ ಆಗದೇ ಇದ್ದರೂ, ಇಲ್ಲ, ಟ್ರ್ಯಾಪ್ ಆಗಿದೆ ಎಂಬಂತೆ ಬಿಂಬಿಸಿ ತಮ್ಮ ಕೆಲಸ ಮಾಡಿಸಿಕೊಳ್ಳುವ ಜಾಲವೂ ಸಕ್ರೀಯವಾಗಿದೆ.

ನಾವು ಇದನ್ನೆಲ್ಲಾ ಬಹಳ ಹತ್ತಿರದಿಂದ ಗಮನಿಸುತ್ತಿದ್ದು, ಡಿಆರ್​​ಡಿಒ ಜತೆಗೆ ತಾವು ಸಂಪರ್ಕದಲ್ಲಿದ್ದು, ಸೇನಾಧಿಕಾರಿಗಳು, ಹಾಗೂ ಸೇನಾ ಸಿಬ್ಬಂದಿಗಳು, ಈ ರೀತಿಯ ಟ್ರ್ಯಾಪ್​ಗೆ ಒಳಗಾಗದಂತೆ ತಡೆಯುವ ಒಂದು ಸಾಪ್ಟ್​ವೇರ್ ವ್ಯವಸ್ಥೆಯನ್ನು ನಿರ್ಮಿಸಲು ಶುರುಮಾಡಿದ್ದಾಗಿ ಅವರು ತಿಳಿಸಿದ್ದಾರೆ. ಸೇನಾ ಸಿಬ್ಬಂದಿಗಳು, ತಮ್ಮ ಮೊಬೈಲ್​, ಲ್ಯಾಪ್​ಟಾಪ್​ ಸೇರಿದಂತೆ ಇತರ, ಡಿವೈಸ್​ಗಳ ಮೂಲಕ ಹೊರ ಜಗತ್ತಿಗೆ ತೆರೆದುಕೊಂಡರೂ, ಸೈಬರ್​ ಅಪರಾಧ ಜಾಲಕ್ಕೆ ಸಿಲುಕದಂತೆ ನೋಡಿಕೊಳ್ಳುವ ವ್ಯವಸ್ಥೆ ರೂಪಗೊಳ್ಳುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್​).