4 ಕಠಿಣ ಷರತ್ತುಗಳೊಂದಿಗೆ ಸಿಜೆಪಿ ನಾಯಕ ಆಶುತೋಶ್ ರಾಂಕಾ ಮಾತುಕತೆಗೆ ಸಿದ್ಧ
- NEET ಅಕ್ರಮ ವಿರೋಧಿ ಹೋರಾಟ ಯಶಸ್ಸು!
- ಕೇಂದ್ರ ಸರ್ಕಾರ ಮಾತುಕತೆಗೆ ಸಂಪರ್ಕಿಸಿದೆ
- 4 ಕಠಿಣ ಷರತ್ತುಗಳೊಂದಿಗೆ ಸಿಜೆಪಿ ನಾಯಕ ಆಶುತೋಶ್ ರಾಂಕಾ ಮಾತುಕತೆಗೆ ಸಿದ್ಧ
ನವದೆಹಲಿ: ಕಳೆದೆರಡು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಹೋರಾಟ ತೀವ್ರವಾಗುತ್ತಿದ್ದು, ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ಈ ಕುರಿತು ಅಧಿವೇಶನದಲ್ಲಿ ಚರ್ಚಿಸುವುದಾಗಿ ಹೇಳಿದ್ದು, ಸದ್ಯದಲ್ಲೇ ಪ್ರತಿಭಟನಾಕಾರರನ್ನು ಸಂಪರ್ಕಿಸುವುದಾಗಿ ತಿಳಿಸಿದ್ದಾರೆ.
ಅಂತಯೇ, ಸರ್ಕಾರ ನಮ್ಮನ್ನು ಸಂಪರ್ಕಿಸಿದ್ದು, ನಾವು ಸರ್ಕಾರದ ಜೊತೆ ಮಾತನಾಡಲು ಸಿದ್ದವಾಗಿದ್ದೆವೆ ಎಂದು ಕಾಕ್ರೋಚ್ ಜನತಾ ಪಾರ್ಟಿ ನಾಯಕ ಆಶುತೋಶ್ ರಾಂಕಾ (Ashutosh Ranka) ತಿಳಿಸಿದ್ದಾರೆ.
ನಮ್ಮ ಬೇಡಿಕೆ ಈಡೇರಬೇಕು!
ನಮ್ಮ ಹೋರಾಟ ಸರ್ಕಾರದ ಗಮನ ಸೆಳೆದಿದ್ದು, ಸರ್ಕಾರ ನಮ್ಮನ್ನು ಈಗಾಗಲೇ ಸಂಪರ್ಕಿಸಿದೆ, ಹಾಗೂ ನಾವು ಕೂಡ ಮಾತುಕತೆಗೆ ಸಿದ್ಧವಾಗಿದ್ದೆವೆ ಎಂದು ರಾಂಕಾ ಹೇಳಿದ್ದಾರೆ. ಈ ಮಾತುಕತೆ ಜಂತರ್-ಮಂತರ್ನಲ್ಲಿ ಅಥವಾ ಎರಡು ಪಕ್ಷದವರು ಒಪ್ಪುವ ಶಾಂತಯುತ ಸ್ಥಳದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರಕ್ಕೆ ನಾವು ಈಗಾಗಲೇ ಮೂರು ಬೇಡಿಕೆಗಳನ್ನು ಸಲ್ಲಿಸಿದ್ದೆವೆ {1.ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ, 2.ಸೋನಮ್ ವಾಂಗ್ಚುಕ್ ಜೊತೆ ಮಾತುಕತೆ, 3.ನೀಟ್ ಪರೀಕ್ಷೆ ಅಕ್ರಮದಿಂದ ಆತ್ಮಹತ್ಯೆಗೆ ಶರಣಾದ ಮಕ್ಕಳಿಗೆ ಒಂದು ಕೋಟಿ ಪರಿಹಾರ}, ಈಗ ನಮ್ಮ ನಾಲ್ಕನೇ ಬೇಡಿಕೆ ಏನೆಂದರೆ ಸೋಮವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯಾರ ಮೇಲೆ ಸಹ ಪ್ರಕರಣ ದಾಖಲಾಗಬಾರದು ಎನ್ನುವುದು ನಮ್ಮು ನಾಲ್ಕನೇ ಬೇಡಿಕೆಯಾಗಲಿದೆ ಎಂದಿದ್ದಾರೆ.
ನೀಟ್ ಬಗ್ಗೆ ಚರ್ಚೆಗೆ ಸಿದ್ಧ!
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲಿ ಪೊಲೀಸ್ ಲಾಠಿಚಾರ್ಜ್ ಖಂಡಿಸಿ ಕೇಂದ್ರದ ವಿರುದ್ಧ ವಿರೋಧ ಪಕ್ಷಗಳು ಹೋರಾಟ ತೀವ್ರಗೊಳಿಸುತ್ತಿದ್ದಂತೆ, ಬುಧವಾರ(ಜು. 22) ಕೇಂದ್ರ ಸರ್ಕಾರ ಸಂಸತ್ನಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಒಪ್ಪಿಕೊಂಡಿದೆ.
ಈ ಕುರಿತು ಲೋಕಸಭೆಯಲ್ಲಿ ವಿರೋಧ ಪಕ್ಷದ ಘೋಷಣೆಗಳು ಮತ್ತು ಪ್ರತಿಭಟನೆಗಳ ನಡುವೆಯೇ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಮಳೆಗಾಲದ ಅಧಿವೇಶನದಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯದ ಬಗ್ಗೆ ವಿವರವಾದ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ, (ಏಜನ್ಸೀಸ್).