ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಜತೆ ಗಗನಸಖಿ ಪಿಂಕಿ ಮಾಲಿ
- ವಿಮಾನ ದುರಂತದಲ್ಲಿ ನಿಧನರಾದ ಅಜಿತ್ ಪವಾರ್
- ಅಜಿತ್ ಪವಾರ್ ಜತೆಗಿದ್ದ ಗಗನಸಖಿ ಪಿಂಕಿ ಮಾಲಿ
- ಅಜಿತ್ ಪವಾರ್ ಜತೆಗಿದ್ದೆನೆ ನಾಳೆ ಕರೆ ಮಾಡ್ತಿನಿ ಎಂದ್ದಿದ್ದಳು: ಪಿಂಕಿ ಮಾಲಿ ತಂದೆ
ಮಹಾರಾಷ್ಟ್ರ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ಅಪಘಾತದ ನಂತರ ವಿಮಾನದ ಕ್ಯಾಬಿನ್ ಕ್ರಿವ್ ಸದಸ್ಯೆ ಪಿಂಕಿ ಮಾಲಿ ಮತ್ತು ಆಕೆಯ ತಂದೆ ನಡುವಿನ ಕೊನೆಯ ಫೋನ್ ಸಂಭಾಷಣೆ ಈದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಮುಂಬೈನ ವರ್ಲಿ ನಿವಾಸಿ ಪಿಂಕಿ, ಪಪ್ಪಾ, ನಾನು ಅಜಿತ್ ಪವಾರ್ ಜೊತೆ ಬಾರಾಮತಿಗೆ ಹಾರುತ್ತಿದ್ದೇನೆ. ಅವರನ್ನು ಇಳಿಸಿದ ನಂತರ, ನಾನು ನಾಂದೇಡ್‌ಗೆ ಹೋಗುತ್ತೇನೆ. ನಾನು ನಾಳೆ ಕರೆಮಾಡುತ್ತೇನೆ ಎಂದು ಪಿಂಕಿ ತನ್ನ ತಂದೆಯ ಬಳಿ ಕೊನೆಯ ಬಾರಿ ಮಾತನಾಡಿದ್ದಾಳೆ. ನಾನು ಅವಳಿಗೆ, ನಿನ್ನ ಕೆಲಸ ಮುಗಿದ ಮೇಲೆ ಕರೆ ಮಾಡುತ್ತೇನೆ. ಅಥವಾ ನಾಳೆ ಕರೆ ಮಾಡುತ್ತೇನೆ ಎಂದು ಹೇಳಿದೆ. ಆದರೆ ಆ ನಾಳೆ ಎಂದಿಗೂ ಬರುವುದಿಲ್ಲ ಎಂದು ಪಿಂಕಿ ತಂದೆ ಶಿವಕುಮಾರ್ ಕಣ್ಣೀರನ್ನು ಸುರಿಸಿದ್ದಾರೆ.
ನನ್ನ ಮಗಳು ಅಜಿತ್ ಪವಾರ್ ಅವರ ಬಹುತೇಕ ಪ್ರವಾಸಗಳಲ್ಲಿ ಜತಗೆ ಹೋಗುತ್ತಿದ್ದಳು, ನನಗೆ ಘಟನೆ ಬಗ್ಗೆ ಇನ್ನೂ ನಿಖರವಾಗಿ ಏನು ತಿಳಿದಿಲ್ಲ, ಆದರೆ ನಾನು ನನ್ನ ಮಗಳನ್ನಂತು ಕಳೆದುಕೊಂಡಿದ್ದೇನೆ, ಅವಳ ಅಂತ್ಯ ಸಂಸ್ಕಾರವನ್ನು ನೆರವೇರಿಸಲು ಅವಳ ಶರೀರವನ್ನು ನೀಡಿದರೆ ಸಾಕು ಎಂದು ಹೇಳಿದ್ದಾರೆ.
ಬುಧವಾರ (ಜ.28) ಬೆಳಿಗ್ಗೆ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಅಪಘಾತ ಸಂಭವಿಸಿದ್ದು, ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್ ನಿರ್ವಹಿಸುವ ವಿಟಿ-ಎಸ್‌ಎಸ್‌ಕೆ ನೋಂದಣಿ ಹೊಂದಿರುವ ಲಿಯರ್‌ಜೆಟ್ 45 ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್, ವೈಯಕ್ತಿಕ ಭದ್ರತಾ ಅಧಿಕಾರಿ ವಿದೀಪ್ ಜಾಧವ್, ವಿಮಾನ ಸಹಾಯಕಿ ಪಿಂಕಿ ಮಾಲಿ, ಪೈಲಟ್-ಇನ್-ಕಮಾಂಡ್ ಸುಮಿತ್ ಕಪೂರ್ ಮತ್ತು ಸೆಕೆಂಡ್-ಇನ್-ಕಮಾಂಡ್ ಶಾಂಭವಿ ಪಾಠಕ್ ಇದ್ದರು.
ವಿಮಾನದ ವಿವರಗಳ ಪ್ರಕಾರ, ವಿಮಾನವು ಬೆಳಿಗ್ಗೆ 8:10 ಕ್ಕೆ ಮುಂಬೈನಿಂದ ಹೊರಟು 8:45 ರ ಸುಮಾರಿಗೆ ರಾಡಾರ್‌ನಿಂದ ಕಣ್ಮರೆಯಾಯಿತು, ಬೆಳಿಗ್ಗೆ 8:50 ಕ್ಕೆ ಪತನವಾಯಿತು. ಫೆಬ್ರವರಿ 5 ರಂದು ಜಿಲ್ಲಾ ಪರಿಷತ್ ಚುನಾವಣೆಗೆ ಮುಂಚಿತವಾಗಿ ಪುಣೆ ಜಿಲ್ಲೆಯಲ್ಲಿ ನಾಲ್ಕು ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲು ಪವಾರ್ ತೆರಳುತ್ತಿದ್ದರು,(ಏಜನ್ಸೀಸ್).