ದೇಶದ ಶಿಕ್ಷಣ ವ್ಯವಸ್ಥೆ ಆರ್ಎಸ್ಎಸ್ (RSS) ನಿಯಂತ್ರಣದಲ್ಲಿದೆ : ರಾಹುಲ್ ಗಾಂಧಿ
- ಪರೀಕ್ಷಾ ಅಕ್ರಮ ತಡೆ ಮಸೂದೆ ಕುರಿತ ಅಧಿವೇಶನದಲ್ಲಿ ಚರ್ಚೆ
- ದೇಶದ ಶಿಕ್ಷಣ ವ್ಯವಸ್ಥೆ ಆರ್ಎಸ್ಎಸ್ (RSS) ನಿಯಂತ್ರಣದಲ್ಲಿದೆ : ರಾಹುಲ್ ಗಾಂಧಿ
- ಉತನ್ನ ಸ್ತರದಲ್ಲಿರುವ ಶೈಕ್ಷಣಿಕ ಅಧಿಕಾರಿಗಳು ಸಂಘದೊಂದಿದೆ ಸಂಪರ್ಕ ಹೊಂದಿದ್ದಾರೆ
ನವದೆಹಲಿ: ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮವನ್ನು ವಿರೋಧಿಸಿ, ಜಂತರ್-ಮಂತರ್ನಲ್ಲಿ ನಡೆದ ಪ್ರತಿಭಟನೆ ತರುವಾಯ ಕೇಂದ್ರ ಸರ್ಕಾರ ಪರೀಕ್ಷಾ ಅಕ್ರಮಗಳನ್ನು ತಡೆಯಲು ಮಸೂದೆಯೊಂದನ್ನು ಸಿದ್ಧಪಡಿಸಿದ್ದು, ಇಂದು (ಬುಧವಾರ, ಜು.29) ಸಂಸತ್ನಲ್ಲಿ ತೀವ್ರ ಚರ್ಚೆ ನಡೆದಿದೆ.
ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಲೋಕಸಭೆಯ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi on RSS), ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಲ್ಲಿ ಆರ್ಎಸ್ಎಸ್ ಹಿನ್ನಲೆವುಳ್ಳವರೇ ಅಧಿಕಾರದಲ್ಲಿದ್ದಾರೆ, ಶಿಕ್ಷಣ ವ್ಯವಸ್ಥೆ ಆರ್ಎಸ್ಎಸ್ ಕೈಯಲ್ಲಿದೆ ಎಂದು ಕಿಡಿಕಾರಿದ್ದಾರೆ.
ಶಿಕ್ಷಣ ವ್ಯವಸ್ಥೆ ಆರ್ಎಸ್ಎಸ್ ಕೈಯಲ್ಲಿದೆ!
ಮಸೂದೆ ಕುರಿತು ಆರಂಭವಾದ ಚರ್ಚೆಯನ್ನು ಆರ್ಎಸ್ಎಸ್ ಕಡೆ ಕೊಂಡೊಯ್ದ ರಾಹುಲ್ ಗಾಂಧಿ, ಪ್ರತಿಭಟನೆಗೆ ಮಣಿದು ಕೇಂದ್ರ ಸರ್ಕಾರ ಶಿಕ್ಷಣ ಸಚಿವರಾಗಿದ್ದ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಸ್ವೀಕರಿಸಿದೆ. ಆದರೆ ಈ ರಾಜೀನಾಮೆಯಿಂದ ಏನು ಪ್ರಯೋಜನವಿಲ್ಲ, ದೇಶದ ಬಹುತೇಕ ಶಿಕ್ಷಣ ಸಂಸ್ಥೆಗಳು ಆರ್ಎಸ್ಎಸ್ ಕೈಯಲ್ಲಿದೆ ಎಂದು ಹೇಳಿದ್ದಾರೆ.
ದೇಶದ ಎಲ್ಲಾ ಸ್ತರದ ಉತ್ತಮ ಶೈಕ್ಷಣಿಕ ಅಧಿಕಾರಿ ಆರ್ಎಸ್ಎಸ್ ಹಿನ್ನಲೆ ಉಳ್ಳವರೇ ಆಗಿದ್ದಾರೆ. ಹಾಗೆಯೇ ಹೆಚ್ಚು ಕಡಿಮೆ ಎಲ್ಲಾ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಆರ್ಎಸ್ಎಸ್ ಕಾರ್ಯಕರ್ತರು ಅಥವಾ ಆರ್ಎಸ್ಎಸ್ ಜೊತೆ ನಿಕಟ ಸಂಪರ್ಕ ಹೊಂದಿದವರೇ ಆಗಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಹುಲ್ ಮಾತು ಅಸಂವಿಧಾನಿಕ!
ಚರ್ಚೆ ಆರಂಭಿಸಿದ ರಾಹುಲ್ ಗಾಂಧಿ, ವಿದ್ಯಾರ್ಥಿಗಳೇ, ಮೂರ್ಖರೇ ಹಾಗೂ ಅಂಧಭಕ್ತರೇ ಎಂದು ಹೇಳುವ ಮೂಲಕ ಮಾತನ್ನು ಪ್ರಾರಂಭಿಸಿದರು. ಈ ಹೇಳಿಕೆ ಆಡಳಿತ ಪಕ್ಷದವರ ಕೆಂಗಣ್ಣಿಗೆ ಗುರಿಯಾಗಿದ್ದು, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು, ರಾಹುಲ್ ಗಾಂಧಿ ಉಪಯೋಗಿಸಿದ ಪದಗಳು ಅಸಾಂವಿಧಾನಿಕವಾಗಿದೆ, ನಾವು ಈ ವಿಷಯದ ಕುರಿತು ಮುಕ್ತ ಚರ್ಚೆಗೆ ನಿರ್ಧರಿಸಿದ್ದು, ವಿರೋಧ ಪಕ್ಷದವರು ಮಾತನಾಡುವಾಗ ಅಡ್ಡಿ ಪಡಿಸುವುದಿಲ್ಲ. ಅದರೆ ಅವರಿಗೆ ಅಸಂವಿಧಾನಿಕ ಪದಗಳನ್ನು ಬಳಸಲು ಯಾವುದೇ ಅವಕಾಶವಿಲ್ಲ, ಇದನ್ನು ನೀವು ತಡೆಯಬೇಕೆಂದು ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ಮನವಿ ಮಾಡಿದ್ದಾರೆ, (ಏಜನ್ಸೀಸ್).