ಸೋನಮ್ ವಾಂಗ್‌ಚುಕ್ ಹೋರಾಟಕ್ಕೆ ಮೆಹಬೂಬಾ ಮುಫ್ತಿ ಬೆಂಬಲ
- ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರವಾದಿ ಸೋನಮ್ ವಾಂಗ್‌ಚುಕ್
- ನೀಟ್ ಪರೀಕ್ಷಾ ಅಕ್ರಮ ವಿರೋಧಿಸಿ ಉಪವಾಸ ಸತ್ಯಾಗ್ರಹ
- ಸೋನಮ್ ವಾಂಗ್‌ಚುಕ್ ಹೋರಾಟಕ್ಕೆ ಮೆಹಬೂಬಾ ಮುಫ್ತಿ ಬೆಂಬಲ
- ವಾಂಗ್‌ಚುಕ್ ಜೀವ ಉಳಿಸಲು ಅಗತ್ಯ ವೈದ್ಯಕೀಯ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಸರ್ಕಾರಕ್ಕೆ ಆದೇಶ
ಜಮ್ಮು-ಕಾಶ್ಮೀರ: ನೀಟ್ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಪರಿಸರವಾದಿ ಸೋನಮ್ ವಾಂಗ್‌ಚುಕ್ ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ 20 ದಿನಗಳಿಂದ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.
ಈ ಹೋರಾಟಕ್ಕೆ ಈಗ ದೇಶಾದ್ಯಂತ ಬೆಂಬಲ ಹಾಗೂ ಅಷ್ಟೇ ಮಟ್ಟದ ವಿರೋಧವು ಕಂಡುಬರುತ್ತಿದೆ. ಈ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ್ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ (Mehbooba Mufti on Sonam Wangchuk), ಸೋನಮ್ ವಾಂಗ್‌ಚುಕ್ ಅವರ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದ್ದಾರೆ.
ಬ್ರಿಟಿಷರು ಭಾರತ ಬಿಟ್ಟರೂ; ಮನಸ್ಥಿತೆ ಹಾಗೆಯೇ ಇದೆ!
ದೆಹಲಿಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ಅವರ ರಾಜೀನಾಮೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್‌ಚುಕ್ ಇಂದು ತಮ್ಮ ಹೋರಾಟದ 20 ನೇ ದಿನಕ್ಕೆ ಕಾಲಿಟ್ಟಿದ್ದಾರೆ.
ಈಗ ಈ ಹೋರಾಟವನ್ನು ಬೆಂಬಲಿಸಿ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ದೆಹಲಿಯಲ್ಲಿ ಸೋನಮ್ ವಾಂಗ್‌ಚುಕ್ ಉಪವಾಸ ನಡೆಸುತ್ತಿದ್ದರೆ, ಕೇಂದ್ರ ಸರ್ಕಾರ ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ, ಜೆನ್ ಝಿ ಗಳ ಸಲುವಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ವಾಂಗ್‌ಚುಕ್ ಅವರನ್ನು ನೋಡಿದರೆ ಸ್ವಾಂತತ್ರ್ಯ ಹೋರಾಟಗಾರರ ನೆನಪಾಗುತ್ತದೆ. ನಮ್ಮ ದೇಶದಿಂದ ಬ್ರಿಟಿಷರು ತೊಲಗಿರಬಹುದು ಆದರೆ ಅವರ ಮನಸ್ಥಿತಿ ಹಾಗೆಯೇ ಉಳಿದಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಮುಫ್ತಿ ಗರಂ ಆಗಿದ್ದಾರೆ.
ವಾಂಗ್‌ಚುಕ್ ಸಾಯದಂತೆ ನೋಡಿಕೊಳ್ಳಿ!
ಸೋನಮ್ ವಾಂಗ್‌ಚುಕ್ ಅವರ ಉಪವಾಸ 18 ನೇ ದಿನ ತಲುಪಿದ ಹಿನ್ನಲೆ, ಈ ಉಪವಾಸ ಸತ್ಯಾಗ್ರಹ ಹೀಗೆ ಮುಂದುವರಿದರೆ ಸೋನಮ್ ವಾಂಗ್‌ಚುಕ್ ಸಾಯುತ್ತಾರೆಂದು, ಕೇಂದ್ರ ಸರ್ಕಾರ ಈ ಕುರಿತು ಏನಾದರೂ ಕ್ರಮ ತೆಗೆದುಕೊಳ್ಳಬೇಕೆಂದು ಕೋರಿ ದೆಹಲಿ ಹೈಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಪ್ರತಿಯೊಬ್ಬ ಪ್ರಜೆಯ ಜೀವ ಅಮೂಲ್ಯವಾಗಿದ್ದು, ಸೋನಮ್ ವಾಂಗ್‌ಚುಕ್ ಅವರ ಪ್ರಾಣವನ್ನು ಉಳಿಸಲು ಬೇಕಾದ ಎಲ್ಲಾ ವೈಧ್ಯಕೀಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬಹುದು ಎಂದು ನ್ಯಾಯಾಲಯ ಆದೇಶಿಸಿದೆ, (ಏಜನ್ಸೀಸ್).