ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ!
- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದ ಅಂತ್ಯ
- ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ!
- ಸೆನ್ಸೆಕ್ಸ್ 1,707 ಹಾಗೂ ನಿಫ್ಟಿ 521 ಅಂಕ ಪತನಗೊಂಡರೆ, ಕಚ್ಚಾ ತೈಲ ಬೆಲೆ ಶೇ. 6 ರಷ್ಟು ಜಿಗಿದಿದೆ
- . ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಮಾರುತಿ, ಬಜಾಜ್ ಫೈನಾನ್ಸ್ ಸೇರಿದಂತೆ ಪ್ರಮುಖ ಷೇರುಗಳು ಧೂಳೀಪಟ
ಮುಂಬೈ: ಕಳೆದ ನಾಲ್ಕು ತಿಂಗಳಿನಿಂದ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿದ್ದ ಸಂಘರ್ಷವನ್ನು ಶಾಂತಿ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ಊಹಿಸಿದ್ದು, ಈಗ ಸುಳ್ಳಾಗಿದೆ.
ಇರಾನ್ ಜೊತೆ ನಾವು ಮಾಡಿಕೊಂಡಿದ್ದ ಮಂಧ್ಯಂತರ ಒಪ್ಪಂದವು ಇಲ್ಲಿಗೆ ಕೊನೆಗೊಂಡಿದೆ, ನಮ್ಮಿಬ್ಬರ ನಡುವಿನ ಕದನ ವಿರಾಮ ಇಂದಿನಿಂದ ಮುಂದುವರಿಯುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುತ್ತಿದ್ದಂತೆ ಇತ್ತ ಷೇರು ಮಾರುಕಟ್ಟೆಯಲ್ಲಿ (Share Market Crash) ಮತ್ತೆ ಕರಡಿ ಕುಣಿತ ಪ್ರಾರಂಭವಾಗಿದೆ.
1,707 ಕುಸಿದ ಸೆನ್ಸೆಕ್ಸ್; 521 ಕುಸಿದ ನಿಫ್ಟಿ!
ವಾಷಿಂಗ್ಟನ್ನಲ್ಲಿ ಕುಳಿತುಕೊಂಡಿರುವ ಡೊನಾಲ್ಡ್ ಟ್ರಂಪ್, ಇರಾನ್ ಜೊತೆ ನಾವು ಮಾಡಿಕೊಂಡಿದ್ದ ಕದನ ವಿರಾಮ ಇಲ್ಲಿಗೆ ಮಗಿದಿದೆ, ಇನ್ನು ನಮ್ಮ ನಡುವೆ ಯಾವುದೇ ಒಪ್ಪಂದವಿಲ್ಲ ಎಂದು ಹೇಳುತ್ತಿದ್ದಂತೆ ಷೇರು ಮಾರಿಕಟ್ಟೆ ಸಂಪೂರ್ಣ ಕೆಪ್ಪು ವರ್ಣಕ್ಕೆ ತಿರುಗಿದೆ.
ಬಾಂಬೆ ಸ್ಟಾಕ್ ಎಕ್ಸ್ಚೆಂಜ್ನಲ್ಲಿ ಸೆನ್ಸೆಕ್ಸ್ ಸುಮಾರು 1,707.94 ಪಾಯಿಂಟ್ಗಳ ಕುಸಿತ ಕಂಡಿದ್ದು, 76,,472.78 ಅಂಕಗಳೊಂದಿಗೆ ಈ ದಿನದ ವ್ಯಾಪರ ಮುಗಿಸಿದೆ. ಇನ್ನೊಂದು ಕಡೆ ನಿಫ್ಟಿ 50 ಯಲ್ಲಿ ಕೂಡ ಹಿಂಜರೆತ ಕಂಡಿದ್ದು ಇದು 521.2 ಪಾಯಿಂಟ್ಗಳ ಕುಸಿತದೊಂದಿದೆ 23,877.50 ಕ್ಕೆ ದಿನದ ವ್ಯವಹಾರ ಮುಗಿಸಿದೆ.
ಇಂಟರ್‌ಗ್ಲೋಬ್ ಏವಿಯೇಷನ್, ಮಾರುತಿ, ಹಿಂದೂಸ್ತಾನ್ ಯೂನಿಲಿವರ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫೈನಾನ್ಸ್ ಮತ್ತು ಮಹೀಂದ್ರಾ & ಮಹೀಂದ್ರಾ ಈ ಕಂಪನಿಗಳ ಷೇರುಗಳು ಅತ್ಯಂತ ಹೆಚ್ಚಿನ ಕುಸಿತವನ್ನು ಅನುಭವಿಸಿವೆ. ಇದರ ಜೊತೆಗೆ ಕಚ್ಚಾ ತೈಲದ ಬೆಲೆ ಕೂಡ ಏರಿಕೆ ಕಂಡಿದ್ದು, ಶೇ.6 ರಷ್ಟು ಬೆಲೆ ಹೆಚ್ಚಳದೊಂದಿದೆ ಬ್ಯಾರೆಲ್ ಕಚ್ಚಾ ತೈಲದ ಬೆಲೆ ಈಗ 78.75 ಡಾಲರ್ ತಲುಪಿದೆ.
ಟರ್ಕಿ ದೇಶದಲ್ಲಿ ನಡೆಯುತ್ತಿದ್ದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ನ ನಾಯಕರು ಮಾನಸಿಕ ಅಸ್ವಸ್ಥರು, ಅವರೊಂದಿಗೆ ಮಾತುಕತೆ ನಡೆಸುವುದು ವ್ಯರ್ಥ, ಹೀಗಾಗಿ ನಾವು ಕದನ ವಿರಾಮವನ್ನು ಕೊನೆಗೊಳಿಸುತ್ತಿದ್ದೆವೆ ಎಂದಿದ್ದಾರೆ.
ಅದರೆ ಇರಾನ್ ಜೊತೆಗಿನ ರಾಜತಾಂತ್ರಿಕ ಮಾತುಕತೆ ಮುಂದುವರಿಯಲು ಅನುಮತಿ ನೀಡಲಾಗಿದೆ, ನಮ್ಮ ಸಂಧಾನಕಾರರು ಅವರ ಪ್ರಯತ್ನವನ್ನು ನಡೆಸುತ್ತಿದ್ದಾರೆ, ಆದರೆ ಈ ಇರಾನ್ನ ಆಡಳಿತಗಾರರು ಸರಿಯಿಲ್ಲ ಎಂದು ಟ್ರಂಪ್ ಕಠಿಣ ಶಬ್ದಗಳನ್ನು ಪ್ರಯೋಗಿಸಿದ್ದಾರೆ.
ಟ್ರಂಪ್ನ ಈ ಹೇಳಿಕೆಯಿಂದಾಗಿ ಜಾಗತಿಕ ಷೇರು, ತೈಲ ಹಾಗೂ ಚಿನ್ನದ ಮಾರಿಕಟ್ಟೆಯಲ್ಲಿ ಭಾರಿ ಹಿಂಜರೆತ ಕಂಡುಬಂದಿದೆ. ಇದರೊಟ್ಟಿಗೆ ಮತ್ತೆ ಹೊರ್ಮುಜ್ ಜಲಸಂಧಿ ಮುಚ್ಚಿದರೆ, ಆಮದು-ರಫ್ತು ಯಾವ ರೀತಿ ನಡೆಯಲಿದೆ? ಎಂಬ ಯಕ್ಷ ಪ್ರಶ್ನೆ ಎಲ್ಲರ ನಿದ್ದೆಯನ್ನು ಹಾಳುಮಾಡುತ್ತಿದೆ, (ಏಜನ್ಸೀಸ್).