ಕಾಲೇಜಿನ ಸ್ಟಾಫ್ ರೂಮ್‌ಗೆ ನುಗ್ಗಿ ಶಿಕ್ಷಕನಿಗೆ ಮನಬಂದಂತೆ ಥಳಿಸಿದ ಸಬ್ ಇನ್ಸ್‌ಪೆಕ್ಟರ್! 
ದೇಶ

ಮಗನಿಗೆ ಕಾಪಿ ಮಾಡಲು ಬಿಡದ ಶಿಕ್ಷಕ: ಗುರುಗಳಿಗೆ ಗುನ್ನಾ ಕೊಟ್ಟ ಪೊಲೀಸ್​​ ಅಪ್ಪ; ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​​! Viral Video

ಪ್ರಮುಖ ಮುಖ್ಯಾಂಶಗಳು

  • ಪರೀಕ್ಷೆಯಲ್ಲಿ ಮಗನಿಗೆ ಕಾಪಿ ಮಾಡಲು ಬಿಡದ ಶಿಕ್ಷಕ
  • ಕಾಲೇಜಿನ ಸ್ಟಾಫ್ ರೂಮ್‌ಗೆ ನುಗ್ಗಿ ಶಿಕ್ಷಕನಿಗೆ ಮನಬಂದಂತೆ ಥಳಿಸಿದ ಸಬ್ ಇನ್ಸ್‌ಪೆಕ್ಟರ್!
  • ಸಿಸಿಟಿವಿ ವಿಡಿಯೋ ವೈರಲ್​​
  • ಪೊಲೀಸ್​ ಫಾಧರ್​ ಕೆಲಸದಿಂದ ಅಮಾನತ್​​
ಡೆಹರ್ರಾಡೂನ್​: ಪರೀಕ್ಷೆಯಲ್ಲಿ ನಕಲು ಮಾಡುತ್ತಾ ಸಿಕ್ಕಿಬಿದ್ದ ಮಗನಿಗೆ ಬುದ್ಧಿಮಾತು ಹೇಳುವ ಬದಲು ಕಾಲೇಜಿಗೆ ನುಗ್ಗಿ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಸಬ್​-ಇನ್ಸ್​ಪೆಕ್ಟರ್​ ಒಬ್ಬ ಅಮಾನತ್ತಾಗಿರುವ ಘಟನೆ ಉತ್ತರಾಖಂಡ್​ ರಾಜ್ಯದ ಡೆಹರ್ರಾಡೂನ್​ನಲ್ಲಿ ನಡೆದಿದೆ.
ಮಗನಿಗೆ ಪರೀಕ್ಷೆಯಲ್ಲಿ ನಕಲು ಮಾಡಲು ತಡೆದ ಶಿಕ್ಷಕನ ಮೇಲೆ ಪೊಲೀಸ್​ ಫಾಧರ್​ ದಾಳಿ ಮಾಡಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್ (Viral Video)​ ಆಗುತ್ತಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋನಲ್ಲಿ, ನಕಲು ಮಾಡಿ ಸಿಕ್ಕಿಬಿದ್ದ ಮಗನ ಜೊತೆಗೆ ಬಂದ ಅಪ್ಪ ಹಾಗೂ ಇನ್ನೊಬ್ಬ ವ್ಯಕ್ತಿ, ಸ್ಟಾಫ್​ ರೂಮ್​ಗೆ ನುಗ್ಗಿ ಮಗ ತೋರಿಸಿದ ಶಿಕ್ಷಕನ ಮೇಲೆ ಮನಸೋ ಇಚ್ಛೇ ಧಳಿಸಿರುವ ವಿಡಿಯೋ ಸಿಸಿಟಿವಿ ಕ್ಯಾಮರಾನಲ್ಲಿ ಸೆರೆಯಾಗಿದೆ.
ಏನಿದು ಘಟನೆ?
ಜೂನ್​ 4 ರಂದು ಪಿತ್ತುವಾಲಾದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೊನೆಯ ವರ್ಷದ ಲಿಖಿತ ಪರೀಕ್ಷೆ ನಡೆಯುತ್ತಿತ್ತು. ಅಂತಿಮ ವರ್ಷದ ಕಬೀರ್​ ಖಂಡವಾಲ್​ ಎಂಬ ವಿದ್ಯಾರ್ಥಿ ಅಕ್ಕ-ಪಕ್ಕದಲ್ಲಿದ್ದ ಇತರ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ನಕಲು ಮಾಡಿ ಬರೆಯುತ್ತಿದ್ದ.
ಇದನ್ನು ಗಮನಿಸಿದ ಶಿಕ್ಷಕರು ಮೊದಲು ಹುಡುಗನಿಗೆ ಎಚ್ಚರಿಕೆ ನೀಡಿದ್ದಾರೆ. ನಂತರ ನಕಲು ಮಾಡದಂತೆ ತಡೆದಿದ್ದಾರೆ. ಆಗ ಈ ವಿದ್ಯಾರ್ಥಿ, ನನ್ನಪ್ಪ ಪೊಲೀಸ್​ ಅಧಿಕಾರಿ ಇದ್ದಾರೆ, ನನಗೆ ನಕಲು ಮಾಡಲು ಬಿಡಿ ಇಲ್ಲದಿದ್ದರೆ ಪರಿಸ್ಥಿತಿ ಸರಿಯಿರಲ್ಲ ಎಂದು ಧಮಕಿ ಹಾಕಿದ್ದಾನೆ. ಆದರೆ ಇದಕ್ಕೆ ಜಗ್ಗದ ಶಿಕ್ಷಕರು ನಕಲು ಮಾಡಲು ಅವಕಾಶ ನೀಡಿಲ್ಲ.

ಪೊಲೀಸ್​ ಮೇಲೆ ಪೊಲೀಸ್​ ಕ್ರಮ!

ಮಾರನೇ ದಿನ ವಿದ್ಯಾರ್ಥಿ ತನ್ನ ಅಪ್ಪನನ್ನು ಕಾಲೇಜಿಗೆ ಕರೆತಂದು ಶಿಕ್ಷಕರ ಮೇಲೆ ಹಲ್ಲೆ, ವಿದ್ಯಾಸಂಸ್ಥೆಯ ಉಪಕರಣಗಳನ್ನು ನಾಶ ಪಡಿಸಿದ್ದಾನೆ. ನಂತರ ಈ ಕುರಿತು ಪೊಲೀಸರಲ್ಲಿ ದೂರು ದಾಖಲಾಗಿದ್ದು, ಸಬ್​ ಇನ್ಸ್​ಪರಕ್ಟರ್​​ನನ್ನು ಅಮಾನತ್​ ಮಾಡಲಾಗಿದೆ ಹಾಗೂ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಕಠಿಣ ಕ್ರಮ ಕೈಗೊಳ್ಳುದಾಗಿ ಪೊಲೀಸರು ತಿಳಿಸಿದ್ದಾರೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರ ಕೋಪದ ಕಟ್ಟೆ ಒಡೆದು ಹೋಗಿದೆ. ಮಗನಿಗೆ ಕಾಪಿ ಮಾಡಲು ಕೊಡಲಿಲ್ಲ ಎಂದು ಶಿಕ್ಷಕರ ಮೇಲೆ ಕೈ ಮಾಡಿದ ಈ ಪೊಲೀಸ್​ಗೆ ಜೈಲಿಗೆ ಹಾಕಿ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಇಂತಹ ಅಪ್ಪಿಂದರ ದೆಸೆಯಿಂದಲೇ ಮಕ್ಕಳು ಹಾದಿ ತಪ್ಪುವುದೆಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಮಗನಿಗೆ ಉತ್ತಮ ಸಂಸ್ಕಾರ ಕೊಡಲಾಗದಿದ್ದವನು ಸಮಾಜಕ್ಕೆ ಏನು ಕೊಟ್ಟಾನು ಎಂದು ಮತ್ತೊಬ್ಬರು ಮಾರ್ಮಿಕವಾಗಿ ಹೇಳಿದ್ದಾರೆ, (ಏಜನ್ಸೀಸ್​).