Kerala farmer Organic farming post retirement (AI Image))
- ಕೇರಳದ ಕೋಝಿಕ್ಕೋಡ್ ಮೂಲದ 63 ವರ್ಷದ ಕೆ.ಟಿ. ಫ್ರಾನ್ಸಿಸ್ ಕೃಷಿಕ
- ದೈಹಿಕ ಶಿಕ್ಷಕರಾಗಿ ನಿವೃತ್ತಿ ಪಡೆದ ನಂತರ ಅಡಿಕೆ, ಕಾಳು ಮೆಣಸು ಬೆಳೆದ ಫ್ರಾನ್ಸಿಸ್
- ವಾರ್ಷಿಕ ಆದಾಯ ಮೂವತ್ತೈದು ಲಕ್ಷಕ್ಕೂ ಹೆಚ್ಚು ಗಳಿಸುತ್ತಿರುವ ಫ್ರಾನ್ಸಿಸ್
Kerala farmer Organic farming post retirement : ನಿವೃತ್ತಿ ಜೀವನ ಎಂದರೆ, ಬದುಕಿನ ಅಂತ್ಯ ಅಲ್ಲ. ಯಾವುದೋ ಮೂಲೆಯಲ್ಲಿ ಜಡವಾಗಿ ಕೂರೋದಲ್ಲ, ಬದಲಾಗಿ ನಮ್ಮಲ್ಲಿರುವ ಹವ್ಯಾಸಗಳನ್ನು ಕಾರ್ಯರೂಪಕ್ಕೆ ತರುವ ಒಂದು ಭಾಗ. ಕೃಷಿ, ಕ್ರೀಡೆ, ಕಲೆ ಸೇರಿದಂತೆ ಇಲ್ಲಿಯವರೆಗೂ ಮಾಡಲಾಗದಂತಹ ಕೆಲಸದಲ್ಲಿ ಸಕ್ರಿಯಾವಗಿ ತೊಡಗಿಸಿಕೊಳ್ಳಲು ಸಿಗುವ ಒಂದು ಅವಕಾಶ. ಇಂತದ್ದೇ ಒಂದು ಸಾವಾಕಾಶವನ್ನು ಬಳಸಿಕೊಂಡ ಕೇರಳದ 63 ವರ್ಷದ ಕೆ.ಟಿ. ಫ್ರಾನ್ಸಿಸ್ ಬಳಸಿಕೊಂಡಿದ್ದು ಹೀಗೆ..
ಪಿಟಿ ಟೀಚರ್ನಿಂದ ಕೃಷಿಕರಾಗಿ ಬಡ್ತಿ
2015 ರಲ್ಲಿ ಪಿಟಿ ಟೀಚರ್ ಹುದ್ದೆಯಿಂದ ನಿವೃತ್ತಿ ಪಡೆದ 63 ವರ್ಷದ ಕೆ.ಟಿ. ಫ್ರಾನ್ಸಿಸ್ ಸದ್ಯ ರೈತರಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಕೆ.ಟಿ. ಫ್ರಾನ್ಸಿಸ್ರ ತಾತ 120 ವರ್ಷಗಳ ಹಿಂದೆಯೇ ಇಡುಕ್ಕಿಯಿಂದ ಮರುತೋಂಕರಾದಲ್ಲಿ 5 ಎಕರೆ ಭೂಮಿ ಖರೀದಿಸಿ ಕೃಷಿ ಆರಂಭೀಸಿದ್ದರು. ಅವರ ತಾತ ಹಾಗೂ ತಂದೆಯ ನಂತರ ಬೇರೋಂದು ರೀತಿಯಲ್ಲಿ ಕೃಷಿ ಮಾಡುವ ಬಗ್ಗೆ ಚಿಂತಿಸಿದರು. ಹೀಗಾಗಿ ಅವರ ಭೂಮಿಯಲ್ಲಿದ್ದ ರಬ್ಬರ್ ಮರಗಳನ್ನು ಕಡಿದು ಮಿಶ್ರ ಬೆಳೆ ಪದ್ಧತಿಯನ್ನು ಆರಂಭಿಸಿದರು.
120 ವರ್ಷದ ಹಳೆಯದಾದ ಕುಟ್ಯಾಡಿ ತಳಿಯ ತೆಂಗಿನ ಮರಗಳ ಜೊತೆಗೆ ಮತ್ತಷ್ಟು ಹೊಸ ಸಸಿಗಳನ್ನು ನೆಟ್ಟರು. ಕಾಳುಮೆಣಸು, ಅರಿಶಿನ, ಶುಂಠಿ, ಗೆಣಸು ಹಾಗೂ ವಿವಿಧ ತರಕಾರಿ ಬೀಜಗಳನ್ನು ಬಿತ್ತಿ ಹೊಸದಾಗಿ ಕೃಷಿ ಆರಂಭಿಸಿದರು. ಸದ್ಯ ಅವರಿಗೆ ಹೆಚ್ಚು ಆದಾಯ ತಂದುಕೊಡುವ ಬೆಳೆ ಎಂದರೆ ಅದು ಅಡಿಕೆ ಹಾಗೂ ಕಾಳು ಮೆಣಸು.
ಕೆಟಿ ಫ್ರಾನ್ಸಿಸ್ ಹೇಳಿದ್ದೇನು?
ಅಡಿಕೆ ಮರಕ್ಕೆ ಜೋತು ಬಿದ್ದಂತೆ ಕಾಳು ಮೆಣಸನ್ನು ಬೆಳೆಯುವುದರಿಂದ ಒಂದೇ ಬಾರಿ ಹಾಕುವ ಗೊಬ್ಬರ ಎರಡೂ ಬೆಳೆಗಳಿಗೂ ಸಿಗುತ್ತದೆ. ಇದರಿಂದ ಹಣ, ಜಾಗ ಮತ್ತು ಶ್ರಮ ಮೂರೂ ಉಳಿಯುತ್ತದೆ1,000ಕ್ಕೂ ಹೆಚ್ಚು ಕಾಳುಮೆಣಸಿನ ಬಳ್ಳಿಗಳಿವೆ ಎಂದಿದ್ದಾರೆ.
ಫ್ರಾನ್ಸಿಸ್ ಅವರು ಕೃಷಿ ಮಾತ್ರವಲ್ಲದೆ 3 ಹಸುಗಳು, ಮೇಕೆಗಳು, ಬಾತುಕೋಳಿಗಳು, ಕೋಳಿಗಳು ಹಾಗೂ ಮೀನು ಸಾಕಂಣೆಯನ್ನು ಮಾಡುತ್ತಿದ್ದಾರೆ. ಈ ಸಾಕು ಪ್ರಾಣಿಗಳಿಂದ ಸಿಗುವ ಮಾಂಸ, ಹಾಲು ಮತ್ತು ಮೊಟ್ಟೆಗಳ ಮಾರಾಟದಿಂದಲೂ ಅವರು ಆದಾಯ ಗಳಿಸಿಕೊಳ್ಳುತ್ತಿದ್ದಾರೆ.
ಪ್ರಶಸ್ತಿ ಗರಿಮೆ
ಫ್ರಾನ್ಸಿಸ್ ಅವರ ಸದ್ಯದ ವಾರ್ಷಿಕ ಆದಾಯ 35 ಲಕ್ಷ. ಕೃಷಿ ವೆಚ್ಚ 8 ಲಕ್ಷವಾಗುತ್ತದೆ ಎಂದಿದ್ದಾರೆ. ಇವರಿಗೆ 2018ರಲ್ಲಿ ಕೇರಳ ಸರ್ಕಾರದಿಂದ ಕೇರ ಕೇಸರಿ' ಸಿಕ್ಕಿದೆ. ಜೊತೆಗೆ 14 ಪ್ರಶಸ್ತಿಗಳು ನಾನಾ ಭಾಗದಿಂದ ಸಿಕ್ಕಿವೆ, (ಏಜೆನ್ಸೀಸ್).