ಪ್ರಮುಖ ಆರೋಪಿ ನಿದಾ ಖಾನ್ (TCS Nida Khan)
- ನಾಸಿಕ್ನ ಟಿಸಿಎಸ್ ಕಂಪನಿಯಲ್ಲಿ ಬಲವಂತದ ಮತಾಂತರ ಪ್ರಕರಣ
- ಪ್ರಮುಖ ಆರೋಪಿ ನಿದಾ ಖಾನ್ ಪರಾರಿ
- ಸಂಬಂಧಿಗಳ ಮನೆಯಲ್ಲಿದ್ದ ನಿದಾ ಎಸ್ಕೇಪ್
ನಾಸಿಕ್: ಮಹಾರಾಷ್ಟ್ರದ ನಾಸಿಕ್ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಕಚೇರಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳನ್ನು ಲೈಂಗಿಕವಾಗಿ ಪೀಡಿಸಿ ಬಲವಂತದ ಮತಾಂತರಕ್ಕೆ ಒತ್ತಾಯಿಸಿದ ಪ್ರಕರಣ ಈಗ ದೇಶದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದ ಪ್ರಮುಖ ಕಿಂಗ್‌ಪಿನ್ ಎನ್ನಲಾದ ಕಂಪನಿಯ ಹೆಚ್ಆರ್ (HR) ಮುಖ್ಯಸ್ಥೆ ನಿದಾ ಖಾನ್ (TCS Nida Khan) ತಲೆ ಮರಿಸಿಕೊಂಡಿದ್ದಾಗಿ ಮಾಹಿತಿ ತಿಳಿದು ಬಂದಿದೆ.
ಮಾಹಿತಿ ನೀಡಿದ ಪತಿ!
ಎರಡು ತಿಂಗಳ ಹಿಂದೆ ನಿದಾ ಟಿಸಿಎಸ್ ಕಂಪನಿಯಿಂದ ಹೊರಬಂದು, ಅಮೆಜಾನ್ ಕಂಪನಿಯಲ್ಲಿ ಲಾಜಿಸ್ಟಿಕ್ ಆಫೀಸರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು ಎಂದು ತಿಳಿದು ಬಂದಿದೆ. ಶುಕ್ರವಾರ (ಏ.17) ನಿದಾ ಪತಿ ಮೊಹಿಲ್ ನವೀದ್ ಇಕ್ಬಾಲ್ ಖಾನ್ನನ್ನು ಮಹಾರಾಷ್ಟ್ರ ಪೊಲೀಸರು ವಿಚಾರಣೆ ನಡೆಸಿದಾಗ, ನಿದಾ ಅವಳ ಸಂಬಂಧಿಗಳ ಮನೆಯಲ್ಲಿ ಇರುವುದಾಗಿ ನವೀದ್ ಇಕ್ಬಾಲ್ ಮಾಹಿತಿ ನೀಡಿದ್ದಾನೆ.
ಆದರೆ ನವೀದ್ ನೀಡಿದ ವಿಳಾಸಕ್ಕೆ ಪೊಲೀಸರು ತಲುಪಿದಾಗ ಆ ಮನೆಗೆ ಬೀಗ ಹಾಕಲಾಗಿದ್ದು, ನಿದಾ ಹಾಗೂ ಆಕೆಯ ಸಂಬಂಧಿಗಳ ಫೋನ್ ಸಹ ಸ್ವಿಚ್ ಆಫ್ ಆಗಿದೆ. ನವೀದ್ ಪ್ರಕಾರ ಎರಡು ವಾರಗಳ ಹಿಂದೆ ಅವಳ ಚಿಕ್ಕಮ್ಮ ನೂರಿ ಶೇಕ್, ನಿದಾಳನ್ನು ತನ್ನ ಮನೆಗೆ ಕರೆದೊಯ್ದಾಗಿ ಆತ ಹೇಳಿದ್ದಾನೆ.
ನನ್ನ ಮಗಳು ಎಲ್ಲಿಯೂ ಓಡಿ ಹೋಗಿಲ್ಲ!
ಮೊದಲನೆಯದಾಗಿ ನಮ್ಮ ನಿದಾ ಟಿಸಿಎಸ್ನಲ್ಲಿ ಎಚ್‌ಆರ್ ಆಗಿರಲಿಲ್ಲ, ಅವಳು ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು. ಈ ಪ್ರಕರಣದ ಕುರಿತಂತೆ ನಿಧಾ ಮೇಲೆ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ನಿದಾ ಕುಟುಂಬ ವರ್ಗ ಹೇಳಿದೆ.
ನನ್ನ ಮಗಳು ಆ ಕಂಪನಿಯಿಂದ ಮೊದಲೇ ಹೊರಬಂದಿದ್ದಾಳೆ, ಈ ಘಟನೆ ಎಲ್ಲಾ ಕೇಳಿದರೆ ಇಕೆ ಕೆಲಸಕ್ಕೆ ಹೋಗಿದ್ದೆ ತಪ್ಪಾಯಿತು ಎನ್ನಿಸುತ್ತದೆ. ನನ್ನ ಮಗಳು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಿದ ಹೆಮ್ಮೆ ನನಗಿದೆ. ನನ್ನ ಮಗಳು ಈ ಪ್ರಕರಣದಲ್ಲಿ ಯಾವುದೇ ತಪ್ಪನ್ನು ಮಾಡಿಲ್ಲ, ಅವಳು ಎಲ್ಲಿಯೂ ಓಡಿ ಹೋಗಿಲ್ಲ ಮನೆಯಲ್ಲೇ ಇದ್ದಾಳೆ ಎಂದು ನಿದಾ ತಂದೆ ಹೇಳಿಕೆ ನೀಡಿದ್ದಾರೆ.
ನಿರೀಕ್ಷಣಾ ಜಾಮೀನಿಗೆ ನಿಧಾ ಅರ್ಜಿ
ಲೈಂಗಿಕ ದೌರ್ಜನ್ಯ ನಡೆಸಿ ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಧಾ ಖಾನ್ ಮೇಲೆ ದೂರು ದಾಖಲಾಗುತ್ತಿದಂತೆ, ನಿಧಾ ನಾಸಿಕ್ನ ನ್ಯಾಯಾಲಯದಲ್ಲಿ, ತಾನು ಗರ್ಭಿಣಿಯಾಗಿದ್ದು, ನನ್ನ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರೀಕ್ಷಣಾ ಜಾಮೀನನ್ನು ನೀಡ ಬೇಕಾಗಿ ಕೋರಿದ್ದಾರೆ.
ಪ್ರಕರಣದ ಹಿನ್ನಲೆ
ಮಹಾರಾಷ್ಟ್ರದ ನಾಸಿಕ್ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಚೇರಿಯಲ್ಲಿ 2022ರ ಫೆಬ್ರವರಿಯಿಂದ 2026ರ ಮಾರ್ಚ್‌ವರೆಗೆ ನಡೆದ ಕಿರುಕುಳ ಬಗ್ಗೆ ಅಲ್ಲಿನ ಉದ್ಯೋಗಿಗಳು ಆರೋಪಿಸಿದ್ದಾರೆ. ತಮ್ಮ ಸೀನಿಯರ್ ಸಹೋದ್ಯೋಗಿಗಳು ಮತ್ತು ಎಚ್‌ಆರ್ ಮ್ಯಾನೇಜರ್‌ಗಳಿಂದ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ, ಬ್ಲ್ಯಾಕ್‌ಮೇಲ್, ಧಾರ್ಮಿಕ ಮತಾಂತರಕ್ಕೆ ಒತ್ತಾಯ ಮತ್ತು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಂಟು ಮಹಿಳಾ ಉದ್ಯೋಗಿಗಳು ಆರೋಪ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ,(ಏಜನ್ಸೀಸ್).