ನಾಸಿಕ್ TCS ಕಂಪನಿಯ ಬಲವಂತದ ಮತಾಂತರ ಪ್ರಕರಣ 
ದೇಶ

TCS ಮತಾಂತರ ಪ್ರಕರಣ: ವೇದ, ಪುರಾಣಗಳ ಅವಹೇಳನ; ಜಾಕೀರ್​ ನಾಯ್ಕ್​ ವಿಡಿಯೋ ನೋಡಲು ಒತ್ತಾಯ, ಚಾರ್ಜಶೀಟ್​ನಲ್ಲಿ ಬಯಲಾದ ರಹಸ್ಯ! TCS Conversion

ಪ್ರಮುಖ ಮುಖ್ಯಾಂಶಗಳು

  • ನಾಸಿಕ್ TCS ಕಂಪನಿಯ ಬಲವಂತದ ಮತಾಂತರ ಪ್ರಕರಣ
  • ವೇದಗಳ ಅವಹೇಳನ, ಜಾಕೀರ್ ನಾಯ್ಕ್ ವಿಡಿಯೋ ನೋಡುವಂತೆ ಐಟಿ ಉದ್ಯೋಗಿಗಳಿಗೆ ಒತ್ತಡ
  • ಚಾರ್ಜ್‌ಶೀಟ್‌ನಲ್ಲಿ ಬಯಲಾದ ಶಾಕಿಂಗ್​ ಡಿಟೇಲ್ಸ್​
ಮಹಾರಾಷ್ಟ್ರ: ಕಳೆದ ಕೆಲ ತಿಂಗಳುಗಳ ಹಿಂದೆ ದೇಶದಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದ ನಾಸಿಕ್​ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ​ನಲ್ಲಿ ಬಲವಂತದ ಮತಾಂತರ (TCS Conversion) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿದ್ಧ ಪಡಿಸಿರುವ ಚಾರ್ಜ್​ಶೀಟ್​ನಲ್ಲಿರುವ ಮಾಹಿತಿ ಈಗ ಎಲ್ಲರ ಹುಬ್ಬೆರುಸುವಂತೆ ಮಾಡಿದೆ.

ವೇದಗಳನ್ನು ಅವಹೇಳನ ಮಾಡುತ್ತಿದ್ದರು!

23 ವರ್ಷದ ದೂರುದಾರರೊಬ್ಬರ ಹೇಳಿಕೆಯಲ್ಲಿ, ನನಗೆ TCS ನ ಪುಣೆ ಕಂಪನಿಯಲ್ಲಿ ಮಾನಸಿಕವಾಗಿ ಬಹಳ ಹಿಂಸೆ ನೀಡುತ್ತಿದ್ದರು. ನಿರಂತರವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರುತ್ತಿದ್ದರು. ಹಿಂದೂ ಪುರಾಣಗಳನ್ನು ಮತ್ತು ವೇದಗಳನ್ನು ಅವಹೇಳನ ಮಾಡುತ್ತಿದ್ದರು. ಜಾಕೀರ್​ ನಾಯ್ಕ್​ ಹಾಗೂ ತಾರೀಕ್​ ಜಮೀಲ್​ ಅವರ ವಿಡಿಯೋಗಳನ್ನು ನೋಡುವಂತೆ ಬಲವಂತ ಮಾಡುತ್ತಿದ್ದರೆಂದು ಚಾರ್ಜ್​ಶೀಟ್​ನಲ್ಲಿ ನಮೂದಿಸಿದ್ದಾರೆ.

ಬ್ರೇನ್​ವಾಶ್​ ಮಾಡಲು ತಂತ್ರಜ್ಞಾನದ ಬಳಕೆ

ಈ ಬಲವಂತದ ಧಾರ್ಮಿಕ ಮತಾಂತರ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಅನೀಶ್ ಶೇಖ್, ತೌಸೀಫ್ ಅತ್ತರ್ ಮತ್ತು ನಿದಾ ಖಾನ್ ಯೂಟ್ಯೂಬ್​ ವಿಡಿಯೋಗಳು, ವಾಟ್ಸಾಪ್​ ಗ್ರೂಪ್​ಗಳ ಮೂಲಕ ಯುವತಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲು ಬಳಸಿಕೊಳ್ಳುತ್ತಿದ್ದರೆಂದು ತಿಳಿದು ಬಂದಿದೆ.
ಹಿಂದೂ ಧರ್ಮದಲ್ಲಿರುವ ಆಚರಣೆಗಳನ್ನು ಟೀಕಿಸುತ್ತಾ ಇಸ್ಲಾಂ ಧರ್ಮವೇ ಪರಮ ಶ್ರೇಷ್ಠ ಎಂಬಂತೆ ಬಿಂಬಿಸುತ್ತಾ, ಸಹದ್ಯೋಗಿಗಳನ್ನು ಹಾಗೂ ಹೊಸದಾಗಿ ಕಂಪನಿಗೆ ಸೇರಿದ ಯುವತಿಯರೇ ಇವರ ಟಾರ್ಗೆಟ್​ ಆಗಿದ್ದರೆಂದು ಪೊಲೀಸ್​ ತನಿಖೆ ಸ್ಪಷ್ಟ ಪಡಿಸಿದೆ.

ಏನಿದು ಟಿಸಿಎಸ್​ ಪ್ರಕರಣ?

ಮಹಾರಾಷ್ಟ್ರದ ನಾಸಿಕ್​ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಚೇರಿಯಲ್ಲಿ 2022ರ ಫೆಬ್ರವರಿಯಿಂದ 2026ರ ಮಾರ್ಚ್‌ವರೆಗೆ ನಡೆದ ಕಿರುಕುಳ ಬಗ್ಗೆ ಅಲ್ಲಿನ ಉದ್ಯೋಗಿಗಳು ಆರೋಪಿಸಿದ್ದಾರೆ.
ತಮ್ಮ ಸೀನಿಯರ್ ಸಹೋದ್ಯೋಗಿಗಳು ಮತ್ತು ಎಚ್‌ಆರ್ ಮ್ಯಾನೇಜರ್‌ಗಳಿಂದ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆ, ಬ್ಲ್ಯಾಕ್‌ಮೇಲ್, ಧಾರ್ಮಿಕ ಮತಾಂತರಕ್ಕೆ ಒತ್ತಾಯ ಮತ್ತು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಎಂಟು ಮಹಿಳಾ ಉದ್ಯೋಗಿಗಳು ಆರೋಪ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿ ಏಳು ಆರೋಪಿಗಳನ್ನು ಬಂಧಿಸಿದ್ದಾರೆ,(ಏಜನ್ಸೀಸ್​).