Tamil Nadu CM Vijay's wife Sangeetha withdraws divorce petition; case disposed 
ದೇಶ

ತಮಿಳುನಾಡಿನ ಸಿಎಂ ವಿಜಯ್ ಕೌಟುಂಬಿಕ ಸಮಸ್ಯೆ ಇತ್ಯರ್ಥ?; ಡಿವೋರ್ಸ್​ ಅರ್ಜಿ ವಾಪಸ್ ಪಡೆದ ಪತ್ನಿ ಸಂಗೀತಾ..Tamil Nadu CM Vijay's wife Sangeetha

ಪ್ರಮುಖ ಮುಖ್ಯಾಂಶಗಳು

  • ಡಿವೋರ್ಸ್​ ಅರ್ಜಿ ವಾಪಸ್​ ಪಡೆದ ತಮಿಳುನಾಡಿನ ಸಿಎಂ ವಿಜಯ್​ ಪತ್ನಿ ಸಂಗೀತಾ ಸ್ವರ್ಣಲಿಂಗಂ.
  • 2026 ಫೆಬ್ರವರಿಯಲ್ಲಿ ಡಿವೋರ್ಸ್​ಗಾಗಿ ಚೆಂಗಲ್ಪಟ್ಟು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದ ಸಂಗೀತಾ.
  • ಹಲವಾರು ಬಾರಿ ಇಬ್ಬರೂ ಕೋರ್ಟ್​ಗೆ ಹಾಜರಾಗದೆ ಕೇಸ್​ ವಿಚಾರಣೆ ಮುಂದೂಡಲ್ಪಟ್ಟಿತ್ತು.

ಫೆಬ್ರವರಿ 27ರಂದು ಡಿವೋರ್ಸ್​ಗಾಗಿ ಚೆಂಗಲ್ಪಟ್ಟು ಜಿಲ್ಲೆಯ ಕೌಟುಂಬಿಕ ಕೋರ್ಟ್​ಗೆ

ಸಂಗೀತಾ ಅರ್ಜಿ ಸಲ್ಲಿಸಿದ್ದರು. ಸದ್ಯ ಸ್ವತಃ ಅವರೇ  ಅರ್ಜಿ ವಾಪಸ್​ ಪಡೆದ ಹಿನ್ನೆಲೆ ಪ್ರಕರಣವನ್ನು ಇತ್ಯರ್ಥಗೊಳಿಸಿದೆ ಎನ್ನಲಾಗಿದೆ. 

ಡಿವೋರ್ಸ್ ಅರ್ಜಿ ವಾಪಸ್

ಈ ಡಿವೋರ್ಸ್​ ಅರ್ಜಿ ವಿಚಾರಣೆಯು ಹಲವಾರು ಬಾರಿ ಮುಂದೂಡಲ್ಪಟ್ಟಿತ್ತು. ಕಳೆದ ತಿಂಗಳು ಇಬ್ಬರು ವಿಡಿಯೋ ಅಥವಾ ವೈಯಕ್ತಿಕವಾಗಿ ವಿಚಾರಣೆಗೆ ಹಾಜಾರಾಗಲು ಸಾಧ್ಯವಾಗದ ಹಿನ್ನೆಲೆ ನ್ಯಾಯಾಧೀಶರು  ಆಗಸ್ಟ್​ 7ಕ್ಕೆ ವಿಚಾರಣೆ ಮುಂದೂಡಿದ್ದರು. 

ಇಂದು 

ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದ ಸಂಗೀತ ಅವರು 

ವಿಚ್ಛೇದನ ಪ್ರಕರಣವನ್ನು ಮುಂದುವರಿಸುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾಗಿ ವರದಿ ಮಾಡಲಾಗಿದೆ.

ಸಂಗೀತ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಏನಿತ್ತು?

ನನ್ನ ಪತಿ  ನಟಿಯೊಬ್ಬರೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದಾರೆ. ಇದು ನನಗೆ ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಿದೆ.  2021ರಿಂದ ನನ್ನೊಂದಿಗೆ ಭಾವನಾತ್ಮಕವಾಗಿ ದೂರವಿದ್ದಾರೆ. 

ನನ್ನನ್ನು ನಿರಂತರವಾಗಿ ನಿರ್ಲಕ್ಷ್ಯಿಸಲಾಗುತ್ತಿದೆ.

ಒಮ್ಮೆ ನಿವಾಸದಿಂದ ಹೊರ ಹೋಗಬಹುದು ಎಂದಾಗ ನಾನು ಸುಮ್ಮನಿದ್ದೆ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಬೇರೆ ವಾಸಿಸಲು ಒತ್ತಾಯ ಮಾಡಿದ್ದರು. ಆದರೆ ನಟಿಯೊಂದಿಗೆ ಮುಕ್ತವಾಗಿ ಒಡನಾಟವಿಟ್ಟುಕೊಂಡಿದ್ದಾರೆ ಎಂದು ಡಿವೋರ್ಸ್​ ಪತ್ರದಲ್ಲಿ ಸಂಗೀತಾ ಉಲ್ಲೇಖಿಸಿದ್ದರು. 

ವಿಜಯ್​ ನನಗೆ ಈ ಹಿಂದೆ ಇದ್ದ  ಸ್ವಾತಂತ್ರ್ಯವನ್ನು ತೆಗೆದುಕೊಂಡಿದ್ದಾರೆ, ಆರ್ಥಿಕ ನಿರ್ಬಂಧ ಹೇರಿದ್ದಾರೆ. ಶಾಶ್ವತ  ಜೀವಾನಾಂಶ, ನೀಲಂಕರೈನಲ್ಲಿ ವಾಸಿಸಲು ಅನುಮತಿ ನೀಡುವಂತೆ ಕೋರಿದ್ದರು.

ಮುಂದುವರೆದು, ಸಾರ್ವಜನಿಕವಾಗಿ ಮುಜುಗರಕ್ಕೊಳಗಾಗುವುದನ್ನು ತಪ್ಪಿಸುವ ಸಲುವಾಗಿ ವಕೀಲ ಮೂಲಕ ಸೌಹಾರ್ದತ ನಿರ್ಣಯಕ್ಕಾಗಿ 2024 ಆಗಸ್ಟ್​ನಿಂದ 2025ರ ಫೆಬ್ರವರಿವರೆಗೆ ನೋಟಿಸ್​ ಕೊಟ್ಟು,  ಪತ್ರ ವ್ಯವಹಾರ ನಡೆಸಿದ್ದೇನೆ ಎಂದು ಅರ್ಜಿಯಲ್ಲಿ ಸಂಗೀತಾ ಉಲ್ಲೇಖಿಸಿದ್ದರು.

ಸಂಗೀತಾ ಲಂಡನ್​ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ವಿಜಯ್​ ಅಭಿಮಾನಿಯಾದ ಇವರು ಆಟೋಗ್ರಾಫ್​ ಮತ್ತು ಫೋಟೋಗಾಗಿ ಚೆನ್ನೈನಲ್ಲಿ ಅವರನ್ನು ನೋಡಿ, ಭೇಟಿಯಾದ ನಂತರ ಇಬ್ಬರ ಮಧ್ಯೆ ಪ್ರೇಮಾಂಕುರ ಶುರುವಾಯಿತು. ಇಬ್ಬರ ಮನೆಯಲ್ಲಿ ಒಪ್ಪಿಗೆಯಾದ ನಂತರ 

1999ರಲ್ಲಿ ಚೆನ್ನೈನಲ್ಲಿ ವಿಜಯ್​ ಮತ್ತು ಸಂಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2000ದಲ್ಲಿ ಜೇಸನ್​ ಸಂಜಯ್​ ಜನಿಸಿದರೆ  2005ರಲ್ಲಿ 

ದಿವ್ಯಾ ಸಶಾ ಜನಿಸಿದ್ದರು.

ಪದಗ್ರಹಣ ಕಾರ್ಯಕ್ರಮಕ್ಕೆ ಗೈರು!

ತಮಿಳುನಾಡಿನ ವಿಧಾನಸಭೆ ಚುನಾವಣೆಗೆ ಮೊದಲ ಬಾರಿ ಸ್ಪರ್ಧಿಸಿ ಸಿ ಜೋಸೆಫ್ ವಿಜಯ್ ಅವರು ಸಿಎಂ ಆಗಿದ್ದರು. ಈ ಕಾರ್ಯಕ್ರಮಕ್ಕೆ ನಟಿ ತ್ರಿಷಾ ಹಾಗೂ ಸಿಎಂ ವಿಜಯ್ ಅವರ ಪೋಷಕರು ಬಂದಿದ್ದರು. ತ್ರಿಷಾ ಅವರ ಹಾರಾಟ ಕಂಡ ನೆಟ್ಟಿಗರು ಇವರು ಬರುವ ಅವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನೆ ಮಾಡಿದ್ದರು. ಇಂತಹ ಬೃಹತ್​ ಕಾರ್ಯಕ್ರಮಕ್ಕೆ ಪತ್ನಿ ಸಂಗೀತಾ ಹಾಗೂ ಮಕ್ಕಳೇ ಹಾಜರಾಗದೇ ಇರುವುದು ವಿಜಯ್ ಅವರ ಆಭಿಮಾನಿಗಳಲ್ಲಿ ಬೇಸರವನ್ನು ಹುಟ್ಟುಹಾಕಿತ್ತು. 

ನಟಿ ತ್ರಿಷಾ ಜೊತೆಗೆ ಸಿಎಂ ವಿಜಯ್ ಸುತ್ತಾಟ ಗಾಸಿಪ್ಸ್

ಮದುವೆ ಸಮಾರಂಭವೊಂದಕ್ಕೆ ನಟಿ ತ್ರಿಷಾ ಅವರೊಂದಿಗೆ ವಿಜಯ್​ ಅವರು ಓಡಾಟ ನಡೆಸಿದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿತ್ತು. ಅಲ್ಲದೇ ಇಬ್ಬರು ಒಂದೇ ಲಿಫ್ಟ್​​ನಲ್ಲಿ ಫೋಟೋ ತೆಗೆದುಕೊಂಡಿದ್ದ ಪೋಸ್ಟ್ ವೈರಲ್ ಆಗಿತ್ತು. ಕುರವಿ, ತಿರುಪಾಚಿ,  ಆತಿ ಹಿಟ್​ ಸಿನಿಮಾಗಳ ನಂತರ ಇಬ್ಬರಲ್ಲು ಪ್ರೇಮಾಂಕುರವಾಗಿತ್ತು ಎನ್ನುವ ಊಹಾಪೋಹಗಳು ಇಂದಿಗೂ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ,