ಕೇರಳದ ಪಲಕ್ಕಾಡ್‌ನಲ್ಲಿ 'ಇಸ್ಲಾಮಿಕ್ ಫ್ರೆಂಡ್ಲಿ' ಜಿಮ್ ಆರಂಭಕ್ಕೆ ಸಿದ್ಧತೆ 
ದೇಶ

ಜಿಮ್‌ನಲ್ಲೂ ತಾಲಿಬಾನ್ ಸಂಸ್ಕೃತಿ? ಹಿಜಾಬ್ ಕಡ್ಡಾಯ, ಮ್ಯೂಸಿಕ್ ಬ್ಯಾನ್.. ಕೇರಳದ ಮಾಲೀಕನ ನಿಯಮಗಳಿಗೆ ನೆಟ್ಟಿಗರ ಆಕ್ರೋಶ! Kerala Gym Controversy

ಪ್ರಮುಖ ಮುಖ್ಯಾಂಶಗಳು

  • ಕೇರಳದ ಪಲಕ್ಕಾಡ್‌ನಲ್ಲಿ 'ಇಸ್ಲಾಮಿಕ್ ಫ್ರೆಂಡ್ಲಿ' ಜಿಮ್ ಆರಂಭಕ್ಕೆ ಸಿದ್ಧತೆ
  • ಹಿಜಾಬ್ ಕಡ್ಡಾಯ, ಮ್ಯೂಸಿಕ್ ಬ್ಯಾನ್ ನಿಯಮಗಳಿಗೆ ನೆಟ್ಟಿಗರು ಫುಲ್ ಗರಂ
  • ಇದು ತಾಲಿಬಾನ್ ಸಂಸ್ಕೃತಿ ಎಂದು ಆಕ್ರೋಶ
ಕೇರಳ: ಕೇರಳದ ಪಲಕ್ಕಡ್​ನಲ್ಲಿ ವ್ಯಕ್ತಿಯೊಬ್ಬ ಇಸ್ಲಾಮಿಕ್ ಸ್ನೇಹಿ(ಇಸ್ಲಾಮಿಕ್​ ಫ್ರೆಂಡ್ಲಿ) ಜಿಮ್​ನ್ನು ತೆರೆಯಲು ಮುಂದಾಗಿದ್ದು, ಈ ಜಿಮ್​ನ ನೂತನ ನಿಯಮಗಳು ಈಗ ಸೋಷಿಯಲ್​ ಮೀಡಿಯಾನಲ್ಲಿ ಭಾರಿ ಚರ್ಚೆಗೆ (Kerala Gym Controversy) ಗ್ರಾಸವಾಗಿದೆ.
ಫಿಟ್ನೆಸ್​ ಇಂಡಸ್ಟ್ರಿನಲ್ಲಿ ಸುಮಾರು 15 ವರ್ಷಗಳ ಅನುಭವ ಹೊಂದಿರುವ ವ್ಯಕ್ತಿಯೊಬ್ಬ ಕಳೆದ 15 ವರ್ಷಗಳಿಂದ ಕೇರಳದ ಪಲಕ್ಕಡ್​ನ ಪುತ್ತುನಗರಂ ಎಂಬಲ್ಲಿ ಜಿಮ್​ ನಡೆಸುತ್ತಾ ಬಂದಿದ್ದಾನೆ. ಇತ್ತೀಚೆಗೆ ಸೋಷಿಯಲ್​ ಮೀಡಿಯಾನಲ್ಲಿ ಪೋಸ್ಟ್ ಹಾಕಿದ್ದ ಈತ ಇನ್ಮುಂದೆ ನನ್ನ ಜಿಮ್​ನ್ನು ಇಸ್ಲಾಮಿಕ್​ ಫ್ರೆಂಡ್ಲಿಯಾಗಿ ಪರಿವರ್ತಿಸಲಿದ್ದೆನೆ. ಇಲ್ಲಿ ಈಗ ಹೊಸ ನಿಯಮಗಳು ಅನುಷ್ಠಾನಗೊಳ್ಳಲಿವೆ ಎಂದು ಹೇಳಿದ್ದಾನೆ.

ನೂತನ ನಿಯಮಗಳು ಏನೇನಿವೆ?

ವ್ಯಕ್ತಿ ವಿಡಿಯೋನಲ್ಲಿ ಹೇಳಿರುವಂತೆ, ಜಿಮ್​ನಲ್ಲಿ ಮುಂದಿನ ದಿನಗಳಲ್ಲಿ ಇಸ್ಲಾಮಿಕ್​ ನಿಯಮಗಳು ಜಾರಿಗೆ ಬರಲಿದೆ. ಅದರಂತೆ ಇನ್ಮುಂದೆ ಪುರುಷರು ಹಾಗೂ ಮಹಿಳೆಯರು ಜೊತೆಯಲ್ಲಿ ವರ್ಕೌಟ್ ಮಾಡುವುದನ್ನು ರದ್ದು ಪಡಿಸಲಾಗುತ್ತದೆ.
ಜಿಮ್​ಗೆ ಬರುವ ಮಹಿಳೆಯರು ಕಡ್ಡಾಯವಾಗಿ ಹಿಜಾಬ್​ ಧರಿಸಿ ವರ್ಕೌಟ್ ಮಾಡುವ ನಿಯಮವನ್ನು ಹೇರಲಾಗಿದೆ. ಹಾಗೆಯೇ ಇಸ್ಲಾಂನಲ್ಲಿ ಸಂಗೀತ ಹರಾಮ್​ ಆಗಿರುವ ಕಾರಣ ಯಾವುದೇ ಹಾಡುಗಳನ್ನು ಜಿಮ್​ನಲ್ಲಿ ಇನ್ಮುಂದೆ ಫ್ಲೇ ಮಾಡುವುದಿಲ್ಲ ಮತ್ತು ವರ್ಕೌಟ್​ ಮಾಡುವವರು ಹಾಡನ್ನು ಕೇಳಿಸಿ ಕೊಳ್ಳುವಂತಿಲ್ಲ ಎಂದು ತಿಳಿಸಿದ್ದಾರೆ.
ಈ ಜಿಮ್​ಗೆ ಎಲ್ಲಾ ಧರ್ಮದವರು ಪ್ರವೇಶ ಪಡೆಯಬಹುದಾಗಿದೆ. ಆದರೆ ಈ ಮೇಲೆ ತಿಳಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವವರಿಗೆ ಮಾತ್ರ ಪ್ರವೇಶ ಎಂದು ಜಿಮ್​ ಮಾಲೀಕ ತಿಳಿಸಿದ್ದಾನೆ.

ಇದು ತಾಲಿಬಾನ್​ ಸಂಸ್ಕೃತಿ: ನೆಟ್ಟಿಗರ ಆಕ್ರೋಶ!

ಈ ಇಸ್ಲಾಮಿಕ್ ಜಿಮ್​ನ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಹಂಚಿಕೆಯಾಗುತ್ತಿದಂತೆ ನೆಟ್ಟಿಗರ ಪಿತ್ತ ನೆತ್ತಿಗೇರಿದೆ. ಈ ಜಿಮ್​ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿದೆಯೋ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ರೀತಿ ಮಹಿಳೆಯರನ್ನು ಹಿಂಸಿಸಿ ಎಂದು ಯಾವ ಧರ್ಮ ಗ್ರಂಥ ಹೇಳುತ್ತದೆ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಈ ಜಿಮ್​ಗೆ ಯಾರು ತಾನೆ ಪ್ರವೇಶ ಪಡೆಯುತ್ತಾರೆ ಎಂದು ಇನ್ನೊಬ್ಬರು ವ್ಯಂಗ್ಯವಾಡಿದ್ದಾರೆ.
ಇವೆಲ್ಲಾ ಕೇವಲ ಮಾರ್ಕೆಟಿಂಗ್​ ಗಿಮಿಕ್​​ ಅಷ್ಟೇ, ತನ್ನ ಜಿಮ್​ ಬಗ್ಗೆ ಪ್ರಚಾರವಾಗಲಿ ಎಂದು ಈ ರೀತಿ ಮಾಡಿದ್ದಾನೆ, ಆಮೇಲೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗುತ್ತೆ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, (ಏಜನ್ಸೀಸ್​).