ನಮ್ಮ ಧಾರ್ಮಿಕ ಬಲಿಯನ್ನು ತಡೆಯಲು ಸಾಧ್ಯವಿಲ್ಲ: ಹುಮಾಯೂನ್ ಕಬೀರ್
- ಪಶ್ಚಿಮ ಬಂಗಾಳದಲ್ಲಿ ಗೋಹತ್ಯೆ ನಿಷೇಧಕ್ಕೆ ಮುಂದಾದ ಸಿಎಂ ಸುವೇಂದು
- ನಮ್ಮ ಧಾರ್ಮಿಕ ಬಲಿಯನ್ನು ತಡೆಯಲು ಸಾಧ್ಯವಿಲ್ಲ: ಹುಮಾಯೂನ್ ಕಬೀರ್
- ಗೋಹತ್ಯೆ ನಿಷೇಧ ಮಾಡಿ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದ್ದಿರಿ
- ನಾವು ಹಿಂದೂಗಳ ಭಾವನಗೆ ಧಕ್ಕೆ ತರಕೂಡದು: ಇಕ್ಬಾಲ್ ಅನ್ಸಾರಿ
ಪಶ್ಚಿಮ ಬಂಗಾಳ: ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದ ಭಾರತೀಯ ಜನತಾ ಪಕ್ಷ, ರಾಜ್ಯದಲ್ಲಿ ಸರ್ಕಾರವನ್ನು ರಚಿಸುವಲ್ಲಿ ಸಫಲವಾಗಿದೆ. ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಸುವೇಂದು ಅಧಿಕಾರಿ ಗೋಹತ್ಯೆ ನಿಷೇಧ (Humayun Kabir on Beef Ban) ವನ್ನು ಕಟ್ಟುನಿಟ್ಟಾಗಿ ಜಾರಿಯಾಗಲಿದೆ ಎಂದು ಹೇಳಿಕೆ ನೀಡಿದ್ದರು.
ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆಮ್ ಜನತಾ ಉನ್ನಿಯನ್ ಪಕ್ಷದ ಹುಮಾಯೂನ್ ಕಬೀರ್, ಸರ್ಕಾರ ಗೋ ಮಾಂಸ (Beef) ಭಕ್ಷಣೆಗೆ ಕಾನೂನನ್ನು ರೂಪಿಸಬಹುದು, ಅದರೆ ಇಸ್ಲಾಂನಲ್ಲಿರುವ ಬಲಿ ಪದ್ಧತಿಯಲ್ಲಿ ಮೂಗುತೂರಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ನಮ್ಮ ಸಂಪ್ರದಾಯ ಮುಂದುವರಿಯುತ್ತದೆ!
ಗುರುವಾರ (ಮೇ.21) ಸುದ್ದಿಗಾರರೊಂದಿಗೆ ಮಾತನಾಡಿದ ಹುಮಾಯೂನ್ ಕಬೀರ್, ಮುಸಲ್ಮಾನರು ಗೋಮಾಂಸ ಸೇವನೆಯನ್ನು ನಿಲ್ಲಿಸಲು ಸರ್ಕಾರ ಕ್ರಮ, ಕಾನೂನನ್ನು ರಚಿಸಬಹುದು, ಆದರೆ ಧಾರ್ಮಿಕ ಬಲಿಯನ್ನು ತಡೆಯಲು ಬಂದರೆ ನಾವು ಅದನ್ನು ಪಾಲನೆ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇಸ್ಲಾಂನಲ್ಲಿ ಪ್ರಾಣಿ ಬಲಿ ಎನ್ನುವುದು ನಿನ್ನೆ-ಮೊನ್ನೆಯಿಂದ ಆರಂಭವಾಗಿರುವುದಲ್ಲ, ಸುಮಾರು 1400 ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಇದನ್ನು ಪ್ರಪಂಚದಲ್ಲಿರುವ ಎಲ್ಲಾ ಮುಸ್ಲಿಮರು ಆಚರಿಸುತ್ತಾರೆ, ಇದು ನಮ್ಮ ಸಂಪ್ರದಾಯದ ಭಾಗವಾಗಿದೆ ಎಂದು ಹುಮಾಯೂನ್ ಹೇಳಿದ್ದಾರೆ.
ಗೋಹತ್ಯೆ ನಿಷೇಧ; ರಫ್ತಿನಲ್ಲಿ ನಂ.1
ಭಾರತದಲ್ಲಿ ಗೋಹತ್ಯೆ ನಿಷೇಧ ಜಾರಿಯಲ್ಲಿದೆ, ಅದನ್ನು ಎಲ್ಲರು ಪಾಲಿಸಬೇಕೆಂದು ಹೇಳಲಾಗುತ್ತದೆ. ಆದರೆ ಭಾರತದ ದನದ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡುವುದರಲ್ಲಿ ಮೊದಲ ಸ್ಥಾನದಲ್ಲಿದೆ ಇದಕ್ಕೆ ಪಶ್ಚಿಮ ಬಂಗಾಳ ಸರ್ಕಾರವಾಗಲೀ, ಭಾರತ ಸರ್ಕಾರವಾಗಲೀ ಏನು ಹೇಳುತ್ತದೆ ಎಂದು ಫರ್ಫುರಾ ಶರೀಫ್ ಪಿರ್ಜಾದಾ ತೋಹಾ ಸಿದ್ದಿಕಿ ಪ್ರಶ್ನಿಸಿದ್ದಾರೆ.
ನಾವು ಹಿಂದೂಗಳ ಭಾವನೆಯನ್ನು ಗೌರವಿಸೋಣ!
ನಾವೆಲ್ಲಾ ಭಾರತೀಯ ಮುಸಲ್ಮಾನರಾಗಿದ್ದೆವೆ, ಹೀಗಾಗಿ ನಾವು ಭಾರತದ ಬಹುಸಂಖ್ಯಾತ ಸಮಾಜದ ಭಾವನೆಗಳಿಗೆ ಧಕ್ಕೆ ತರಬಾರದು. ಗೋಹತ್ಯೆ ಹಾಗೂ ಗೋ ಮಾಂಸ ಭಕ್ಷಣೆಯನ್ನು ನಿಲ್ಲಿಸಬೇಕೆಂದು ಇಕ್ಬಾಲ್ ಅನ್ಸಾರಿ ವಿನಂತಿಸಿಕೊಂಡಿದ್ದಾರೆ,(ಏಜನ್ಸೀಸ್).