Wife Murder 
ದೇಶ

ಪತ್ನಿ ಮೇಲೆ ಅನುಮಾನ: ಮಕ್ಕಳ ಮುಂದೆಯೇ ಹಲ್ಲೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದ ಪತಿ | Wife Murder

ಹೈದರಾಬಾದ್: ತೆಲಂಗಾಣದ ಹೈದರಾಬಾದ್​ನಲ್ಲಿ ಬೇರೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮಕ್ಕಳ ಮುಂದೆಯೇ ಹಲ್ಲೆ ಮಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಮಹಿಳೆಯ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಶುಕ್ರವಾರ(ಡಿ. 26) ವರದಿಯಾಗಿದೆ.
ನಗರದ ನಲ್ಲಕುಂಟದಲ್ಲಿ ಡಿ. 24ರ ಸಂಜೆ ಈ ಭೀಕರ ಘಟನೆ ನಡೆದಿದೆ. ತ್ರಿವೇಣಿ ಮೃತಳಾದ ಪತ್ನಿ, ಆರೋಪಿ ವೆಂಕಟೇಶ್ ಪತಿ. ಇಬ್ಬರು ನಲ್ಗೊಂಡ ಜಿಲ್ಲೆಯ ಹುಜೂರಾಬಾದ್​ನ ಮೂಲದವರಾಗಿದ್ದು, ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಒಂದು ಗಂಡು ಮತ್ತು ಒಬ್ಬಳು ಮಗಳಿದ್ದಳು. ಹೈದರಾಬಾದ್​ನಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಇತ್ತೀಚೆಗೆ ವೆಂಕಟೇಶ್​ಗೆ ಹೆಂಡತಿ ಮೇಲೆ ಅನುಮಾನ ಶುರುವಾಗಿದ್ದು, ಪ್ರತಿದಿನ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಈ ಹಿಂದೆ ಕೆಲವು ದಿನಗಳ ಹಿಂದೆ ಪತಿಯನ್ನು ಬಿಟ್ಟು ತ್ರಿವೇಣಿ ತವರು ಮನೆಗೆ ತೆರಳಿದ್ದಳು ಎನ್ನಲಾಗಿದೆ. ಪತಿ ವೆಂಕಟೇಶ್ ಅಲ್ಲಿಗೆ ಹೋಗಿ ಇನ್ಮೇಲೆ ಏನೂ ಮಾಡಲ್ಲ, ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ಕರೆದುಕೊಂಡು ಬಂದಿದ್ದನು. 
ಆದರೆ, ಎಂದಿನಂತೆ ಅನುಮಾನದಿಂದ ಹೆಂಡತಿಯೊಂದಿಗೆ ಜಗಳವಾಡಿ ಮಕ್ಕಳ ಮುಂದೆಯೇ ಹಲ್ಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಜಗಳ ಬಿಡಿಸಲು ಬಂದ ಹಿರಿಯ ಮಗಳ ಮೇಲೆ ಹಲ್ಲೆ ಅವಳನ್ನು ಬೆಂಕಿ ನೂಕಿ ಸ್ಥಳದಿಂದ ಪರಾರಿಯಾಗಿದ್ದನು. ಕಿರುಚಾಟ ಕೇಳಿ ಸ್ಥಳೀಯರು ತಕ್ಷಣ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಿಸಿ, ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪತ್ನಿ ಮೃತಪಟ್ಟಿದ್ದು, ಮಗಳು ಬದುಕುಳಿದಿದ್ದಾಳೆ. 
ಘಟನೆ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, 12 ಗಂಟೆಗಳಲ್ಲಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ (ಏಜೆನ್ಸೀಸ್).