Suryakumar Yadav | ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್
Suryakumar Yadav: ಟಿ20 ವಿಶ್ವಕಪ್‌ನ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಫಾರ್ಮ್ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಅಮೆರಿಕ ವಿರುದ್ಧದ ಮೊದಲ ಪಂದ್ಯದಲ್ಲಿ 84 ರನ್ ಸಿಡಿಸಿದ ಬಳಿಕ, ಸೂರ್ಯನ ಬ್ಯಾಟ್ ಮತ್ತೆ ಮಾತನಾಡೇ ಇಲ್ಲ.
ಈ ವಿಷಯದ ಕುರಿತಂತೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮಾತನಾಡಿದ್ದು, ಇದು ಸೂರ್ಯ ಅವರಿಗೆ 5ನೇ ವಿಶ್ವಕಪ್. ಆದರೆ ದೊಡ್ಡ ತಂಡಗಳ ವಿರುದ್ಧ ಅವರು ಗಳಿಸಿದ್ದು ಕೇವಲ ಎರಡು ಅರ್ಧಶತಕ ಮಾತ್ರ. ಫೈನಲ್‌ನಂತಹ ದೊಡ್ಡ ಟೂರ್ನಿಗಳಲ್ಲಿ ನಾಯಕನ ಪಾತ್ರವನ್ನು ಅವರು ನಿಭಾಯಿಸಬೇಕಿದೆ ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
35 ವರ್ಷದ ಸೂರ್ಯಕುಮಾರ್ ಬ್ಯಾಟಿಂಗ್ ವೈಫಲ್ಯ ಟೀಮ್ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಪ್ರಸ್ತುತ ಟೂರ್ನಿಯಲ್ಲಿ 8 ಪಂದ್ಯಗಳಿಂದ 242 ರನ್ ಗಳಿಸಿದ್ದರೂ, ಸ್ಪಿನ್ ವಿರುದ್ಧ ಅವರ ಸ್ಟ್ರೈಕ್ ರೇಟ್ ನಿರೀಕ್ಷಿತ ಮಟ್ಟದಲ್ಲಿಲ್ಲ.
ಕಿವಿ ಹಿಂಡುವರೆ ಸ್ಕೈ..?
ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಮಿಚೆಲ್ ಸ್ಯಾಂಟ್ನರ್, ರಾಚಿನ್ ರವೀಂದ್ರ ಮತ್ತು ಕೋಲ್ ಮೆಕ್‌ಕೊಂಚಿರಂತಹ ಸ್ಪಿನ್ನ ಮಾಂತ್ರಿಕರನ್ನು ಬಳಸಿಕೊಳ್ಳಲಿದ್ದು, ಸೂರ್ಯ ಈ ಪಂದ್ಯದಲ್ಲಿ 70-80 ರನ್ ಗಳಿಸಲಿ ಎಂದು ನಾನು ಆಶಿಸುತ್ತಿಲ್ಲ, ಆದರೆ ತಂಡಕ್ಕೆ ಆಸರೆಯಾಗುವಂತಹ ಒಂದು ಹೋರಾಟದ ಇನ್ನಿಂಗ್ಸ್ ಅವರಿಂದ ಬರಲೇಬೇಕಿದೆ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಸ್ಪಿನ್ನರ್‌ಗಳು ಸೂರ್ಯರನ್ನು ಕಟ್ಟಿಹಾಕಿದರೆ, ಶಿವಂ ದುಬೆಯಂತಹ ಬಿಗ್ ಹಿಟ್ಟರ್‌ಗಳನ್ನು ಬಳಸಿಕೊಂಡು ಟೀಮ್ ಇಂಡಿಯಾ ಕೌಂಟರ್ ಅಟ್ಯಾಕ್ ಮಾಡಬಹುದು ಎಂದು ಚೋಪ್ರಾ ಸಲಹೆ ನೀಡಿದ್ದಾರೆ, ಭಾರತ ತಂಡ ಭಾನುವಾರ (ಮಾ.8) ಅಹಮದಾಬಾದ್‌ನಲ್ಲಿ ನಡೆಯಲಿರುವ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ(ಏಜೆನ್ಸೀಸ್).