Suryakumar Yadav |ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ 
ದೇಶ

ಪತ್ನಿ ದೇವೀಶಾ ಕೊಟ್ಟ ಆ ಒಂದು ಟಿಪ್ಸ್ ನನ್ನ ಈ ಪ್ರದರ್ಶನಕ್ಕೆ ಕಾರಣ..'ಹೋಮ್ ಕೋಚ್' ಬಗ್ಗೆ ಮನಬಿಚ್ಚಿ ಮಾತನಾಡಿದ ಸೂರ್ಯ | Suryakumar Yadav

ದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಹಳೆ ಲಯಕ್ಕೆ ಮರಳಿದ್ದು, ಮುಂಬರುವ ಟಿ20 ವಿಶ್ವಕಪ್​ಗೂ ಮುಂಚೆ ಇದು ಅಭಿಮಾನಿಗಳಿಗೆ ಸಂತಸ ತಂದಿದೆ. ಈ ಕಮ್​ಬ್ಯಾಕ್​​ ಹಿಂದಿನ ವ್ಯಕ್ತಿಯ ಕೊಡುಗೆಯನ್ನು ಸ್ಕೈ ನೆನಪಿಸಿಕೊಂಡಿದ್ದಾರೆ.
ಪಂದ್ಯದ ಬಳಿಕ ತಮ್ಮ ಭರ್ಜರಿ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೂರ್ಯಕುಮಾರ್​​, ಇದಕ್ಕೆ ವಿಶೇಷ ಕೋಚ್ ಕಾರಣ ಎಂದಿದ್ದಾರೆ.

ಯಾದವ್​ಗೆ ಮನೆಯಲ್ಲೊಬ್ಬ ಕೋಚ್

ನಾನು ಮೈದಾನದಲ್ಲಿ ಆಡುವಾಗ ಹೊರಗಿನ ತರಬೇತುದಾರರು ಸಲಹೆ ನೀಡುತ್ತಾರೆ. ಅದೇ ರೀತಿ ನಾನು ಮನೆಗೆ ಹೋದಾಗ, ಅಲ್ಲಿಯೂ ಒಬ್ಬ ಕೋಚ್ ಕುಳಿತಿರುತ್ತಾರೆ, ಅವರನ್ನು ನಾನು ಮದುವೆಯಾಗಿದ್ದೇನೆ ಎಂದು ತಮ್ಮ ಪತ್ನಿ ದೇವೀಶಾ ಶೆಟ್ಟಿ ಕುರಿತಾಗಿ ತಮಾಷೆಯಾಗಿ ಹೇಳಿದರು.
ಸೂರ್ಯಕುಮಾರ್​​ರ ಈ ಮಾತುಗಳು ಅವರ ವೈಯಕ್ತಿಕ ಜೀವನ ಮತ್ತು ವೃತ್ತಿಜೀವನದ ನಡುವಿನ ಸಮತೋಲನವನ್ನು ಎತ್ತಿ ತೋರಿಸುವುದಷ್ಟೆ ಅಲ್ಲದೇ, ಪತ್ನಿ ದೇವೀಶಾ ತಮ್ಮ ಪತಿಗೆ ಕ್ರಿಕೆಟ್ ಜೀವನದಲ್ಲಿ ದೊಡ್ಡ ಬೆಂಬಲವಾಗಿ ನಿಂತಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ದೇವಿಶಾ ಸದಾ ತಾಳ್ಮೆಯಿಂದ ಇರುವಂತೆ ಸಲಹೆ ನೀಡುತ್ತಾರೆ, ಇಂದು ಅವರು ಹೇಳಿದ ಮಾತನ್ನೇ ಪಾಲಿಸಿದ್ದೇನೆ. ಆರಂಭದಲ್ಲಿ ಸ್ವಲ್ಪ ಸಮಯ ತೆಗೆದುಕೊಂಡೆ, ನಂತರ ನನ್ನ ಸಹಜ ಆಟಕ್ಕೆ ಹಿಂದಿರುಗಿದೆ ಎಂದು ಸೂರ್ಯ ತಿಳಿಸಿದರು.
ನಾನು ನೆಟ್ಸ್‌ನಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ, ಆದರೆ ಪಂದ್ಯಗಳಲ್ಲಿ ಗೋಲು ಗಳಿಸುವವರೆಗೆ, ಆತ್ಮವಿಶ್ವಾಸ ಹೆಚ್ಚಾಗುವುದಿಲ್ಲ, ನನಗೆ 2-3 ದಿನಗಳ ಉತ್ತಮ ವಿಶ್ರಾಂತಿ ಸಿಕ್ಕಿತು, ಮನೆಗೆ ಹೋದೆ, ಸಾಮಾಜಿಕ ಜಾಲತಾಣಗಳಿಂದ ಸಂಪೂರ್ಣವಾಗಿ ದೂರವಿದ್ದೆ. ಕಳೆದ ಮೂರು ವಾರಗಳಲ್ಲಿ ನಾನು ಚೆನ್ನಾಗಿ ಅಭ್ಯಾಸ ಮಾಡಿದೆ, ಆದ್ದರಿಂದ ನಾನು ಪರಿಪೂರ್ಣ ಮನಸ್ಥಿತಿಗೆ ಬಂದಿದ್ದೇನೆ ಎಂದು ಹೇಳಿದರು.

ಸೂರ್ಯನ ಶಾಖಕ್ಕೆ ಬಳಲಿದ ಕಿವೀಸ್​

ಶುಕ್ರವಾರ ನಡೆದ ರೋಚಕ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್​ ಕಿಶಾನ್​ ಆಸರೆಯಾದರು. ನ್ಯೂಜಿಲೆಂಡ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಸ್ಕೈ, ಚೆಂಡಿಗೆ ಮೈದಾನದ ಮೂಲೆ ಮೂಲೆಯ ದರ್ಶನ ಮಾಡಿಸಿದರು. ಸೂರ್ಯ ಆ ಪಂದ್ಯದಲ್ಲಿ 37 ಎಸೆತಗಳಲ್ಲಿ 82 ರನ್​ ಗಳಿಸಿ ಟೀಮ್​ ಇಂಡಿಯಾ ಬೃಹತ್​ ಮೊತ್ತ ಗಳಿಸಲು ನೆರವಾದರು(ಏಜೆನ್ಸೀಸ್​).