ಪಂಜಾಬ್​ ಮಾಜಿ ಉಪ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್​ ಬಾದಲ್​ ಮೇಲೆ ಮಾರಣಾಂತಿಕ ದಾಳಿ 
ದೇಶ

ಗುರುದ್ವಾರಾದಲ್ಲಿ ಸುಖ್ಬೀರ್ ಬಾದಲ್ ಮೇಲೆ ದಾಳಿ: ಮಾಜಿ ಉಪ ಮುಖ್ಯಮಂತ್ರಿ ಗೆ ಕೃಪಾಣ್​ ಇರಿತ; ಆಸ್ಪತ್ರೆ ಸೇರಿದ ಅಕಾಲಿ ನಾಯಕ! Sukhbir Badal Gurdwara Attack

ಪ್ರಮುಖ ಮುಖ್ಯಾಂಶಗಳು

  • ಪಂಜಾಬ್​ ಮಾಜಿ ಉಪ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್​ ಬಾದಲ್​ ಮೇಲೆ ಮಾರಣಾಂತಿಕ ದಾಳಿ
  • ಗುರುದ್ವಾರದ ಹೊರಗೆ ಕೃಪಾಣ್​ ಮೂಲಕ ಹಲ್ಲೆ
  • ಬಾದಲ್​ ಹಾಗೂ ಅಂಗರಕ್ಷಕನಿಗೆ ಗಾಯ; ಆಸ್ಪತ್ರೆಗೆ ದಾಖಲು
ಮುಂಬೈ: ಪಂಜಾಬ್​ನ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಿರೋಮಣಿ ಅಕಾಲಿ ದಳದ ನಾಯಕ ಸುಖ್ಬೀರ್ ಸಿಂಗ್ ಬಾದಲ್ (Sukhbir Badal Gurdwara Attack) ಮೇಲೆ ಮಹಾರಾಷ್ಟ್ರದ ಗುರುದ್ವಾರಾದಲ್ಲಿ ಮಾರಣಾಂತಿಕ ದಾಳಿ ನಡೆದಿದೆ ಎಂದು ವರದಿಯಾಗಿದೆ.

ಗುರುವಾರ (ಆ.13) ನಾಂದೇಡ್​ನಲ್ಲಿರುವ ಗುರುದ್ವಾರ ಮಾತಾ ಸಾಹಿಬ್ ಕೌರ್​ಗೆ ಬೇಟಿ ನೀಡಿದ್ದ ಸಂದರ್ಭದಲ್ಲಿ ನಿಹಾಂಗ್​ ಸಿಖ್​​ವೊರ್ವ ಬಾದಲ್ ಮೇಲೆ ಕೃಪಾಣ್​ ಮೂಲಕ ದಾಳಿ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ವೇಳೆ ಸುಖ್ಬೀರ್ ಸಿಂಗ್ ಬಾದಲ್ ಅವರ ಕೈಗೆ ಗಾಯವಾಗಿದ್ದು, ಅವರ ಅಂಗರಕ್ಷಕ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ಬಾದಲ್​ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬುಂದಿದೆ.

ದಾಳಿಗೆ ಕಾರಣವೇನು?

ಗುರುದ್ವಾರಾದಲ್ಲಿ ಆರಂಭವಾದ ಮಾತಿನ ಚಕಮಕಿ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ನಿರ್ದಿಷ್ಟ ಕಾರಣವೇನು ಎನ್ನುವುದು ತನಿಖೆ ನಂತರ ಹೊರ ಬೀಳಲಿದೆ.

ಕೆಲ ದಿನಗಳ ಹಿಂದೆ ಸುಖ್ಬೀರ್ ಸಿಂಗ್ ಬಾದಲ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೇಟಿಯಾಗಿ ಮುಂದಿನ ಪಂಜಾಬ್​ ಚುನಾವಣೆಯಲ್ಲಿ ಅಕಾಲಿ ದಳ ಮತ್ತೆ ಬಿಜೆಪಿ ಜೊತೆ ಸೇರಲಿದೆ ಎಂಬ ಆಶ್ವಾಸನೆಯನ್ನು ನೀಡಿದ್ದರು ಎಂದು ಹೇಳಲಾಗುತ್ತಿತ್ತು.


ಪ್ರಧಾನಿ ಬೇಟಿ ನಂತರ, ಬಾದಲ್ ಮೇಲೆ ಈ ದಾಳಿ ನಡೆದಿರುವುದು ಪಂಜಾಬ್​ನಲ್ಲಿ ಈಗಲೂ ರಾಷ್ಟ್ರೀಯ ಪಕ್ಷಗಳ ಮೇಲಿನ ಸೇಡು ಕಡಿಮೆಯಾಗಿಲ್ಲ ಎನ್ನುವುದಕ್ಕೆ ನಿದರ್ಶನ ಎಂದು ಕೆಲ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.

ಬಾದಲ್​ ಮೇಲೆ ಎರಡನೇ ದಾಳಿ!


ಅಕಾಲಿ ದಳದ ನಾಯಕ ಸುಖ್ಬೀರ್ ಸಿಂಗ್ ಬಾದಲ್, ಮೇಲೆ ಇಂದು ಗುರುದ್ವಾರಾದಲ್ಲಿ ನಡೆದಿರುವುದು ಎರಡನೇ ದಾಳಿ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು 2024 ರಲ್ಲಿ ಪಂಜಾಬ್​ನ ಸ್ವರ್ಣ ಮಂದಿರದಲ್ಲಿ ಬಾದಲ್​ ಮೇಲೆ ಅಕಾಲ್ ತಖ್ತ್​​ನ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದ. ಗುರ್ಮಿತ್​ ರಾಮ್​ ರಹೀಮ್​ನ ಪರವಾಗಿ ಬಾದಲ್​ ಮಾತನಾಡಿದ್ದ ಕಾರಣ ಈ ದಾಳಿಯನ್ನು ನಡೆಸಲಾಗಿತ್ತು. ಅದೃಷ್ಟವಷಾತ್​ ಬಾದಲ್​ ಈ ದಾಳಿಯಿಂದ ಪರಾರಿಯಾಗಿದ್ದರು, (ಏಜನ್ಸೀಸ್​).