ಗೃಹಿಣಿ ಅಪರ್ಣ 
ದೇಶ

ಕೇವಲ 150 ರೂ. ಬಂಡವಾಳ ಹೂಡಿ ಲಕ್ಷ ಲಕ್ಷ ಲಾಭ ಗಳಿಸುತ್ತಿರುವ ಈ ಗೃಹಿಣಿಯ ಯಶೋಗಾಥೆ ಕೇಳಿದ್ರೆ ಹುಬ್ಬೇರುತ್ತೆ! Success Story

ಮನೆಯಲ್ಲೇ ಕುಳಿತುಕೊಂಡು ಕೇವಲ 150 ರೂಪಾಯಿಗಳ ಆರಂಭಿಕ ಬಂಡವಾಳದಲ್ಲಿ ಸಣ್ಣದಾಗಿ ಶುರುವಾದ ಇವರ ವ್ಯಾಪಾರ ಇಂದು ಕೋಟ್ಯಂತರ ರೂ. ಮೌಲ್ಯದ ಆಸ್ತಿಯಾಗಿ ಬೆಳೆದು ನಿಂತಿದೆ. ಇವರ ಈ ಸ್ಫೂರ್ತಿದಾಯಕ ಯಶೋಗಾಥೆಯು ಇಂದು ಅನೇಕ ಮಹಿಳೆಯರಿಗೆ ಮಾದರಿಯಾಗಿದೆ.

Success Story : ನಾಲ್ಕು ಗೋಡೆಗಳ ಮಧ್ಯೆ ಸಂಸಾರ ಹಾಗೂ ಮನೆಯ ಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದ ಸಾಧಾರಣ ಗೃಹಿಣಿಯೊಬ್ಬರು ತಮ್ಮ ಕೌಶಲ್ಯದಿಂದ ಅದ್ಭುತ ಸಾಧನೆ ಮಾಡಬಹುದು ಎಂಬುದನ್ನು ಬಿಹಾರದ ಮುಂಗಿಲಾ ಗ್ರಾಮದ ಅಪರ್ಣ ಎಂಬವರು ಸಾಬೀತುಪಡಿಸಿದ್ದಾರೆ. ಮನೆಯಲ್ಲೇ ಕುಳಿತುಕೊಂಡು ಕೇವಲ 150 ರೂಪಾಯಿಗಳ ಆರಂಭಿಕ ಬಂಡವಾಳದಲ್ಲಿ ಸಣ್ಣದಾಗಿ ಶುರುವಾದ ಇವರ ವ್ಯಾಪಾರ ಇಂದು ಕೋಟ್ಯಂತರ ರೂ. ಮೌಲ್ಯದ ಆಸ್ತಿಯಾಗಿ ಬೆಳೆದು ನಿಂತಿದೆ. ಇವರ ಈ ಸ್ಫೂರ್ತಿದಾಯಕ ಯಶೋಗಾಥೆಯು ಇಂದು ಅನೇಕ ಮಹಿಳೆಯರಿಗೆ ಮಾದರಿಯಾಗಿದೆ.

ಆರಂಭದಲ್ಲಿ ಅಪರ್ಣ ಅವರು ತಾವೇ ಧರಿಸಿಕೊಳ್ಳಲು ಪ್ಲಾಸ್ಟಿಕ್ ಬಳೆಗಳ ಮೇಲೆ ರೇಷ್ಮೆ ದಾರಗಳನ್ನು ಸುತ್ತಿ ಆಟಿಕೆ ಹಾಗೂ ಹವ್ಯಾಸಕ್ಕಾಗಿ ಸುಂದರವಾದ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದರು. ಸುಂದರವಾದ ಕಲ್ಲುಗಳು ಹಾಗೂ ಸುಂದರ ಚಿತ್ರಕಲೆಗಳಿಂದ ಕೂಡಿದ ಈ ಕರಕುಶಲ ಕೃತಿಗಳನ್ನು ನೋಡಿದ ನೆರೆಹೊರೆಯವರು ಹಾಗೂ ಸಂಬಂಧಿಕರು ಅಪರ್ಣ ಅವರ ಕೈಚಳಕವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು. ಇದರಿಂದ ಸ್ಫೂರ್ತಿಗೊಂಡ ಅವರು, ತಮ್ಮ ಆಸೆಯನ್ನೇ ಸ್ವಾವಲಂಬನೆಯ ಬಿಜಿನೆಸ್ ಆಗಿ ಪರಿವರ್ತಿಸಲು ನಿರ್ಧರಿಸಿ 'ಅಪರ್ಣ ಆರ್ಟ್ ಅಂಡ್ ಕ್ರಾಫ್ಟ್' (Aparna Art and Craft) ಎಂಬ ಉದ್ಯಮಕ್ಕೆ ನಾಂದಿ ಹಾಡಿದರು.

ಮೂರು ವರ್ಷಗಳ ಹಿಂದೆ ಅಧಿಕೃತವಾಗಿ ಪೂರ್ಣ ಪ್ರಮಾಣದ ಬಿಜಿನೆಸ್ ಆಗಿ ರೂಪುಗೊಂಡ ಈ ಉದ್ಯಮದ ಮೊದಲ ಮಾರಾಟದ ಮೊತ್ತ ಕೇವಲ 150 ರೂಪಾಯಿಗಳು ಮಾತ್ರ ಆಗಿತ್ತು. ಆದರೆ ಇಂದು ಕಷ್ಟದ ಹಾದಿಯನ್ನು ದಾಟಿ ಮುನ್ನಡೆದಿರುವ ಇವರ ವಾರ್ಷಿಕ ವ್ಯಾಪಾರವು ಬರೋಬ್ಬರಿ 8 ರಿಂದ 10 ಲಕ್ಷ ರೂಪಾಯಿಗಳ ಮಟ್ಟಕ್ಕೆ ತಲುಪಿದೆ. ರೇಷ್ಮೆ ದಾರದಿಂದ ತಯಾರಿಸುವ ಆಭರಣಗಳ ಜೊತೆಗೆ ಸೆಣಬಿನ ವಸ್ತುಗಳು ಹಾಗೂ ಮನೆ ಅಲಂಕಾರಿಕ ಉತ್ಪನ್ನಗಳನ್ನು ಸಹ ಇವರು ತಯಾರಿಸುತ್ತಿದ್ದು, ಇವುಗಳಿಂದ ಅತ್ಯುತ್ತಮ ಲಾಭಾಂಶ ಕೂಡ ಸಿಗುತ್ತಿದೆ.

ಅಪರ್ಣ ಅವರ ಉತ್ಪನ್ನಗಳ ವಿಶೇಷತೆಯೆಂದರೆ ಅವೆಲ್ಲವೂ ಸಂಪೂರ್ಣವಾಗಿ ಕೈಯಿಂದಲೇ ತಯಾರಿಸಲ್ಪಟ್ಟ ಕರಕುಶಲ ಕೃತಿಗಳಾಗಿವೆ. ಪ್ಲಾಸ್ಟಿಕ್ ಬಳೆಗಳ ಮೇಲೆ ರೇಷ್ಮೆ ದಾರ ಸುತ್ತುವುದಲ್ಲದೆ, ಕೆಲವು ಆಕರ್ಷಕ ಮಧುಬನಿ ಚಿತ್ರಕಲೆಗಳನ್ನು ಮಣಿಗಳು ಹಾಗೂ ಆಭರಣಗಳ ಮೇಲೆ ಬಿಡಿಸುತ್ತಾರೆ. ಇಂತಹ ವಿಶೇಷ ಮಧುಬನಿ ಪೇಂಟಿಂಗ್ ಜ್ಯುವೆಲರಿ ಸೆಟ್‌ಗಳು ಮಾರುಕಟ್ಟೆಯಲ್ಲಿ 1200 ರಿಂದ 2200 ರೂ.ಗಳವರೆಗೆ ಮಾರಾಟವಾಗುತ್ತವೆ. ಇವು ಅತ್ಯಂತ ಶ್ರಮದಾಯಕವಾಗಿ ತಯಾರಿಸಲ್ಪಡುವುದರಿಂದ ಇಷ್ಟು ಉತ್ತಮ ಬೆಲೆಯನ್ನು ಹೊಂದಿವೆ. ಇತ್ತೀಚೆಗೆ ತಮ್ಮ ತಾಯಿ ತಯಾರಿಸುವ ಕ್ರೋಚೆಟ್ ಉತ್ಪನ್ನಗಳನ್ನೂ ಸಹ ಅವರು ತಮ್ಮ ಬಿಜಿನೆಸ್‌ಗೆ ಸೇರಿಸಿಕೊಂಡಿದ್ದಾರೆ.

ವ್ಯಕ್ತಿಗತ ಅಗತ್ಯಕ್ಕಾಗಿ ಶುರುವಾದ ಈ ಸಣ್ಣ ಕಲ್ಪನೆ ಇಂದು ಬೆಳೆದು 6 ರಿಂದ 7 ಜನರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ವಿಸ್ತರಿಸಿದೆ. ಮನೆಯವರ ಸಹಾಯದಿಂದ ಮನೆಯಿಂದಲೇ ಈ ಉದ್ಯಮ ನಡೆಸುತ್ತಿರುವ ಅಪರ್ಣ, ಪರಿಸರ ಸ್ನೇಹಿ ಉತ್ಪನ್ನಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇವರು ತಯಾರಿಸುವ ಜೂಟ್ ನೆಸ್ಟಿಂಗ್ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದ್ದು, ಪಟನಾ ಸರಸ್ ಮೇಳದಲ್ಲೂ ಇವುಗಳಿಗೆ ದೊಡ್ಡ ಮಟ್ಟದ ಬೇಡಿಕೆ ಬಂದಿತ್ತು. ಪ್ರತ್ಯೇಕ ಅಂಗಡಿ ಹೊಂದಿಲ್ಲದಿದ್ದರೂ ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಮತ್ತು ವಾಟ್ಸ್​ಆ್ಯಪ್​ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಬಳಸಿಕೊಳ್ಳುತ್ತಾ ಮದುವೆ ಹಾಗೂ ಇತರೆ ಶುಭ ಸಮಾರಂಭಗಳಿಗೆ ಬಲ್ಕ್ ಆರ್ಡರ್‌ಗಳನ್ನು ಪಡೆಯುತ್ತಿದ್ದಾರೆ. ತಮ್ಮ ಈ ಏಳುಬೀಳಿನ ಯಶಸ್ಸಿನ ಪಯಣದಲ್ಲಿ ಕಳೆದ ಐದು ವರ್ಷಗಳಿಂದ 'ಜೀವಿಕಾ' ಕಂಪನಿಯು ತಮಗೆ ನೀಡಿದ ಬೆಂಬಲವನ್ನು ಅಪರ್ಣ ಹೆಮ್ಮೆಯಿಂದ ಸ್ಮರಿಸುತ್ತಾರೆ, (ಏಜೆನ್ಸೀಸ್​).