ವಿಧಾನಸಭೆ ಮುತ್ತಿಗೆ ಯತ್ನದ ವೇಳೆ ಪೊಲೀಸರು ಲಾಠಿಚಾರ್ಜ್ ಮತ್ತು ಜಲಫಿರಂಗಿ ಪ್ರಯೋಗ 
ದೇಶ

ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳ ಆಕ್ರೋಶ ಸ್ಫೋಟ: ವಿಧಾನಸಭೆ ಮುತ್ತಿಗೆಗೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್‌–ಜಲಫಿರಂಗಿ ಪ್ರಯೋಗ! Jharkhand Student Protest

ಪ್ರಮುಖ ಮುಖ್ಯಾಂಶಗಳು

  • ಜಾರ್ಖಂಡ್‌ನಲ್ಲಿ ವಿದ್ಯಾರ್ಥಿಗಳ ಆಕ್ರೋಶ ಸ್ಫೋಟ
  • ವಿಧಾನಸಭೆ ಮುತ್ತಿಗೆ ಯತ್ನದ ವೇಳೆ ಪೊಲೀಸರು ಲಾಠಿಚಾರ್ಜ್ ಮತ್ತು ಜಲಫಿರಂಗಿ ಪ್ರಯೋಗ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
ಜಾರ್ಖಂಡ್​: ರಾಜ್ಯದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ, ಜಾರ್ಖಂಡ್​​ನಲ್ಲಿ ನಡೆಯುತ್ತಿರುವ ಪ್ರತಿಭಟನೆ (Jharkhand Student Protest) ಇಂದು (ಸೋಮವಾರ, ಆ.10) ತೀವ್ರಗೊಂಡಿದ್ದು, ವಿಧಾನ ಸಭೆ ಮುತ್ತಿಗೆಗೆ ಯತ್ನಿಸಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್​ ಹಾಗೂ ಜಲ ಫಿರಂಗಿಗಳನ್ನು ಪ್ರಯೋಗಿಸಿದ್ದಾರೆಂದು ತಿಳಿದು ಬಂದಿದೆ.
JPSC, JSSC-CGL ಪರೀಕ್ಷೆಗಳನ್ನು ಭಾರಿ ಬೃಷ್ಟಾಚಾರ ನಡೆದ ಹಿನ್ನಲೆ ವಿದ್ಯಾರ್ಥಿ ನಾಯಕ ದೇವೇಂದ್ರ ಮಹ್ತೊ ನಾಯಕತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದ್ದು, ಇಂದು ವಿಧಾನ ಸಭೆ ಮುತ್ತಿಗೆಗೆ ವಿದ್ಯಾರ್ಥಿಗಳು ಮುಂದಾಗಿದ್ದರು.

ಲಾಠಿ ಚಾರ್ಜ್​, ಜಲ ಫಿರಂಗಿ ಫೈರಿಂಗ್​!

ಕಳೆದ 17 ದಿನಗಳಿಂದ ಜಾರ್ಖಂಡ್​​ನಲ್ಲಿ ನಡೆಯುತ್ತಿರು ಈ ಪ್ರತಿಭಟನೆಗೆ ದೇಶಾದ್ಯಂತ ಬೆಂಬಲ ದೊರೆಯುತ್ತಿದ್ದು, ಸರ್ಕಾರ ಇಲ್ಲಿವರೆಗೆ ಯಾವುದೇ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳದ ಕಾರಣ ಇಂದು ಪ್ರತಿಭಟನಾಕಾರರು, ರಾಂಜಿಯಲ್ಲಿರುವ ವಿಧಾನಸಭೆ ಮುತ್ತಿಗೆಗೆ ಕರೆ ನೀಡಿದ್ದರು.

ಮುಂಜಾಗ್ರತಾ ಕ್ರಮವಾಗಿ, ಪೊಲೀಸರು ವಿಧಾನ ಸಭೆ ಸುತ್ತಲೂ ತಂತಿಯಿಂದ ಕೂಡಿರುವ ಬ್ಯಾರಿಕೇಡ್​ಗಳನ್ನು ಹಾಕಿದ್ದು, ಸ್ಥಳದಲ್ಲಿ ಜಲ ಫಿರಂಗಿ ವಾಹನವನ್ನು ನಿಯೋಜನೆ ಮಾಡಿಕೊಂಡಿದ್ದರು. ಪ್ರತಿಭಟನಾಕಾರರು ವಿಧಾನಸಭೆ ಹತ್ತಿರ ಬರುತ್ತಿದ್ದಂತೆ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್​ ಮಾಡಿದ್ದಾರೆ. ಲಾಠಿ ಚಾರ್ಜ್​ಗೆ ಬೆದರದ ವಿದ್ಯಾರ್ಥಿಗಳ ಮೇಲೆ ಜನ ಫಿರಂಗಿ ಪ್ರಯೋಗವನ್ನು ಕೂಡ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.


ವಿದ್ಯಾರ್ಥಿಗಳ ಆಗ್ರಹವೇನು?

ಕಳೆದ 17 ದಿನಗಳಿಂದ ಪ್ರತಿಭಟನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಕಳೆದ ಕೆಲ ವರ್ಷಗಳಿಂದ JPSC, JPSC-CGL ನಡೆಸುವ ಪರೀಕ್ಷೆಗಳಲ್ಲಿ ಅಕ್ರಮ ನಡೆಯುತ್ತಿದ್ದು, ಹಣಕ್ಕೆ ಹುದ್ದೆಗಳನ್ನು ಮಾರಿದ ಹಲವಾರು ನಿದರ್ಶನಗಳಿವೆ.

ಹೀಗಾಗಿ ಈ JPSC, JPSC-CGL ಸಂಸ್ಥೆಗಳನ್ನು ಮೊದಲು ಕಿತ್ತುಹಾಕಬೇಕು, ಪರೀಕ್ಷೆಗಳನ್ನು ಮತ್ತೊಮ್ಮೆ ನಡೆಸಬೇಕು ಹಾಗೂ ಈ ಕುರಿತು ಸಿಬಿಐ ತನಿಖೆ ನಡೆಸಬೇಕೆನ್ನುವುದು ಈ ವಿದ್ಯಾರ್ಥಿಗಳ ಆಗ್ರಹವಾಗಿದೆ,

(ಏಜನ್ಸೀಸ್​).