ವಿಜಯ್ ರಾಜ್ಯಪಾಲ ಅರ್ಲೇಕರ್ ಅವರನ್ನು ಭೇಟಿಯಾಗಿರುವುದು. 
ದೇಶ

ಸರ್ಕಾರ ರಚನೆಯ ಹಗ್ಗ-ಜಗ್ಗಾಟ; ಎರಡನೇ ಬಾರಿ ರಾಜ್ಯಪಾಲರನ್ನು ಭೇಟಿಯಾಗಿ ಹಕ್ಕು ಮಂಡಿಸಿದ ದಳಪತಿ ವಿಜಯ್ | Thalapathy Vijay

ಚೆನ್ನೈ: ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆಗೆ ಸರ್ಕಾರ ರಚಿಸಲು ಅವಕಾಶ ಕೊಡುವಂತೆ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಕಳೆದ 24 ಗಂಟೆಯಲ್ಲಿ ಟಿವಿಕೆ ಮುಖ್ಯಸ್ಥ ಮತ್ತು ನಟ ದಳಪತಿ ವಿಜಯ್, ಇಂದು ಎರಡನೇ ಬಾರಿ ಭೇಟಿಯಾಗಿ ಮತ್ತೊಮ್ಮೆ ತಮ್ಮ ಹಕ್ಕನ್ನು ಮಂಡಿಸಿದ್ದು, ಸದನದಲ್ಲಿ ತಮ್ಮ ಬೆಂಬಲವನ್ನು ತೋರಿಸುವುದಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರ ಆಹ್ವಾನದ ಮೇರೆಗೆ ಲೋಕಭವನಕ್ಕೆ ತೆರಳಿದ್ದ ವಿಜಯ್, ಟಿವಿಕೆಗೆ ಔಪಚಾರಿಕವಾಗಿ ಬೆಂಬಲ ನೀಡಿದ ಐದು ಕಾಂಗ್ರೆಸ್ ಶಾಸಕರು ಸೇರಿದಂತೆ 113 ಶಾಸಕರ ಬೆಂಬಲ ಪತ್ರಗಳನ್ನು ಸಲ್ಲಿಸಿದ್ದಾರೆ. ಸದನದಲ್ಲಿ 118 ಶಾಸಕರ ಬೆಂಬಲವನ್ನು ತೋರಿಸುವುದಾಗಿ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಲೆ ಹಿರಿಯ ಟಿವಿಕೆ ನಾಯಕರು ವಿಜಯ್ ಅವರೊಂದಿಗೆ ಇದ್ದರು.
ಹಾಗೆಯೇ ಇಂದು ವಿಜಯ್ ಅವರು ಚೆನ್ನೈನಲ್ಲಿ ಪಕ್ಷದ ಚುನಾಯಿತ ಶಾಸಕರ ಪ್ರಮುಖ ಸಭೆ ನಡೆಯಲಿದ್ದು, ಸರ್ಕಾರ ರಚನೆ ಕುರಿತುಮತ್ತು ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ. ಏಪ್ರಿಲ್ 23ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದುಕೊಂಡಿತು. ಯಾವುದೇ ಪಕ್ಷ ಬಹುಮತ ಪಡೆಯದೇ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಮುಂದೆ ಏನು ನಡೆಯಲಿದೆ ಕಾದು ನೋಡಬೇಕಿದೆ (ಏಜೆನ್ಸೀಸ್).