ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವಿವಾದ 
ದೇಶ

ಶೃಂಗೇರಿ ಕ್ಷೇತ್ರದ ಅಂಚೆ ಮತ ವಿವಾದ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ;​ ಶಾಸಕನಾಗಿ ರಾಜೇಗೌಡ ಮುಂದುವರಿಕೆ! Supreme Court

ಪ್ರಮುಖ ಮುಖ್ಯಾಂಶಗಳು

  • ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವಿವಾದ
  • ಬಿಜೆಪಿಯ ಡಿ.ಎನ್​. ದೇವರಾಜ್​ ನೂತನ ಶಾಸಕ ಎಂದಿದ್ದ ಕರ್ನಾಟಕ ಹೈಕೋರ್ಟ್​
  • ಹೈಕೋರ್ಟ್​ ತೀರ್ಪಗೆ ತಡೆನೀಡಿ ಟಿ.ಡಿ. ರಾಜೇಗೌಡ ಶಾಸಕನಾಗಿ ಮುಂದುವರಿಯಲಿ ಎಂದ ಸುಪ್ರೀಂ ಕೋರ್ಟ್​
ನವದೆಹಲಿ: ಕರ್ನಾಟಕ ರಾಜ್ಯದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತಎಣಿಕೆ ಪ್ರಕ್ರಿಯೆಯಲ್ಲಿ ವ್ಯತ್ಯಯ ಉಂಟಾದ ಹಿನ್ನಲೆ ವಿಜೇತ ಕಾಂಗ್ರೆಸ್​ ಅಭ್ಯರ್ಥಿ ಟಿ.ಡಿ ರಾಜೇಗೌಡ ಬದಲಿಗೆ ಪರಾಜಿತ ಬಿಜೆಪಿ ಅಭ್ಯರ್ಥಿ ಡಿ.ಎನ್​. ಜೀವರಾಜ್​ ಅವರನ್ನು ಶಾಸಕನೆಂದು ಹೈಕೋರ್ಟ್​ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ (Supreme Court)​ ತಡೆ ನೀಡಿ, ಟಿ.ಡಿ ರಾಜೇಗೌಡ ಅವರೇ ಶಾಸಕರಾಗಿ ಮುಂದುವರಿಯಲಿದ್ದಾರೆ ಎಂದು ಆದೇಶಿಸಿದೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಅಂಚೆ ಮತಗಳ ಎಣಿಕೆಯಲ್ಲಿ ವ್ಯತ್ಯಾಸ ಉಂಟಾಗಿ ತಾನು ಸೋತಿದ್ದೆನೆಂದು ಬಿಜೆಪಿ ಅಭ್ಯರ್ಥಿ ಡಿ.ಎನ್​. ಜೀವರಾಜ್​ ಸತತ ಎರಡೂವರೆ ವರ್ಷ ಕಾನೂನು ಹೋರಾಟ ನಡೆಸಿ ಮೇ.7 2026 ರಲ್ಲಿ ಹೈಕೋರ್ಟ್​ ಡಿ.ಎನ್​. ಜೀವರಾಜ್​ ನಿಜವಾದ ಗೆದ್ದ ಅಭ್ಯರ್ಥಿ ಎಂದು ಹೇಳಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ ಕಾಂಗ್ರೆಸ್​ ಅಭ್ಯರ್ಥಿ ಟಿ.ಡಿ ರಾಜೇಗೌಡ ಪರವಾಗಿ ಈಗ ತೀರ್ಪು ಹೊರಬಿದ್ದಿದ್ದು, ಯಥಾಸ್ಥಿತಿ ಕಾಪಾಡಿ ಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯದ ಸಂಜಯ್ ಕುಮಾರ್ ಮತ್ತು ವಿನೋದ್ ಚಂದ್ರ ನೇತೃತ್ವದ ಪೀಠ ತಿಳಿಸಿದೆ.

2023 ರ ವಿಧಾನಸಭಾ ಚುನಾವಣೆ

2023 ರಲ್ಲಿ ನಡೆದಿದ್ದ ಶೃಂಗೇರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಟಿ.ಡಿ ರಾಜೇಗೌಡ ಅಭ್ಯರ್ಥಿಯಾಗಿದ್ದರೆ, ಬಿಜೆಪಿ ಪರ ಅಂದಿನ ಹಾಲಿ ಎಮ್​ಎಲ್​ಎ ಡಿ.ಎನ್​. ಜೀವರಾಜ್​ ಕಣಕ್ಕಿಳಿದ್ದಿದ್ದರು. ಫಲಿತಾಂಶ ಹೊರಬಿದ್ದಾಗ ಟಿ.ಡಿ ರಾಜೇಗೌಡ ಕೇವಲ 201 ಮತಗಳ ಅಂತರದಲ್ಲಿ ಡಿ.ಎನ್​. ಜೀವರಾಜ್​ ಅವರನ್ನು ಸೋಲಿಸಿ ಶಾಸಕರಾಗಿದ್ದರು. ಈ ಸೋಲಿನಲ್ಲಿ ಮೋಸ ನಡೆದಿದೆ ಎಂದು ಆರೋಪಿಸಿದ್ದ ಡಿ.ಎನ್​. ಜೀವರಾಜ್​ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು, (ಏಜನ್ಸೀಸ್​).