ಸ್ಪೈಡರ್ ಮ್ಯಾನ್ 
ದೇಶ

ಭಾರತದಲ್ಲಿ ಸ್ಪೈಡರ್‌-ಮ್ಯಾನ್ ಅಬ್ಬರ; 11 ದಿನದಲ್ಲಿ 500 ಕೋಟಿ ಗಳಿಕೆ | Spider-Man

ಮಂಜುನಾಥ್ ಹಾಲವರ್ತಿ

ಪ್ರಮುಖ ಮುಖ್ಯಾಂಶಗಳು

  • ಭಾರತದಲ್ಲಿ ಸ್ಪೈಡರ್‌-ಮ್ಯಾನ್​ಗೆ ಭರ್ಜರಿ ರೆಸ್ಪಾನ್ಸ್​
  • 11 ದಿನದಲ್ಲೇ 500 ಕೋಟಿ ರೂ. ಗಳಿಸಿದ ಸಿನಿಮಾ
  • ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್​
ಹೈದರಾಬಾದ್: ಟಾಮ್ ಹಾಲೆಂಡ್ ಅಭಿನಯದ ‘ಸ್ಪೈಡರ್‌ ಮ್ಯಾನ್ ಬ್ರಾಂಡ್ ನ್ಯೂ ಡೇ’ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬಿಡುಗಡೆಯಾದ 11 ದಿನದಲ್ಲೇ ಸಿನಿಮಾ 500 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ.
ಈ ಚಿತ್ರ ಭಾರತ ನೆಟ್ ಕಲೆಕ್ಷನ್ 415 ಕೋಟಿ ರೂಪಾಯಿಗೂ ಹೆಚ್ಚು ಎನ್ನಲಾಗಿದೆ. ಮೊದಲ ವಾರದಲ್ಲೇ ಗಳಿಕೆ ಮಾಡಿದ್ದ ಸಿನಿಮಾ, 2ನೇ ವಾರದಲ್ಲೂ ತನ್ನ ಓಟವನ್ನು ಮುಂದುವರಿಸಿದೆ. ಈ ಮೂಲಕ ‘ಬ್ರಾಂಡ್ ನ್ಯೂ ಡೇ’ ಭಾರತದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಹಾಲಿವುಡ್ ಸಿನಿಮಾಗಳ ಪೈಕಿ ಹೊಸ ಸೌಂಡ್​ ಮಾಡಿದೆ. ಈ ಹಿಂದೆ ‘ಅವತಾರ್ ದಿ ವೇ ಆಫ್ ವಾಟರ್’ ಮತ್ತು ‘ಅವೆಂಜರ್ಸ್ ಎಂಡ್‌ಗೇಮ್’ ಸಿನಿಮಾಗಳು ಭಾರತದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದವು.

ಕನ್ನಡ ಸೇರಿ ಹಲವು ಭಾಷೆಗಳಲ್ಲಿ ರಿಲೀಸ್​

ಚಿತ್ರದ ಯಶಸ್ಸಿಗೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿರುವುದು ಕೂಡ ಪ್ರಮುಖ ಕಾರಣ ಎನ್ನಲಾಗಿದೆ. ಇಂಗ್ಲಿಷ್, ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ದೇಶಾದ್ಯಂತ ಸ್ಪೈಡರ್‌ಮ್ಯಾನ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಹೀಗಾಗಿ ಸ್ಪೈಡರ್‌-ಮ್ಯಾನ್ ದೇಶದ ಮೂಲೆ-ಮೂಲೆಯ ಜನರನ್ನು ತಲುಪಿದ್ದಾನೆ.

ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್

ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ‘ಸ್ಪೈಡರ್ ಮ್ಯಾನ್ ಬ್ರಾಂಡ್ ನ್ಯೂ ಡೇ’ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ವಿಶ್ವದಾದ್ಯಂತ ಸುಮಾರು 14,000 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಸತತವಾಗಿ ಭಾರೀ ಕಲೆಕ್ಷನ್ ಮಾಡುತ್ತಿರುವ ಈ ಸಿನಿಮಾ, ಮುಂದಿನ ದಿನಗಳಲ್ಲಿ ಇನ್ನಷ್ಟು ದಾಖಲೆ ಬರೆಯುತ್ತಾ ಎಂಬ ಕುತೂಹಲ ಮೂಡಿಸಿದೆ,(ಏಜೆನ್ಸೀಸ್​).